ಪ್ರತಿಭಟನೆಯ ವೇಳೆ ರೈತರು ಮೃತಪಟ್ಟಿದ್ದಕ್ಕೆ ದಾಖಲೆಗಳಿಲ್ಲ; ಧನ ಸಹಾಯ ನೀಡಲು ನಿರಾಕರಿಸಿದ ಕೇಂದ್ರ ಸರಕಾರ

0
279

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದಿಲ್ಲಿಯ ಗಡಿಯಲ್ಲಿ ರೈತರು ಕೃಷಿ ಕಾನೂನು ಪ್ರತಿಭಟನೆ ವೇಳೆ ಮೃತಪಟ್ಟಿದ್ದಕ್ಕೆ ಕೇಂದ್ರ ಸರಕಾರದ ಬಳಿ ದಾಖಲೆಗಳಿಲ್ಲ ಆದುದರಿಂದ ಧನಸಹಾಯ ನೀಡಲಾಗದು ಎಂದು ಕೃಷಿ ಸಚಿವರು ಹೇಳಿದರು. ಪ್ರತಿಭಟನೆಯ ವೇಳೆ ಮೃತಪಟ್ಟ ಕುಟುಂಬಗಳಿಗೆ ಧನಸಹಾಯ ನೀಡಲಾಗುವುದೇ ಎಂದು ಪ್ರತಿಪಕ್ಷದ ಪ್ರಶ್ನೆಗಳಿಗೆ ಪಾರ್ಲಿಮೆಂಟಿನಲ್ಲಿ ಬರಹದ ಮೂಲಕ ಉತ್ತರ ನೀಡಲಾಗಿದೆ.

ಕೃಷಿ ಸಚಿವಾಲಯದ ಬಳಿ ಇದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳಿಲ್ಲ. ಆದುದರಿಂದ ಈ ಪ್ರಶ್ನೆ ಎತ್ತಬೇಕಾದ ಅಗತ್ಯವಿಲ್ಲ ಎಂದು ಕೃಷಿ ಸಚಿವರು ಹೇಳಿದರು.

ಕೃಷಿ ಸಚಿವರ ಹೇಳೀಕೆಯ ವಿರುದ್ಧ ಪ್ರತಿಪಕ್ಷಗಳು ಪ್ರತಿಭಟಿಸಿದವು. ಕೊರೋನ ಎರಡನೇ ಅಲೆಯಲ್ಲಿ ಆಕ್ಸಿಜನ್ ಲಭಿಸದೆ ದೇಶದಲ್ಲಿ ಯಾರು ಮೃತಪಟ್ಟಿಲ್ಲ ಎಂದು ಕೇಂದ್ರ ಸರಕಾರ ವಾದಿಸಿತ್ತು. ಇಂತಹದೇ ವಾದ ಇದು.

ಕೇಂದ್ರ ಸರಕಾರಕ್ಕೆ ಮೂರು ಕೃಷಿ ಕಾನೂನು ಹಿಂಪಡೆಯಬೇಕೆಂದು ಒತ್ತಾಯಿಸಿ ಒಂದು ವರ್ಷದಿಂದ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು ಈ ಸಂದರ್ಭದಲ್ಲಿ 700ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದಾರೆ. ಕಳೆದ ಸೋಮವಾರ ಮೂರು ಕೃಷಿ ಕಾನೂನನ್ನು ಸರಕಾರ ಹಿಂಪಡೆದುಕೊಂಡಿತ್ತು.

ಚರ್ಚೆ ಮಾಡದೆಯೇ ನಿಮಿಷಗಳೊಳಗೆ ಕಾನೂನು ಹಿಂಪಡೆಯಲಾಗಿದೆ. ಎಂಎಸ್‍ಪಿ, ಲಖೀಂಪುರ ಖೇರಿ ರೈತರ ಕೊಲೆ, ರೈತರ ಸಾವು ಮೊದಲಾದುದನ್ನು ಚರ್ಚಿಸಲು ನಾವು ಬಯಸುತ್ತೇವೆ. ಆದರೆ ದುರದೃಷ್ಟವಶಾತ್‍ ಸರಕಾರ ಚರ್ಚೆಗೆ ಅನುಮತಿಸಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.

ಇದೇವೇಳೆ ರೈತರ ಕಾನೂನುಗಳ ಹಿಂಫಡೆದರೂ ರೈತ ಸಂಘಟನೆಗಳು ಬೇರೆ ಎತ್ತಲಾದ ವಿಷಯದಲ್ಲಿ ಪರಿಹಾರ ಸಿಗಬೇಕು ನಂತರವೇ ಪ್ರತಿಭಟನೆ ಹಿಂಪಡೆಯುವುದು ಎಂದು ಹೇಳುತ್ತಿವೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ರೈತರ ಮೇಲೆ ಹಾಕಿದ ಕೇಸು ಹಿಂಪಡೆಯುವುದು ಪ್ರತಿಭಟನೆಯ ವೇಳೆ ಮೃತಪಟ್ಟಿರುವ ರೈತರ ಕುಟುಂಬಗಳಿಗೆ ಧನಸಹಾಯ ಕೊಡುವುದು ಕಿಸಾನ್ ಮೋರ್ಚಾದ ಬೇಡಿಕೆಯಾಗಿದೆ.