ಭೀಮ ಕೋರೆಗಾಂವ್ ಪ್ರಕರಣ: ಗೌತಮ್ ನವ್‌ಲಾಖ್ ಬಂಧನಕ್ಕೆ ಕೋರ್ಟು ತಡೆ

0
424

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.4: ಭೀಮ ಕೊರೆಗಾಂವ್ ಪ್ರಕರಣದಲ್ಲಿ ಮಾನವಹಕ್ಕು ಕಾರ್ಯಕರ್ತ ಗೌತಮ್ ನವ್‌ಲಾಖ್‌ರವರ ಬಂಧನಕ್ಕೆ ಸುಪ್ರೀಂಕೋರ್ಟು ಮಧ್ಯಂತರ ತಡೆ ವಿಧಿಸಿದ್ದು ಅಕ್ಟೋಬರ್ ಹದಿನೈದರವರೆಗೆ ಅವರನ್ನು ಬಂಧಿಸುವಂತಿಲ್ಲ ಎಂದು ತಿಳಿಸಿದೆ.

ಈ ಸಂದರ್ಭದಲ್ಲಿ, ಕೇಸಿಗೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸಲು ಮಹಾರಾಷ್ಟ್ರ ಪೊಲೀಸರಿಗೆ ಕೋರ್ಟು ಆದೇಶಿಸಿದೆ. ಮುಂಬೈ ಹೈಕೋರ್ಟು, ನವ್‌ಲಾಖ್‌ರವರ ಬಂಧನಕ್ಕೆ ಮೂರು ವಾರಗಳ ತಡೆಯಾಜ್ಞೆ ನೀಡಿತ್ತು. ಇಂದಿಗೆ ಅವಧಿ ಮುಗಿದಿದ್ದು ಇದನ್ನು ನವ್‌ಲಾಖ್ ಪರ ವಕೀಲರು ಕೋರ್ಟಿಗೆ ಮನವರಿಕೆ ಮಾಡಿಕೊಟ್ಟ ಬಳಿಕ ಕೋರ್ಟು ತಡೆ ಆಜ್ಞೆ ನೀಡಿದೆ.

“ತಾನು ಯಾವುದೇ ನಿಷೇಧಿತ ಸಂಘಟನೆಯ ಸದಸ್ಯನಲ್ಲ ಎಂದೂ ನಾಗರಿಕ ಹಕ್ಕುಗಳ ವಿಷಯವನ್ನು ಮಾತ್ರ ಎತ್ತಿದ್ದೇನೆ” ಎಂದೂ ಅವರು ನ್ಯಾಯಾಲಯದಲ್ಲಿ ತಿಳಿದ್ದರು.

ಭೀಮ ಕೊರೆಗಾಂವ್ ಪ್ರತಿಭಟನೆಯ ನಂತರ ಮಾನವ ಹಕ್ಕು ಕಾರ್ಯಕರ್ತರ ವಿರುದ್ಧ ಮಹಾರಾಷ್ಟ್ರ ಸರಕಾರ ಹೊರಿಸಿದ ಪ್ರಕರಣಗಳನ್ನು ರದ್ದು ಪಡಿಸಬೇಕೆಂಬ ಅರ್ಜಿಯಿಂದ ಸುಪ್ರೀಂಕೋರ್ಟಿನ ಐದನೇ ಜಡ್ಜ್ ಕೂಡ ಹಿಂದೆ ಸರಿದಿದ್ದಾರೆ.

ಮಾನವ ಹಕ್ಕು ಕಾರ್ಯಕರ್ತರ ವಿರುದ್ಧ ಯುಎಪಿಎ ಕಾನೂನು ಹೇರಲಾಗಿದ್ದು, ಇದನ್ನು ಪ್ರಶ್ನಿಸಿ ನವ್‌ಲಾಖ್ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ತನ್ನ ವಿರುದ್ಧ ಮಹಾರಾಷ್ಟ್ರ ಸರಕಾರದ ಕೇಸನ್ನು ರದ್ದು ಪಡಿಸಬೇಕೆಂದು ಸುಪ್ರೀಂಕೋರ್ಟಿನ ಮೊರೆ ಹೋದಾಗ ಪ್ರಕರಣದ ವಿಚಾರಣೆಯಿಂದ ಎಸ್.ರವೀಂದ್ರ ಭಟ್ ಹಿಂದೆ ಸರಿದಿರುವುದಾಗಿ ತಿಳಿಸಿದ್ದಾರೆ.