ಸನ್ಮಾರ್ಗ ನ್ಯೂಸ್
ಪಾಟ್ನಾ: ನಿತೀಶ್ ಕುಮಾರ್ ವಿರುದ್ಧ ತೀವ್ರ ವಿಮರ್ಶೆಯೊಂದಿಗೆ ತೇಜಸ್ ಯಾದವ್ ಕಣಕ್ಕಿಳಿದಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಹಿಂದೆ ನಿತೀಶ್ ವಿರುದ್ಧ ಆರೋಪಿಸಿದ ವಿಚಾರಗಳನ್ನು ಮುಂದಿಟ್ಟು ತೇಜಸ್ವಿ ಟ್ವೀಟ್ ಮಾಡಿದ್ದಾರೆ.
ನಿತೀಶ್ ಸರಕಾರ 30,000 ಕೋಟಿಗೂ ಹೆಚ್ಚು ಮೌಲ್ಯದ 60ರಷ್ಟು ಭ್ರಷ್ಟಾಚಾರದಲ್ಲಿ ಪಾಲುದಾರರಾಗಿದ್ದಾರೆಂದು ತೇಜಸ್ವಿ ಆರೋಪಿಸಿದರು. ಇದು ಈ ಮೊದಲೇ ಮೋದಿ ಸೂಚಿಸಿದ ವಿಷಯಗಳಾಗಿವೆ. ಐದು ವರ್ಷದ ಹಿಂದೆ ಚುನಾವಣಾ ಪ್ರಚಾರದಲ್ಲಿ ನಿತೀಶ್ ವಿರುದ್ದ ಮೋದಿ ತೀವ್ರ ಆರೋಪ ಹೊರಿಸಿದ್ದರು. ಅಂದು ನಿತೀಶ್ ಸ್ಪರ್ಧೆ ಮಹಾಮೈತ್ರಿ ಭಾಗವಾಗಿತ್ತು. ನಿತೀಶ್ ಸರಕಾರ ಭ್ರಷ್ಟ ಸರಕಾರ ಎಂದು ಮೋದಿ ವ್ಯಾಪಕವಾಗಿ ಪ್ರಚಾರಪಡಿಸಿದ್ದರೂ ಕೂಡ ಯಾವುದೇ ಫಲ ಕಂಡಿರಲಿಲ್ಲ.
ಈ ಬಾರಿ ಮೋದಿ ಇಷ್ಟೊಂದು ಭ್ರಷ್ಟಾಚಾರ ಆರೋಪ ಹೊರಿಸಿದ ನಿತೀಶ್ ಕುಮಾರ್ರನ್ನೇ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಇದು ಬಿಜೆಪಿಯನ್ನು ಸಂಕಷ್ಟಕ್ಕೀಡಾಗಿಸುತ್ತಿದೆ. ರಾಜ್ಯ ಸರಕಾರಕ್ಕೆ ಸಂಬಂಧಿಸಿದ 30ಕ್ಕೂ ಹೆಚ್ಚು ಭ್ರಷ್ಟಾಚಾರ ಪ್ರಕರಣಗಳಿರಬಹುದು ಎಂದು 2015ರಲ್ಲಿ ಮೋದಿ ಆರೋಪಿಸಿದ್ದರು. ಇವೆಲ್ಲವೂ ನಿತೀಶ್ರ ಸಾನಿಧ್ಯದಲ್ಲೇ ನಡೆಯುತ್ತಿದೆ ಎಂದು ತೇಜಸ್ವಿ ಹೇಳಿದರು. ರಾಜ್ಯ ಸರಕಾರಕ್ಕೆ ಸಂಬಂಧಿಸಿದಂತೆ 60 ಭ್ರಷ್ಟಾಚಾರ ಪ್ರಕರಣಗಳಿವೆ. ಅವುಗಳ ಪೈಕಿ 33ನ್ನು ಈ ಹಿಂದೆ ಮೋದಿ ಹೇಳಿದ್ದಾಗಿದೆ. ಐದು ವರ್ಷಗಳ ಮೊದಲೇ ಇದು ನಡೆಯುತ್ತಿದೆ ಎಂದೂ ತೇಜಸ್ವಿ ಸೂಚಿಸಿದರು.
ಬಿಹಾರದ ಜನತೆಗೆ ಈ ವಿಚಾರ ತಿಳಿದಿದೆ. ಆದರೂ ಮೋದಿಯವರ ಭಾಷಣದೊಂದಿಗೆ ನಾನು ಮತ್ತೊಮ್ಮೆ ನೆನಪಿಸುತ್ತಿದ್ದೇನೆ. ಎಂಜಿನಿಯರಿಂಗ್ ಕಾಲೇಜ್, ಔಷಧಿ, ಮಧ್ಯ ಮಾರಾಟ ಸೇರಿದಂತೆ ಹಲವು ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದಾಗಿತ್ತು ಮೋದಿ ಐದು ವರ್ಷಗಳ ಹಿಂದೆ ಆರೋಪಿಸಿದ್ದು. ನಿತೀಶ್ ಕುಮಾರ್ರನ್ನು ಸಾಕಷ್ಟು ಪ್ರಮಾಣದಲ್ಲಿ ಬೆಂಬಲಿಸಲು ಬಿಜೆಪಿಯೂ ಹಿಂದೆ ಮುಂದೆ ನೋಡುತ್ತಿದೆ. ನಿತೀಶ್ರನ್ನು ಜೊತೆಗಿರಿಸಿಕೊಂಡಲ್ಲಿ ತಮ್ಮ ಪಕ್ಷ ಧೂಳೀಪಟವಾಗಬಹುದೋ ಎಂಬ ಭೀತಿಯೂ ಬಿಜೆಪಿಗಿದೆ.
ಬಿಜೆಪಿಯ ಹಲವು ನಾಯಕರು ನಿತೀಶ್ರ ಚುನಾವಣಾ ಪ್ರಚಾರ ರ್ಯಾಲಿಗಳಲ್ಲಿ ಗೈರಾಗಿದ್ದರು. ಕೊನೆಯ ಘಳಿಗೆಯಲ್ಲಿ ನಿತೀಶ್ ಪರ ಬ್ಯಾಟಿಂಗ್ಗೆ ಪ್ರಧಾನಿ ಮೋದಿ ಕೂಡ ಆಗಮಿಸಿದ್ದರು. ಸುಶೀಲ್ ಕುಮಾರ್ ಮೋದಿ ಮತ್ತು ರವಿಶಂಕರ್ ಪ್ರಸಾದ್ ಜೆಡಿಯು ಪರ ಬೃಹತ್ ಪ್ರಚಾರ ನಡೆಸಿದ್ದರು. ತೇಜಸ್ವಿ ಯಾದವ್ ಯುವಕರ ನಡುವೆ ತರಂಗವಾಗಿ ಗುರುತಿಸಿಕೊಳ್ಳುತ್ತಿದ್ದಾರೆ.












