ಸನ್ಮಾರ್ಗ ವಾರ್ತೆ
ನವದೆಹಲಿ,ನ.1: ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿ ಒಂದು ಸಾಧನೆ ಎಂದು ಪಾಕಿಸ್ತಾನದ ಮಂತ್ರಿಯೊಬ್ಬರು ಹೇಳಿದ ನಂತರ ಕಾಂಗ್ರೆಸ್ ಕ್ಷಮೆಯಾಚಿಸಬೇಕೆಂದು ಪ್ರಕಾಶ್ ಜಾವಡೇಕರ್ ಆಗ್ರಹಿಸಿದ್ದರು.
ಅವರ ಬೇಡಿಕೆಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರಶ್ನಿಸಿದ್ದು, “ನಾನು ಕಾಂಗ್ರೆಸ್ ಯಾವುದಕ್ಕಾಗಿ ಕ್ಷಮೆಯಾಚಿಸಬೇಕಾದದ್ದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತೇನೆ. ನಮ್ಮ ಸೈನಿಕರನ್ನು ಸರ್ಕಾರ ಸುರಕ್ಷಿತವಾಗಿಡಬೇಕೆಂದು ನಿರೀಕ್ಷಿಸಿದ್ದಕ್ಕೋ?, ರಾಷ್ಟ್ರೀಯ ದುರಂತವನ್ನು ರಾಜಕೀಯಗೊಳಿಸುವುದಕ್ಕಿಂತ ಹೆಚ್ಚಾಗಿ ಧ್ವಜವನ್ನು ಹಿಡಿದು ರ್ಯಾಲಿಗಳನ್ನು ನಡೆಸಿದ್ದಕ್ಕೋ? ” ಎಂಬುದಾಗಿ ಅವರು ಮರುಪ್ರಶ್ನೆಯನ್ನಿರಿಸಿದರು.












