ತಮಿಳುನಾಡು| ಮುಖ್ಯಮಂತ್ರಿ ಅಭ್ಯರ್ಥಿಯ ಕುರಿತು ಬಿಜೆಪಿ-ಅಣ್ಣಾ ಡಿಎಂಕೆ ನಡುವೆ ತೀವ್ರ ವಿವಾದ

0
441

ಸನ್ಮಾರ್ಗ ವಾರ್ತೆ

ಚೆನ್ನೈ,ಡಿ.31: ತಮಿಳುನಾಡು ಮುಖ್ಯಮಂತ್ರಿ ಅಭ್ಯರ್ಥಿಯ ಕುರಿತು ಬಿಜೆಪಿ ಮತ್ತು ಅಣ್ಣಾ ಡಿಎಂಕೆ ನಡುವೆ ವಿವಾದ ತಾರಕಕ್ಕೇರಿದ್ದು ವಿಧಾನಸಭಾ ಚುನಾವಣೆ ಮುಗಿದ ಬಳಿಕ ಎನ್‍ಡಿಎ ಸಭೆ ಸೇರಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ತೀರ್ಮಾನಿಸಬೇಕೆಂದು ತಮಿಳ್ನಾಡಿನ ಬಿಜೆಪಿ ಘಟಕ ಹೇಳಿದೆ. ತಮಿಳ್ನಾಡಿನ ಹೊಣೆಯಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಬುಧವಾರ ಈ ಹೇಳಿಕೆ ನೀಡಿದ್ದು ವಿವಾದಕ್ಕೆ ಆಸ್ಪದವಾಗಿದ್ದರೂ ಅರಿಯುಲ್ಲೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಈ ನಿಲುವನ್ನು ಪುನರುಚ್ಚರಿಸಿದೆ. ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಎಡಪ್ಪಾಡಿ ಪಳನಿಸ್ವಾಮಿಯವರನ್ನು ಮೊದಲೇ ಘೋಷಿಸಲಾಗಿದ್ದು ಪಾರ್ಟಿ ಪ್ರಚಾರದೊಂದಿಗೆ ಮುಂದೆ ಸಾಗಲಿದೆ ಎಂದು ಎಡಿಎಂಕೆ ಸಂಚಾಲಕ ಉಪಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಹೇಳಿದ್ದಾರೆ.

ಬಿಜೆಪಿ, ಅಣ್ಣಾಡಿಎಂಕೆ ಸಹಿತ ಎನ್‍ಡಿಎಯ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಜೆಪಿ ಕೇಂದ್ರ ನಾಯಕತ್ವ ಘೋಷಿಸಲಿದೆ ಎಂದು ಬಿಜೆಪಿ ತಮಿಳ್ನಾಡು ಘಟಕ ಹೇಳಿಕೆ ನೀಡಿದ್ದು ವಿವಾದವಾಗಿತ್ತು. ತಮಿಳ್ನಾಡಿನಲ್ಲಿ ಎನ್‍ಡಿಎ ಸರಕಾರ ಬರಲಿದ್ದು ಬಿಜೆಪಿ ನಾಯಕ ಎ.ರಾಜಾ ಮುಂತಾದವರು ಸಚಿವರಾಗಲಿದ್ದಾರೆ ಎಂದು ಬಿಜೆಪಿ ಹೇಳಿಕೆಯು ಅಣ್ಣಾ ಡಿಎಂಕೆಯ ಕೋಪಕ್ಕೆ ಕಾರಣವಾಗಿದೆ. ಇದನ್ನೆಲ್ಲ ಎಡಿಎಂಕೆ ತಳ್ಳಿಹಾಕಿದ್ದು ಎಡಪ್ಪಾಡಿ ಪಳನಿಸ್ವಾಮಿ ತಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಿದೆ.

ಇದೇ ವೇಳೆ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಪ್ರಚಾರಕ್ಕಿಳಿದದ್ದೂ ಎನ್‍ಡಿಎಯೊಳಗೆ ಅಸಮಾಧನಕ್ಕೆ ಕಾರಣವಾಗಿದೆ. ಬಿಜೆಪಿ, ಡಿಎಂಡಿಕೆ, ಪಟ್ಟಾಳಿ ಮಕ್ಕಳ್ ಕಚ್ಚಿ ಸೇರಿಸದೆ ಎಡಿಎಂಕೆ ಸ್ವತಂತ್ರವಾಗಿ ಚುನಾವಣಾ ಪ್ರಚಾರ ನಡೆಸುತ್ತಿದ್ದು, ಇದು ಎನ್‍ಡಿಎಯೊಳಗೆ ತೀವ್ರ ಅಸಮಾಧಾನವನ್ನು ಸೃಷ್ಟಿಸಿದೆ.