ಸನ್ಮಾರ್ಗ ವಾರ್ತೆ
ಭೋಪಾಲ,ಜೂ.26: ಪೆಟ್ರೊಲ್, ಡೀಸೆಲ್ ಬೆಲೆ ಹೆಚ್ಚಳದಿಂದ ಸಿಕ್ಕ ಲಾಭವನ್ನು ಉಪಯೋಗಿಸಿ ಬಿಜೆಪಿ ಶಾಸಕರನ್ನು ಖರೀದಿಸುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದಿಂದ ಲಾಭ ಪೆಟ್ರೋಲ್ ಬಂಕ್ ಮಾಲಕರಿಗೂ, ಪೆಟ್ರೋಲಿಯಂ ಕಂಪೆನಿಗಳಿಗೂ ಕೇಂದ್ರ ಸರಕಾರಕ್ಕೂ ಹೋಗುತ್ತಿದೆ. ಈ ಲಾಭದಲ್ಲಿ ಬಿಜೆಪಿ ಶಾಸಕರನ್ನು ಖರೀದಿಸುತ್ತಿದೆ ಎಂದು ದಿಗ್ವಿಜಯ್ ಸಿಂಘ್ ಎಎನ್‍ಐ ಸುದ್ದಿ ಸಂಸ್ಥೆಯೊಂದಿಗೆ ಹೇಳಿದ್ದಾರೆ.ರೈತರು,ಕಾರ್ಮಿಕರು, ಬಡವರ ಕಿಸೆ ಖಾಲಿ ಮಾಡುವಾಗ ಶ್ರೀಮಂತರ ಕಿಸೆ ದಪ್ಪವಾಗುತ್ತಿದೆ ಎಂದು ಅವರು ಕುಟುಕಿದರು.
ನಿರಂತರ 20ನೆ ದಿವಸ ದೇಶದಲ್ಲಿ ಇಂಧನ ಬೆಲೆ ಹೆಚ್ಚಳವಾಗಿದೆ. ಡೀಸೆಲ್‍ಗೆ 17 ಪೈಸೆ ಹೆಚ್ಚಿದ್ದು 80.19 ರೂಪಾಯಿ ಆಗಿದೆ. ಪೆಟ್ರೋಲ್‍ಗೆ 21 ಪೈಸೆ ಹೆಚ್ಚಳವಾಗಿದ್ದು 80.13 ರೂಪಾಯಿಯಾಗಿದೆ. ಕಳೆದ ದಿವಸ ದಿಲ್ಲಿಯಲ್ಲಿ ಡೀಸೆಲ್ ಬೆಲೆ ಪೆಟ್ರೋಲ್‍ಗಿಂತ ಹೆಚ್ಚು ಇತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಕ್ಕೆ ಬೆಲೆ ಹೆಚ್ಚಿದ್ದು, ಭಾರತದಲ್ಲಿ ತೈಲ ಬೆಲೆ ಹೆಚ್ಚಳಕ್ಕೆ ಕಾರಣವೆಂದು ತೈಲ ಕಂಪೆನಿಗಳು ಹೇಳುತ್ತಿವೆ.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












