ಕಾಂಗ್ರೆಸ್‍ಗೆ ಮತ ಹಾಕಿದ ದ್ವೇಷದಲ್ಲಿ ಸಹೋದರನಿಗೆ ಮೂರು ಬಾರಿ ಗುಂಡು ಹಾರಿಸಿ ಕೊಲ್ಲಲು ನೋಡಿದ ಬಿಜೆಪಿ ನಾಯಕ

0
578

ಚಂಡಿಗಡ,ಮೇ 15: ಕಾಂಗ್ರೆಸ್‍ಗೆ ಮತಹಾಕಿದ ಮಲ ಸಹೋದರನ ಮೇಲೆ ಬಿಜೆಪಿ ನಾಯಕನೊಬ್ಬ ಕೋವಿಯೆತ್ತಿದ ಘಟನೆ ಹರ್ಯಾಣದ ಝಾಜರ್ ಜಿಲ್ಲೆಯಲ್ಲಿ ಘಟನೆ ನಡೆಯಿತು. ರಾಜಾ ಸಿಂಗ್ ಎಂಬವರಿಗೆ ಬಿಜೆಪಿ ನಾಯಕ ಎರಡು ಬಾರಿ ಕಾಲಿಗೆ ಮತ್ತು ಒಂದು ಬಾರಿ ಹೊಟ್ಟೆಗೆ ಗುಂಡು ಹಾರಿಸಿದ್ದು ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಜೆಪಿ ಮಂಡಲ ಹೊಣೆಯಿರುವ ಬಿಜೆಪಿ ನಾಯಕ ಧರ್ಮೇಂದರ್ ಸಿಲಾನಿ ಗುಂಡು ಹಾರಿಸಿ ಭೂಗತನಾಗಿದ್ದಾನೆ. ಈತನ ವಿರುದ್ಧ ಕೊಲೆ ಯತ್ನ ಮತ್ತು ಅಕ್ರಮ ಆಯುಧ ಹೊಂದಿದ ಕೇಸು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಿಜೆಪಿಗೆ ಮತ ಹಾಕಬೇಕೆಂದು ರಾಜಾಸಿಂಗ್ ಮತ್ತು ಅವರ ಕುಟುಂಬಕ್ಕೆ ಧರ್ಮೇಂದರ್ ಹೇಳಿದ್ದನು. ಆದರೆ ಪ್ರಾದೇಶಿಕ ಕಾಂಗ್ರೆಸ್ ನಾಯಕರಾದ ಹರೇಂದರ್ ಸಿಂಗ್ ಹೇಳಿದ ಪ್ರಕಾರ ರಾಜಾ ಕಾಂಗ್ರೆಸ್‍ಗೆ ಮತಹಾಕಿದರು. ಇದು ಧರ್ಮೇಂದರ್‍‌ನ ದ್ವೇಷಕ್ಕೆ ಕಾರಣವಾಗಿದೆ.