ಇಂದೋರ್, ಜೂ. 27: ಬಿಜೆಪಿ ಹಿರಿಯ ನಾಯಕ ಕೈಲಾಶ್ ವಿಜಯವರ್ಗೀಯರ ಪುತ್ರ ಮಧ್ಯಪ್ರದೇಶದ ಇಂದೋರ್ ಶಾಸಕ ಆಕಾಶ್ ವಿಜಯವರ್ಗೀಯರು ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗೆ ಹೊಡೆದಿದ್ದಾರೆ. ಬುಧವಾರ ಕ್ರಿಕೆಟ್ ಬ್ಯಾಟ್ನಲ್ಲಿ ಆಕಾಶ್ ಮತ್ತು ಸಂಗಡಿಗರು ಹಲ್ಲೆ ನಡೆಸಿದರು.
ಘಟನೆ ನಡೆಯುವಾಗ ಅಲ್ಲಿದ್ದ ಪೊಲೀಸರು ಅಧಿಕಾರಿಯನ್ನು ರಕ್ಷಿಸಲು ಮುಂದಾದರೂ ಶಾಸಕ ಮತ್ತು ಸಂಗಡಿಗರು ಹಿಂದೆ ಸರಿದಿಲ್ಲ. ಅನಧಿಕೃತ ಒತ್ತುವರಿಯ ವಿರುದ್ಧ ದಾಳಿ ಮಾಡಿದ್ದನ್ನು ಪ್ರಶ್ನಿಸಿ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಯ ಮೇಲೆ ದಾಳಿಮಾಡಿದ್ದಾರೆ. ಘಟನೆಯ ಸಂಪೂರ್ಣ ವೀಡಿಯೊ ಬಹಿರಂಗಗೊಂಡಿದೆ. ಘಟನೆಯನ್ನು ಶಾಸಕ ಆಕಾಶ್ ವಿಜಯವರ್ಗೀಯ ಸಮರ್ಥಿಸಿಕೊಂಡಿದ್ದು ಮುಂದೆಯೂ ತಮ್ಮಿಂದ ಇಂತಹ ಕ್ರಮಗಳು ಖಂಡಿತ ನಡೆಯಲಿದೆ ಎಂದು ಹೇಳಿದ್ದಾರೆ.












