ವಿದೇಶಿಯ ಗರ್ಭದಲ್ಲಿ ಹುಟ್ಟಿದವರಿಂದ ದೇಶ ಪ್ರೇಮ ಸಾಧ್ಯವಿಲ್ಲ: ರಾಹುಲ್ ಗಾಂಧಿ ಕುರಿತು ಪ್ರಜ್ಞಾಸಿಂಗ್ ವಿವಾದಿತ ಹೇಳಿಕೆ

0
568

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜೂ.29: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ವಿರುದ್ಧ ಬಿಜೆಪಿ ನಾಯಕಿ ಭೋಪಾಲ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿವಾದಿತ ಹೇಳಿಕೆ ನೀಡಿದ್ದಾರೆ. ವಿದೇಶಿಯ ಪುತ್ರನಿಗೆ ಎಂದೂ ದೇಶಪ್ರೇಮಿಯಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. “ಓರ್ವ ವಿದೇಶಿ ಮಹಿಳೆಯ ಗರ್ಭದಲ್ಲಿ ಹುಟ್ಟಿದ ವ್ಯಕ್ತಿಗೆ ದೇಶ ಪ್ರೇಮಿಯಾಗಲು ಸಾಧ್ಯವಿಲ್ಲ. ಮಣ್ಣಿನ ಮಗನಿಗೆ ಮಾತ್ರ ತಾಯ್ನಾಡನ್ನು ಸಂರಕ್ಷಿಸಲು ಸಾಧ್ಯ ಎಂದು ಚಾಣಕ್ಯ ಹೇಳಿದ್ದಾನೆ” ಎಂದು ಅವರು ಹೇಳಿದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯ ವಿರುದ್ಧ ಪ್ರಜ್ಞಾ ಹೇಳಿಕೆ ನೀಡಿದ್ದು, ಎರಡು ದೇಶದ ಪೌರತ್ವ ಇರುವ ವ್ಯಕ್ತಿಯಿಂದ ದೇಶ ಪ್ರೇಮವನ್ನು ನಿರೀಕ್ಷಿಸುವುದು ಹೇಗೆ ಎಂದು ಪ್ರಜ್ಞಾ ಕೇಳಿದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.