ಸನ್ಮಾರ್ಗ ವಾರ್ತೆ
ಕರಾಚಿ,ಜೂ.29: ಪಾಕಿಸ್ತಾನದ ಸ್ಟಾಕ್ ಎಕ್ಸ್ಚೇಂಜ್ ಮೇಲೆ ಬಂದೂಕುಧಾರಿಗಳಿಂದಾದ ದಾಳಿಯಲ್ಲಿ ನಾಲ್ವರನ್ನು ಸುರಕ್ಷಾ ಸೇನೆ ಕೊಂದು ಹಾಕಿದೆ ಮತ್ತು ಇಬ್ಬರು ನಾಗರಿಕರೂ ಮೃತಪಟ್ಟಿದ್ದಾರೆ. ಸೋಮವಾರ ಬೆಳಗ್ಗೆ ಹತ್ತು ಗಂಟೆಗೆ ಘಟನೆ ನಡೆದಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸ್ಟಾಕ್ ಎಕ್ಸೇಂಜ್ನ ಗೇಟಿನ ಸಮೀಪ ಭಯೋತ್ಪಾದಕರು ಗ್ರೆನೆಡ್ ಎಸೆದು ದಿಗ್ಭ್ರಮೆ ಹುಟ್ಟುಹಾಕಿದ ಬಳಿಕ ಮುಖ್ಯ ಕಟ್ಟಡಕ್ಕೆ ಬಂದು ಗುಂಡು ಹಾರಿಸಿದರೆಂದು ಡಾನ್ ಪತ್ರಿಕೆ ವರದಿ ಮಾಡಿದೆ. ಪೊಲೀಸ್ ಸರ್ಜನ್ ಡಾ. ಖರಾರ್ ಅಹ್ಮದ್ ಅಬ್ಬಾಸಿಯವರ ವರದಿ ಪ್ರಕಾರ ಐವರ ಮೃತದೇಹ ಪತ್ತೆಯಾಗಿದೆ. ಏಳು ಮಂದಿಗೆ ಘಟನೆಯಲ್ಲಿ ಗಾಯಗಳಾಗಿವೆ. ಆದರೆ, ಈವರೆಗೂ ಅಧಿಕೃತ ದೃಢೀಕರಣ ಬಂದಿಲ್ಲ.
ಗಾಯಾಳುಗಳನ್ನು ಕರಾಚಿಯ ಸಿವಿಲ್ ಆಸ್ಪತ್ರೆಗೆ ಸೇರಿಸಲಾಗಿದೆ. ಭಯೋತ್ಪಾದಕರಿಂದ ಗ್ರೆನೆಡ್ ಮತ್ತು ಇತರ ಆಯುಧಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಲವು ಖಾಸಗಿ ಬ್ಯಾಂಕುಗಳ ಕೇಂದ್ರ ಕಚೇರಿಯಿರುವ ಸ್ಟಾಕ್ ಎಕ್ಸ್ಚೇಂಜ್ ಸಮೀಪದಲ್ಲಿ ಗುಂಡುಹಾರಾಟ ನಡೆದಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












