ಬೊಳ್ಳಾಯಿ: ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ 30 ಪವನ್ ಬಂಗಾರದ ಹಾರ ಇದ್ದ ಬ್ಯಾಗ್ ಕಾಣೆ: ಕುಟುಂಬದ ಮನವಿ

0
217

ಸನ್ಮಾರ್ಗ ವಾರ್ತೆ

ಮಂಗಳೂರು : ಕಳೆದ ಸುಮಾರು 15 ದಿನಗಳಿಂದ ಬೊಳ್ಳಾಯಿಯ ಒಂದು ಕುಟುಂಬ ಕಳೆದು ಹೋದ ಚಿನ್ನದ ಹಿನ್ನೆಲೆಯಲ್ಲಿ ತೀವ್ರ ಆತಂಕದಲ್ಲಿರುವ ಮಾಹಿತಿ ಬಂದಿದೆ. ಅಕ್ಟೋಬರ್ 13ರಂದು ಪಡಿಕಲ್ ನಿಂದ ಇರಾಮಂಚಿ ರಸ್ತೆಯ ಮೂಲಕ ಬೊಳ್ಳಾಯಿಗೆ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ 30 ಪವನ್ ಬಂಗಾರದ ಹಾರ ಇದ್ದ ಬ್ಯಾಗ್ ಕಳೆದುಹೋಗಿದೆ. ಇದರ ಮಾರುಕಟ್ಟೆ ಬೆಲೆ ಸುಮಾರು 50 ಲಕ್ಷ ರೂಪಾಯಿ ಅಧಿಕವಿದೆ. ಆದರೆ ಈವರೆಗೂ ಈ ಕಳೆದು ಹೋದ ಬಂಗಾರ ಮರಳಿ ಸಿಕ್ಕದೆ ಇರುವುದು ಈ ಕುಟುಂಬವನ್ನು ಸಂಕಟಕ್ಕೆ ತಳ್ಳಿದೆ. ಭಾರಿ ಮೊತ್ತದ ಬಂಗಾರ ಇದಾಗಿರುವುದರಿಂದ ಮನೆಯಲ್ಲಿ ತೀವ್ರ ನೋವಿದೆ ಮತ್ತು ಆ ಮಹಿಳೆ ಭಾವನಾತ್ಮಕವಾಗಿ ಕುಗ್ಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಮುಡಿಪು ದೇರಳಕಟ್ಟೆ ಮಂಜನಾಡಿ ಇರ ಮಂಚಿ ಭಾಗದಲ್ಲಿ ಈ ಬ್ಯಾಗ್ ಬಿದ್ದಿರುವ ಸಾಧ್ಯತೆ ಇದೆ ಎಂದು ಮಹಿಳೆಯ ಕುಟುಂಬ ಹೇಳಿದೆ.

ಸಿಕ್ಕಿದವರು ಅದನ್ನು ತಂದು ಕೊಟ್ಟರೆ ಅವರ ಹೆಸರನ್ನು ಗುಪ್ತವಾಗಿ ಇಡಲಾಗುವುದು ಮತ್ತು ಅವರಿಗೆ ಬಹುಮಾನವನ್ನು ನೀಡಲಾಗುವುದು ಎಂದು ಮಹಿಳೆಯ ಕುಟುಂಬ ತಿಳಿಸಿದೆ. ಬಂಗಾರ ಇದ್ದ ಬಾಗ್ ಸಿಕ್ಕಿದವರು 9108966715, 9902683497 ಸಂಖ್ಯೆಗೆ ತಿಳಿಸುವಂತೆ ಕುಟುಂಬ ಕೋರಿದೆ.