ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.30: ಉತ್ತರ ಪ್ರದೇಶದ ಹತ್ರಸ್‍ನಲ್ಲಿ ಸವರ್ಣೀಯರು ಕ್ರೂರವಾಗಿ ಅತ್ಯಾಚಾರ ಮಾಡಿ ಕೊಲೆಯೆಸಗಿದೆ ದಲಿತ ಬಾಲಕಿಯ ಪರ ನ್ಯಾಯಕ್ಕಾಗಿ ಪ್ರಖ್ಯಾತ ಬಾಕ್ಸರ್ ವಿಜೇಂದರ್ ಸಿಂಗ್ ಧ್ವನಿಯೆತ್ತಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾದ ಬಿಜೆಪಿ ಶಾಸಕರಂತಹವರನ್ನು ಬೆಟ್ಟು ಮಾಡಿ ವಿಜೇಂದರ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
“ಉತ್ತರ ಪ್ರದೇಶದ ಬಿಜೆಪಿ ಶಾಸಕ ಕುಲ್‍ದೀಪ್ ಸೇಂಗರ್ ನೆನಪಿಲ್ವೇ?. ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಗಳಿಗಾಗಿ ಅಧಿಕಾರದಲ್ಲಿ ಕೂತವರು ದೊಡ್ಡ ಪರಿಶ್ರಮ ಮಾಡಿದರು. ಇಂತಹ ಕಾರಣಗಳಿಂದ ಅತ್ಯಾಚಾರ ಘಟನೆಗಳು ಹೆಚ್ಚುತ್ತಿವೆ. ಯಾವುದೇ ಹೆದರಿಕೆಯಿಲ್ಲದೇ ನಮ್ಮ ನಿರ್ಭಯಾರನ್ನು ಕೊಲ್ಲಲಾಗುತ್ತಿದೆ. ಮೋದಿ ಬೆಂಬಲಿತ ಮಾಧ್ಯಮಗಳು ಮೌನವಾಗಿ ನೋಡುತ್ತಿವೆ” ಎಂದು ವಿಜೇಂದರ್ ಹೇಳಿದರು.
ಕಳೆದ ದಿನ ಇಡೀ ದೇಶದಲ್ಲಿ ನಡೆದ ಭಾರತ ಬಂದ್‍ಗೆ ಈ ಹಿಂದೆ ವಿಜೇಂದರ್ ಬೆಂಬಲ ಘೋಷಿಸಿದ್ದರು. ಕೃಷಿಯನ್ನು ರಕ್ಷಿಸಲು ಪೊಲೀಸರೊಂದಿಗೆ ಘರ್ಷಣೆ ನಡೆಸಬೇಕಾದ ಸ್ಥಿತಿ ಇದೆಂದು ಅವರು ಹೇಳಿದ್ದರು.
2008ರ ಬೀಜಿಂಗ್ ಒಲಿಂಪಿಕ್ಸ್, 2009ರ ವಿಶ್ವ ಚಾಂಪಿಯನ್ ಶಿಪ್‍ನಲ್ಲಿ ಬೆಳ್ಳಿ ಪದಕ ವಿಜೇತರಾದ ವಿಜೇಂದರ್ 75 ಕಿಲೊ ಗ್ರಾಂ ವಿಭಾಗದಲ್ಲಿ ವಿಶ್ವದ ಮಾಜಿ ನಂಬರ್ ವನ್ ತಾರೆ ಕೂಡ ಆಗಿದ್ದಾರೆ. ನಂತರ ಅವರು ಪ್ರೊಫೆಷನಲ್ ಬಾಕ್ಸಿಂಗ್‍ಗೆ ಹೋಗಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ದಿಲ್ಲಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಜೇಂದರ್ ಸ್ಪರ್ಧಿಸಿ ಸೋಲುಂಡಿದ್ದರು. ಆದರೂ ರಾಜಕೀಯದಿಂದ ಹಿಂದೆ ಸರಿದಿಲ್ಲ. ರಾಹುಲ್ ಗಾಂಧಿ ಸಹಿತ ಕಾಂಗ್ರೆಸ್ ನಾಯಕರೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ.












