ಬಿಹಾರ ವಿಧಾನಸಭಾ ಚುನಾವಣೆ: ಪಪ್ಪು ಯಾದವ್, ಭೀಮ್ ಆರ್ಮಿ ಮೈತ್ರಿ

0
620

ಸನ್ಮಾರ್ಗ ವಾರ್ತೆ

ಪಾಟ್ನ,ಸೆ. 30: ಬಿಹಾರ ವಿಧಾನಸಭಾ ಚುನಾವಣೆಯ ಮೂರನೆ ರಂಗವೊಂದು ರೂಪುಗೊಂಡಿದೆ. ಪಪ್ಪುಯಾದವ್‍ರ ಜನ್ ಅಧಿಕಾರ್ ಪಾರ್ಟಿ, ಚಂದ್ರಶೇಖರ್ ಆಝಾದ್‍ರ ಆಝಾದ್ ಸಮಾಜ್ ಪಾರ್ಟಿ, ಬಿಎಂಪಿ ಮತ್ತು ಸೋಶಿಯಲ್ ಡೆಮಕ್ರಾಟಿಕ್ ಪಾರ್ಟಿ ಆಫ ಇಂಡಿಯಾ ಎಸ್‍ಡಿಪಿಐ) ಸೇರಿ ಪಿಡಿಎ ಪ್ರೊಗ್ರೆಸ್ಸಿವ್ ಡೆಮಕ್ರಾಟಿಕ್ ಅಲಯನ್ಸ್‌ಗೆ ರೂಪು ನೀಡಿದೆ.

ತಾನು ಆರ್‌ಎಲ್‌ಸಿಪಿಯ ಅಧ್ಯಕ್ಷ ಉಪೇಂದ್ರ ಕುಶ್ವಾಹರ ಜೊತೆ ಕೂಡ ಚರ್ಚಿಸಿದ್ದೇನೆ. ಅವರನ್ನೂ ಈ ರಂಗಕ್ಕೆ ಸ್ವಾಗತಿಸುತ್ತಿದ್ದು ಎರಡು ದಿನಗಳಲ್ಲಿ ಅವರ ಪಾರ್ಟಿ ಈ ರಂಗವನ್ನು ಸೇರಲಿದೆ ಎಂದು ಪಪ್ಪು ಯಾದವ್ ಹೇಳಿದ್ದಾರೆ. ಜೊತೆಗೆ ಎಲ್‍ಜೆಪಿ ಮತ್ತು ಕಾಂಗ್ರೆಸ್ಸನ್ನು ಕೂಡಾ ಸ್ವಾಗತಿಸಿದ್ದಾರೆ. ಎನ್‍ಡಿಎಯ ಮೂವತ್ತು ವರ್ಷಗಳ ಮಹಾ ಪಾಪ ಈಗ ಕೊನೆಗೊಳ್ಳಲಿದೆ ಎಂದು ಪಪ್ಪು ಯಾದವ್ ಹೇಳಿದರು.

ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಎಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಯುತ್ತದೆ. ಅಲ್ಲಿಗೆ ಹೋಗುವೆ. ಈ ಮೈತ್ರಿಕೂಟವನ್ನು ಕೋಮು ಶಕ್ತಿಗಳು ಮತ್ತು ಕೋಮು ಹಿಂಸೆಯನ್ನು ತಡೆಯುವುದಕ್ಕಾಗಿ ರಚಿಸಲಾಗಿದೆ ಎಂದು ಚಂದ್ರಶೇಖರ್ ಆಝಾದ್ ಹೇಳಿದರು.