BPL ಕಾರ್ಡ್ ಗೆ ಆನ್ ಲೈನ್ ಅರ್ಜಿ ಸಲ್ಲಿಸುವ ಮುನ್ನ ಇದು ತಪ್ಪದೇ ಓದಿ…

0
1026

ಸನ್ಮಾರ್ಗ ವಾರ್ತೆ

ಮಂಗಳೂರು: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವತಿಯಿಂದ ನೀಡಲಾಗುವ ಬಿಪಿಎಲ್ ಕಾರ್ಡ್ ಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಮುನ್ನ ಇದು ತಪ್ಪದೇ ಓದಿ. ಯಾಕೆಂದರೆ ತಪ್ಪು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದರೆ ಜೈಲಿಗೆ ಹೋಗಬೇಕಾದೀತು..

ಅನರ್ಹರು ಹೊಂದಿರುವ ಬಿಪಿಎಲ್ ಪಡಿತರ ಚೀಟಿಯನ್ನು ಸ್ವಯಂಪ್ರೇರಿತವಾಗಿ ಸಂಬಂಧಪಟ್ಟ ಕಛೇರಿಗೆ ಹಿಂದಿರುಗಿಸಿ, ಎಪಿಎಲ್ ಪಡಿತರ ಚೀಟಿಯನ್ನು ಇದೇ ಫೆಬ್ರವರಿ ಅಂತ್ಯದೊಳಗೆ ಪಡೆಯಬೇಕು. ತಪ್ಪಿದ್ದಲ್ಲಿ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಪಡಿತರ ಚೀಟಿ ಪಡೆದು ದುರ್ಲಾಭ ಪಡೆಯುತ್ತಿರುವ ಪಡಿತರ ಚೀಟಿಯನ್ನು ಅನರ್ಹಗೊಳಿಸಿ ದಂಡ ವಸೂಲಿ ಮಾಡುವುದರ ಜೊತೆಗೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಕಾನೂನು ಬಾಹಿರ ಹಾಗೂ ದಂಡನಾರ್ಹರು ಯಾರೆಲ್ಲಾ? ಓದಿ…

  • ಸರಕಾರಿ ನೌಕರರು/ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಖಾಸಗಿ ನೌಕರರು/ಸರಕಾರಿ ಅನುದಾನಿತ ನೌಕರರು/ನಿಗಮ/ಮಂಡಳಿಗಳು/ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ/ಸೇವಾ ತೆರಿಗೆ/ಜಿ.ಎಸ್.ಟಿ/ ವೃತ್ತಿತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು
  • ಗ್ರಾಮೀಣ ಪ್ರದೇಶದಲ್ಲಿ 3ಹೆಕ್ಟರ್ ಒಣ ಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು
  • ನಗರ ಪ್ರದೇಶದಲ್ಲಿ 1000ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು
  • ಜೀವನೋಪಾಯಕ್ಕಾಗಿ ಸ್ವತ: ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್, ಮ್ಯಾಕ್ಸಿ ಕ್ಯಾಬ್, ಟ್ಯಾಕ್ಸಿ, ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಕುಟುಂಬಗಳು
  • ನಿವೃತ್ತ ನೌಕರರು ಹಾಗೂ ಕುಟುಂಬದ ವಾರ್ಷಿಕ ಆದಾಯವು 1.20ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು
  • ಒಂದೇ ಕುಟುಂಬದಲ್ಲಿ ಒಟ್ಟಿಗೆ ವಾಸಿಸುತ್ತಿದ್ದರೂ ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಪಡೆದಿರುವವರಿಗೆ ಬಿಪಿಎಲ್ ಪಡಿತರ ಚೀಟಿ ಹೊಂದಿರುವುದು ಕಾನೂನು ಬಾಹಿರ ಹಾಗೂ ದಂಡನಾರ್ಹವಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆಯಲ್ಲಿ ತಿಳಿಸಿದೆ.

APL ಮತ್ತು BPL ರೇಷನ್ ಕಾರ್ಡ್ ಗೆ ಆನ್ ಲೈನ್ ನಲ್ಲಿ ಉಚಿತ ಸೇವೆ ಲಭ್ಯ:

BPLಗೆ ಬೇಕಿರುವ ಅರ್ಹತೆ ಮತ್ತು ದಾಖಲೆಗಳು:

👉ಕುಟುಂಬದ ಎಲ್ಲಾ ಸದಸ್ಯರು ಫಿಂಗರ್ ಫ್ರಿಂಟ್ ನೀಡಲು ಹಾಜರಿರಬೇಕು. & ಆಧಾರ್ ಕಾರ್ಡ್ ತರಬೇಕು.
👉ಆಧಾರ್ ಕಾರ್ಡ್ ನಲ್ಲಿ ನಮೂದಿಸಿರುವ ಮೊಬೈಲನ್ನು ತರಬೇಕು.
👉 BPL ಕಾರ್ಡ್ ಯಾರ ಹೆಸರಲ್ಲಿ ಮಾಡುವುದು ಅವರ ಹೆಸರಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಬೇಕು.
👉 ಆಧಾರ್ ಕಾರ್ಡ್ ನಲ್ಲಿ ಮನೆಯ ಎಲ್ಲಾ ಸದಸ್ಯರ ವಿಳಾಸ ಒಂದೇ ರೀತಿ ಇರತಕ್ಕದ್ದು.
👉 5 ವರ್ಷದ ಕೆಳಗಿನ ಮಕ್ಕಳ Birth Certificate ಇರಬೇಕು.

🔰ವಿ.ಸೂ: ಹಳೆಯ ರೇಷನ್ ಕಾರ್ಡ್ ಇದ್ದಲ್ಲಿ ಜೊತೆಗೆ ತರಬೇಕು.

★★★
APL ಗೆ ಬೇಕಿರುವ ಅರ್ಹತೆ ಮತ್ತು ದಾಖಲೆಗಳು:
👉 ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ತರಬೇಕು.
👉ಆಧಾರ್ ಕಾರ್ಡ್ ನಲ್ಲಿ ನಮೂದಿಸಿರುವ ಮೊಬೈಲನ್ನು OTP ಪಡೆಯಲು ತರಬೇಕು‌.
👉 ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್ ನಮೂದಿಸದಿದ್ದರೆ ಆಧಾರ್ ಕಾರ್ಡ್ ಕೇಂದ್ರಕ್ಕೆ ಹೋಗಿ ನಮೂದಿಸಿ, ತಿದ್ದುಪಡಿ ಮಾಡಿಸಿದ ಬಳಿಕ ತರಬೇಕು.
👉 ಆಧಾರ್ ಕಾರ್ಡ್ ನಲ್ಲಿ ಮನೆಯ ಎಲ್ಲಾ ಸದಸ್ಯರ ವಿಳಾಸ ಒಂದೇ ರೀತಿಯಲ್ಲಿ ಇರಬೇಕು.

ಮಾಹಿತಿಗಾಗಿ & ಆನ್ ಲೈನ್ ಸೇವೆಗಾಗಿ ಸಂಪರ್ಕಿಸಿ:
ಸಮಾಜ ಸೇವಾ ಘಟಕ,
ಜಮಾಅತೆ ಇಸ್ಲಾಮೀ ಹಿಂದ್,
ಹಿದಾಯತ್ ಸೆಂಟರ್,
ಬೀಬಿ ಅಲಾಬಿ ರಸ್ತೆ, ಬಂದರ್,
ಮಂಗಳೂರು- 575 001
Mobile: 8722760795

ಕಚೇರಿ ಸಮಯ:
ಬೆಳಗ್ಗೆ 10 ರಿಂದ ಸಂಜೆ 5:30 ರವರೆಗೆ