ಬ್ರೆಝಿಲ್ ನಲ್ಲಿ ಭ್ರಷ್ಟಾಚಾರ ಆರೋಪದ ಬಿಸಿ; ಡಿಲ್ಮಾರ ಬಳಿಕ ಇದೀಗ ಮೈಕಲ್ ಟೆರ್ಮನ್‍ ಸರದಿ

0
531

ಬ್ರೆಝಿಲ್‍ನ ಮಾಜಿ ಅಧ್ಯಕ್ಷ ಮೈಕಲ್ ಟೆರ್ಮನ್‍ರನ್ನು ಬಂಧಿಸಲಾಗಿದೆ. ಭ್ರಷ್ಟಾಚಾರ ಆರೋಪದ ಹೆಸರಿನಲ್ಲಿ ಬಂಧನ ನಡೆದಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ. 2016ರಿಂದ 2018ರವರೆಗೆ ಅವರು ಬ್ರೆಝಿಲ್ ಅಧ್ಯಕ್ಷರಾಗಿದ್ದರು.

ಆಪರೇಷನ್ ಕಾರ್‍ವಾಷ್ ಎಂಬ ಭ್ರಷ್ಟಾಚಾರ ತನಿಖೆಯ ವೇಳೆ ಮೈಕಲ್ ಟರ್ಮರ್ ಭ್ರಷ್ಟಾಚಾರವೆಸಗಿದ್ದಾರೆ ಎಂದು ಪತ್ತೆಯಾಗಿದೆ. ಬ್ರೆಝಿಲ್‍ನ ಮೊದಲ ಮಹಿಳಾ ಅಧ್ಯಕ್ಷೆ ದಿಲ್ಮಾ ರುಸೆಫ್‍ರ ವಿರುದ್ಧ ಭ್ರಷ್ಟಾಚಾರ ಆರೋಪದಲ್ಲಿ ಸೆನೆಟ್ ಇಂಫೀಚ್‍ಮೆಂಟ್ ಮಾಡಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿತ್ತು. ಅವರಿಂದ ತೆರವಾದ ಸ್ಥಾನಕ್ಕೆ ಮೈಕಲ್ ಟರ್ಮನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಧ್ಯಕ್ಷನಾಗಿದ್ದ ಸಮಯದಲ್ಲಿ ಅಧಿಕಾರ ದುರುಪಯೋಗ ಮಾಡಿ ಭ್ರಷ್ಟಾಚಾರ ವೆಸಗಿದ್ದಾರೆಂದು ಟರ್ಮರ್ ವಿರುದ್ಧ ಪ್ರಕರಣ ದಾಖಲಾಗಿದೆ.

ರಿಯೊ ಡಿಜನೈರೊದ ಅಂಗ್ರ ನ್ಯೂಕ್ಲಿಯರ್ ಪ್ಲಾಂಟ್ ಯೋಜನೆಗೆ ಮೀಸಲಿರಿಸಿದ ಹಣದಲ್ಲಿ ಕಬಳಿಕೆ ನಡೆಸಿದ್ದಾರೆಂದು ಪ್ರಾಸಿಕ್ಯೂಶನ್ ಟರ್ಮನ್‍ರ ವಿರುದ್ಧ ರೋಪ ಹೊರಿಸಿದೆ. ಆದರೆ ಟರ್ಮನ್ ಆರೋಪಗಳನ್ನು ನಿರಾಕರಿಸಿದ್ದಾರೆ.

ಸಾರ್ವಜನಿಕ ಸಂಸ್ಥೆಯಾ ಪೆಟ್ರೊಬೊಸ್ ತೈಲ ಕಂಪೆನಿಯಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಹಲವಾರು ರಾಜಕೀಯ ಪ್ರಮುಖರು ಬ್ರೆಝಿಲ್‍ನಲ್ಲಿ ಬಂಧನಕ್ಕೊಳಗಾಗಿದ್ದಾರೆ. ಈ ತನಿಖೆಯ ಭಾಗವಾಗಿ ಆಪರೇಷನ್ ಕಾರ್ವಾಶ್ ತನಿಖಾ ತಂಡವನ್ನು ನೇಮಕಗೊಳಿಸಿ ತನಿಖೆ ನಡೆಸಲಾಗಿತ್ತು. ಇದೇವೇಳೆ ಈಗಿನ ಬ್ರೆಝಿಲ್ ಅಧ್ಯಕ್ಷರ ವಿರುದ್ಧ ಕೂಡ ಸೆನೆಟ್ ಭ್ರಷ್ಟಾಚಾರ ಆರೋಪಿಸಿದೆ.