14ನೇ ಬ್ರಿಕ್ಸ್ ಶೃಂಗಸಭೆ‌: ಪ್ರಧಾನಿ ಮೋದಿಯನ್ನು ಆಹ್ವಾನಿಸಿದ ಚೀನ

0
221

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಹದಿನಾಲ್ಕನೇ ಬ್ರಿಕ್ಸ್ ಶ್ರಂಗಸಭೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಚೀನ ಆಹ್ವಾನಿಸಿದೆ. ಚೀನ ಬ್ರಿಕ್ಸ್ ಶೃಂಗಸಭೆಗೆ ಆತಿಥ್ಯ ನೀಡುತ್ತಿದ್ದು, ಜೂನ್ 23, 24ಕ್ಕೆ ವಚ್ರ್ಯುವಲ್ ಆಗಿ ನಡೆಯಲಿದೆ.

ಉಕ್ರೇನ್‍ನ ರಷ್ಯ ಅತಿಕ್ರಮಣದ ನಂತರ ಆಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಭೆ ನಡೆಯುತ್ತಿದ್ದು, ಆದರೆ ಭಾರತ- ಚೀನಗಳ ನಡುವೆ ಗಡಿ ವಿವಾದ ಊರ್ಜಿತದಲ್ಲಿದೆ.

ಜಾಗತಿಕ ಅಭಿವೃದ್ಧಿಗೆ ಆದ್ಯತೆ ಇರುವ ಸಭೆಯಲ್ಲಿ ಭಯೋತ್ಪಾದನೆ, ವ್ಯಾಪಾರ, ಆರೋಗ್ಯ, ಪರಿಸರ, ವಿಜ್ಞಾನ-ತಂತ್ರಜ್ಞಾನ ವಿಷಯಗಳು, ಕೃಷಿ, ಸಣ್ಣಕೈಗಾರಿಕೆ, ಕೊರೋನ, ಜಾಗತಿಕ ಆರ್ಥಿಕತೆ ಕುರಿತು ಬ್ರಿಕ್ಸ್ ದೇಶಗಳು ಪರಸ್ಪರ ಸಹಕರಿಸುವ ಕುರಿತು ಚರ್ಚೆ ನಡೆಯಲಿದೆ.

ಕಳೆದ ವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಬ್ರಿಕ್ಸ್ ದೇಶಗಳ ಸುರಕ್ಷಾ ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು. ಭಯೋತ್ಪಾದನೆಯನ್ನು ಪ್ರತಿರೋಧಿಸಲು ದೇಶಗಳು ಪರಸ್ಪರ ಸಹಕರಿಸಬೇಕೆಂದು ಅವರು ಕರೆ ನೀಡಿದ್ದರು. ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಮತ್ತು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಕೂಡ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.