ಪ್ರಬಲ ಭೂಕಂಪಕ್ಕೆ ತತ್ತರಿಸಿ ಅಫ್ಘಾನ್: ಅಂತಾರಾಷ್ಟ್ರೀಯ ನೆರವಿಗಾಗಿ ತಾಲಿಬಾನ್ ಮನವಿ

0
11

ಸನ್ಮಾರ್ಗ ವಾರ್ತೆ

ಪ್ರಬಲ ಭೂಕಂಪಕ್ಕೆ ತತ್ತರಿಸಿದ ಅಫ್ಘಾನಿಸ್ತಾನದ ತಾಲಿಬಾನ್ ನೇತೃತ್ವದ ಸರಕಾರವು ಅಂತಾರಾಷ್ಟ್ರೀಯ ಬೆಂಬಲಕ್ಕಾಗಿ ಮನವಿ ಮಾಡಿಕೊಂಡಿದೆ.

1,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು ಕನಿಷ್ಠ 1,500 ಜನರು ಗಾಯಗೊಂಡಿದ್ದಾರೆ. ಈ ಸಂಖ್ಯೆ ಹೆಚ್ಚಾಗಿವ ಸಾಧ್ಯತೆಗಳಿದ್ದು, ಮನೆಗಳ ಅವಶೇಷಗಳ ಅಡಿಯಲ್ಲಿ ಹೂತು ಹೋಗಿರುವ ಜನರ ಅನ್ವೇಷಣೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಆಗ್ನೇಯ ಪಕ್ಟಿಕಾ ಪ್ರಾಂತ್ಯವು ಹೆಚ್ಚು ಹಾನಿಗೊಳಗಾಗಿದ್ದು, ತುರ್ತು ಆಶ್ರಯ ಮತ್ತು ಆಹಾರ ಸಹಾಯವನ್ನು ಒದಗಿಸಲು UN ಹರಸಾಹಸ ಪಡುತ್ತಿದೆ.

ಭಾರೀ ಮಳೆ ಹಾಗೂ ಸಂಪನ್ಮೂಲ ಕೊರತೆಯು ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ ಎಂಬುದಾಗಿ ವರದಿಯಾಗಿದೆ.

LEAVE A REPLY

Please enter your comment!
Please enter your name here