ಹಜ್ ನಿರ್ವಹಿಸಲು ಬ್ರಿಟನ್‍ನಿಂದ ಸೈಕಲ್‍ನಲ್ಲಿ ಬಂದ 8 ಮಂದಿಯ ತಂಡ ಸೌದಿ ಅರೇಬಿಯದಲ್ಲಿ

0
979

ಲಂಡನ್, ಆ. 6: ಹಜ್ ನಿರ್ವಹಿಸಲು ಸೈಕಲ್ ಮೂಲಕ ಬ್ರಿಟನ್‍ನಿಂದ ಹೊರಟ ಎಂಟು ಮಂದಿಯ ತಂಡ ಮದೀನಾಕ್ಕೆ ತಲುಪಿದೆ. 6500 ಕಿಲೋಮೀಟರ್ ದೂರವನ್ನು ಎರಡು ತಿಂಗಳ ಪ್ರಯಾಣದಲ್ಲಿ ಅವರು ತಲುಪಿದ್ದಾರೆ. ಮದೀನಾಕ್ಕೆ ತಲುಪಿದ ತಂಡವನ್ನು ಜನರು ಹರ್ಷದಿಂದ ಸ್ವಾಗತಿಸಿದ್ದು ಹದಿನೇಳು ದೇಶವನ್ನು ದಾಟಿ ಇವರು ಮದೀನಾ ತಲುಪಿದರು.

ಇದೊಂದು ಆಧ್ಯಾತ್ಮಿಕ ಯಾತ್ರೆ. ಪ್ರಯಾಣದುದ್ದಕ್ಕೂ ಬಹಳಷ್ಟು ಕಷ್ಟ, ಪ್ರಯಾಸಗಳು ಎದುರಾದರೂ ನಮ್ಮ ಜೀವನದ ಅತೀ ಪ್ರಮುಖ ಪ್ರಯಾಣ ಇದು ಎಂದು ತಂಡದ ನಾಯಕ ತಾಹಿರ್ ಅಕ್ತರ್ ಹೇಳಿದರು. ಮದೀನದಿಂದ ಮಕ್ಕಕ್ಕೆ ಬಂದು ಹಜ್ ನಿರ್ವಹಿಸುವ ಸಿದ್ಧತೆ ನಡೆಸುತ್ತಿದೆ. ಜುಲೈ ಹದಿಮೂರಕ್ಕೆ ಟರ್ಕಿಗೆ ಬಂದಾಗ ಅಧ್ಯಕ್ಷ ತಯ್ಯಿಬ್ ಉರ್ದುಗಾನ್ ಸ್ವಾಗತಿಸಿದ್ದರು. ಜೂನ್ ಏಳರಂದು ತಂಡ ಬ್ರಿಟನ್‍ನಿಂದ ಪ್ರಯಾಣ ಆರಂಭಿಸಿತ್ತು.