ಪಾಕ್ ಡ್ರೋನ್‌ ಹೊಡೆದುರುಳಿಸಿದ ಗಡಿ ಭದ್ರತಾ ಪಡೆ

0
332

ಸನ್ಮಾರ್ಗ ವಾರ್ತೆ

ಗುರುದಾಸ್‌ಪುರ: ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತದ ಗಡಿಯೊಳಕ್ಕೆ ನುಸುಳಿದ್ದ ಪಾಕಿಸ್ತಾನದ ಡ್ರೋನ್‌ಅನ್ನು ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ. ಪಂಜಾಬ್‌ನ ಗುರುದಾಸ್‌ಪುರ ಸೆಕ್ಟರ್‌ನಲ್ಲಿ ಡ್ರೋನ್‌ನ ಇರುವಿಕೆಯನ್ನು ಭದ್ರತಾ ಪಡೆಯು ಪತ್ತೆಹಚ್ಚಿತ್ತು.

ಇಂದು ಮುಂಜಾನೆ 4.30ಕ್ಕೆ ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ಭದ್ರತಾ ಪಡೆಗಳಿಗೆ ಡ್ರೋನ್ ಪತ್ತೆಯಾಗಿದೆ. ಡ್ರೋನ್ ಅನ್ನು ತಕ್ಷಣವೇ ಹೊಡೆದುರುಳಿಸಲಾಗಿದೆ. ರೆಕ್ಕೆ ವೈಫಲ್ಯದಿಂದ ಡ್ರೋನ್ ಪತನಗೊಂಡಿದ್ದು, ಈ ಪ್ರದೇಶದಲ್ಲಿ ಭದ್ರತಾ ಪಡೆಗಳಿಂದ ವ್ಯಾಪಕ ಶೋಧ ನಡೆಯುತ್ತಿದೆ.

ಕಳೆದ ಒಂಬತ್ತು ತಿಂಗಳಲ್ಲಿ 191 ಡ್ರೋನ್‌ಗಳು ಪಾಕಿಸ್ತಾನದಿಂದ ಭಾರತದ ಪ್ರದೇಶವನ್ನು ದಾಟಿವೆ. ಈ ಪೈಕಿ 171 ಭಾರತ-ಪಾಕ್ ಗಡಿಯ ಪಂಜಾಬ್ ಸೆಕ್ಟರ್ ಮತ್ತು 20 ಜಮ್ಮು ಸೆಕ್ಟರ್ ಪ್ರವೇಶಿಸಿವೆ. ಪಾಕಿಸ್ತಾನದ ಕಡೆಯಿಂದ ಭಾರತದ ಭದ್ರತೆಗೆ ನಿರಂತರ ಬೆದರಿಕೆ ಇದೆ ಎಂಬುದರ ಕುರಿತು ಸೇನೆಯು ಗಮನ ಸೆಳೆದಿದೆ.