ಸಿಎಎ ಜಾರಿಯನ್ನು ತಡೆಹಿಡಿಯಿರಿ ಎಂದು ಸುಪ್ರೀಂ ಕೋರ್ಟಿನಲ್ಲಿ ವಾದಿಸಿದ ಕಪಿಲ್ ಸಿಬಲ್: ಕೇಂದ್ರದ ಅಭಿಪ್ರಾಯವನ್ನು ಆಲಿಸಿದ ಬಳಿಕ ತೀರ್ಮಾನವೆಂದ ಕೋರ್ಟ್

0
2207

ಸನ್ಮಾರ್ಗ ವಾರ್ತೆ

ನವದೆಹಲಿ; ಜ. 22-  ಕೇಂದ್ರ ಸರಕಾರದ ಅಭ್ಪ್ರಾಯವನ್ನು ಆಲಿಸದೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಗೆ ಯಾವುದೇ ತಡೆ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಸ್ಪಷ್ಟಪಡಿಸಿದೆ ಮತ್ತು ಕಾಯಿದೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಉನ್ನತ ಸಂವಿಧಾನ ಪೀಠಕ್ಕೆವರ್ಗಾಯಿಸುವ ಸುಳಿವನ್ನು ನೀಡಿದೆ. ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ನೇತೃತ್ವದ ನ್ಯಾಯಪೀಠವು ಸಿಎಎ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ 143 ಮನವಿಗಳ ವಿಚಾರಣೆ ನಡೆಸುತ್ತಿದೆ.

ಸಿಎಎಯ ಜಾರಿಯನ್ನು ತಡೆಹಿಡಿಯಬೇಕು ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಯನ್ನು ಸದ್ಯಕ್ಕೆ ಮುಂದೂಡಬೇಕೆಂದು ನ್ಯಾಯಪೀಠವನ್ನು ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಒತ್ತಾಯಿಸಿದರು. ಆಗ ಅಟಾರ್ನಿ ಜನರಲ್ ವೇಣುಗೋಪಾಲ್ ಅವರು ಈ ಕುರಿತಂತೆ ಕೇಂದ್ರದ ನಿಲುವನ್ನು ತಿಳಿಸಲು ಸಮಯಾವಕಾಶವನ್ನು ಕೋರಿದರು. ಆಗ, ಕೇಂದ್ರದ ಅಭಿಪ್ರಾಯ ಪಡೆಯದೇ ಸಿಎಎಗೆ ಯಾವುದೇ ಮಧ್ಯಂತರ ತಡೆ ನೀಡುವುದಿಲ್ಲ ಎಂದು ಕೋರ್ಟು ಹೇಳಿತು.

ವಿವಿಧ ಅರ್ಜಿಗಳ ಕುರಿತು ಡಿಸೆಂಬರ್ 18 ರಂದು ಕೇಂದ್ರಕ್ಕೆ ನೋಟಿಸ್ ನೀಡಿದ್ದ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ನೇತೃತ್ವದ ನ್ಯಾಯಪೀಠವು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಮತ್ತು ಕಾಂಗ್ರೆಸ್ ಮುಖಂಡ ಜೈರಾಮ್ ಸಲ್ಲಿಸಿದ್ದ ಅರ್ಜಿಗಳೂ ಸೇರಿದಂತೆ 143 ಅರ್ಜಿಗಳ ಮೇಲೆ ತೀರ್ಮಾನ ಮಾಡಬೇಕಿದೆ.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ 2014 ರ ಡಿಸೆಂಬರ್ 31 ರಂದು ಅಥವಾ ಅದಕ್ಕೂ ಮೊದಲು ದೇಶಕ್ಕೆ ಬಂದ ಹಿಂದೂ, ಸಿಖ್, ಬೌದ್ಧ, ಕ್ರಿಶ್ಚಿಯನ್, ಜೈನ್ ಮತ್ತು ಪಾರ್ಸಿ ಸಮುದಾಯಗಳಿಗೆ ಸೇರಿದ ವಲಸಿಗರಿಗೆ ಪೌರತ್ವ ನೀಡಲು ಸಿಎಎ ಯತ್ನಿಸಿದೆ.

ನಂತರ ಸಲ್ಲಿಸಿದ ಕೆಲವು ಅರ್ಜಿಗಳು ಜನವರಿ 10 ರಿಂದ ಜಾರಿಗೆ ಬಂದ ಶಾಸನವನ್ನು ತಡೆಹಿಡಿಯಲು ಕೋರಿವೆ. ಅದೇವೇ, ಸಿಎಎಯನ್ನು ಸಾಂವಿಧಾನಿಕವೆಂದು ಘೋಷಿಸಬೇಕೆಂದು ಸಲ್ಲಿಸಲಾದ ಮನವಿಯನ್ನು ಜನವರಿ ೯ರಂದು ತಳ್ಳಿಹಾಕಿತು. ದೇಶವು ಸಾಗುತ್ತಿದೆ ಎಂದು ಮುಖ್ಯ ನ್ಯಾಯಾಧೀಶರು ಪ್ರಶ್ನಿಸಿದರು.

ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಡಿಸೆಂಬರ್ 12 ರಂದು ಪೌರತ್ವ (ತಿದ್ದುಪಡಿ) ಮಸೂದೆಗೆ ಒಪ್ಪಿಗೆ ನೀಡಿದರು ಮತ್ತು ಅದನ್ನು ಕಾಯಿದೆಯನ್ನಾಗಿ ಪರಿವರ್ತಿಸಿದರು.