ಸನ್ಮಾರ್ಗ ವಾರ್ತೆ-
ಯುನೈಟೆಡ್ ನೇಶನ್ಸ್, ಡಿ. 12: ಕಾನೂನುಗಳು ಭೇದಭಾವ ರಹಿತವಾಗಿರಬೇಕೆಂದು ಎಲ್ಲ ಸರಕಾರಗಳು ದೃಢಪಡಿಸುವ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ಕಾರ್ಯದರ್ಶಿ ಜನರಲ್ ಅಂಟಾನಿಯೊ ಗುಟರಸ್ ಹೇಳಿದರು. ಭಾರತದ ಪೌರತ್ವದ ತಿದ್ದುಪಡಿ ಕಾನೂನು ರಚನೆ ಈಗ ನಡೆಯುತ್ತಿದೆ. ಆದರೆ ಈಗ ಇದರ ಕುರಿತು ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ ಎಂದು ಗುಟರಸ್ ಹೇಳಿದರು.
ವಿಷಯದಲ್ಲಿ ಕಾನೂನು ನಿರ್ಮಾಣ ಪ್ರಕ್ರಿಯೆ ಪೂರ್ಣವಾಗುವವರೆಗೆ ಅಭಿಪ್ರಾಯ ಹೇಳುವುದಿಲ್ಲ ಎಂದು ಗುಟರಸ್ರ ವಕ್ತಾರ ಫರ್ಹಾನ್ ಹಕ್ ಹೇಳಿದರು. ಇದೇವೇಳೆ ಎಲ್ಲ ಸರಕಾರಗಳು ತಾರತಮ್ಯ ರಹಿತ ಕಾನೂನು ನಿರ್ಮಿಸಬೇಕೆನ್ನುವುದು ವಿಶ್ವಸಂಸ್ಥೆಯ ನಿಲುವು ಎಂದು ಅವರು ಹೇಳಿದರು.
ನೆರೆಯ ಕೆಲವು ದೇಶಗಳಿಂದ ಹಿಂಸೆಗೆ ತುತ್ತಾದ ಅಲ್ಪಸಂಖ್ಯಾತರನ್ನು ಪರಿಗಣಿಸುವುದು ಮಸೂದೆಯ ಉದ್ದೇಶವೆಂದು ಭಾರದ ವಿದೇಶ ಸಚಿವಾಲಯ ತಿಳಿಸಿದೆ.












