ಪೌರತ್ವ ಮಸೂದೆಗೆ 16 ರಾಜ್ಯಸಭಾ ಸದಸ್ಯರು ಮತ ಹಾಕಿಲ್ಲ: ಅವರಾರು?

0
1259

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ.13: ಪೌರತ್ವ ತಿದ್ದುಪಡಿ ಮಸೂದೆಗೆ ಒಟ್ಟು 240 ರಾಜ್ಯಸಭಾ ಸದಸ್ಯರಲ್ಲಿ ಹದಿನಾರು ಮಂದಿ ಸಭೆಯಲ್ಲಿ ಹಾಜರಿರಲಿಲ್ಲ. ಮಸೂದೆಯನ್ನು ವಿರೋಧಿಸಿ ವೋಟು ಹಾಕುವುದಾಗಿ ಘೋಷಿಸಿದ ಬಿಎಸ್ಪಿಯ ಇಬ್ಬರು, ಜಾತ್ಯತೀತ ಜನತಾದಳದ ಒಬ್ಬರು ಮತದಾನದಲ್ಲಿ ಭಾಗವಹಿಸಿಲ್ಲ. ಬಿಎಸ್‍ಪಿಯ ರಾಜರಾಂ, ಅಶೋಕ್ ಸಿದ್ಧಾರ್ಥ ಮತದಾನದಲ್ಲಿ ಭಾಗವಹಿಸಿಲ್ಲ. ಜನತಾದಳದ ಡಿ. ಕುಪೇಂದ್ರ ರೆಡ್ಡಿ ಮತ ಹಾಕುವುದಿಲ್ಲ ಎಂದು ಭಾಷಣ ಮಾಡಿ ಮತದಾನದ ವೇಳೆ ತಪ್ಪಿಸಿಕೊಂಡಿದ್ದರು. ಮಸೂದೆಯನ್ನು ವಿರೋಧಿಸಿದ ತೆಲಂಗಾಣ ರಾಷ್ಟ್ರ ಸಮಿತಿಯ ಧರ್ಮಪುರಿ ಶ್ರೀನಿವಾಸ್ ಹಾಜರಿರಲಿಲ್ಲ. ಸಂಜಯ್ ರಾವತ್ ಸಹಿತ ಶಿವಸೇನೆಯ ಮೂವರು ಸಭಾತ್ಯಾಗ ಮಾಡಿದ್ದರು. ಎನ್‍ಸಿಪಿ ಮಜೀದ್ ಮೆಮನ್, ವಂದನಾ ಚವಾಣ್ ರಾಜ್ಯಸಭೆಯಲ್ಲಿರಲಿಲ್ಲ. ಎನ್ಸಿಪಿ ನಾಯಕರಾದ ಶರದ್‍ಪವಾರ್ ,ಪ್ರಫುಲ್ ಪಟೇಲ್ ವಿರೋಧಿಸಿ ವೋಟು ಹಾಕಿದರು. ಮಸೂದೆಯ ಪರವಾಗಿ 125 ಮತ ಚಲಾವಣೆಯಾದರೆ ವಿರೋಧಿಸಿ 105 ವೋಟು ಸಿಕ್ಕಿತು. ವಿರೋಧಿಸಿ ಮತಹಾಕಿದವರು 99 ಎಂದು ನಂತರ ರಾಜ್ಯಸಭೆ ತಿಳಿಸಿದೆ.