ಸನ್ಮಾರ್ಗ ವಾರ್ತೆ
ಕಲ್ಲಿಕೋಟೆ, ಎ. 29: ದೇಶಕ್ಕೆ ಮರಳಿ ಬರುವ ಅನಿವಾಸಿ ಭಾರತೀಯರನ್ನು ಸ್ವಾಗತಿಸಲು ಜಿಲ್ಲೆ ಸಿದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಶಾಂಬ ಶಿವ ರಾವ್ ಹೇಳಿದರು. ಅಗತ್ಯವಾದರೆ ಅವರಿಗೆ ಇರಲು ವ್ಯವಸ್ಥೆ ಮಾಡಿದ ಕೊರೊನಾ ಕೇರ್ ಸೆಂಟರ್ ಗಳಿಗೆ ಸಮಾನವಾದ ಕಟ್ಟಡಗಳನ್ನು ಕಂಡು ಹುಡುಕಲು ಸ್ಥಳೀಯಾಡಳಿತ ಕಾರ್ಯದರ್ಶಿಗೆ ಸೂಚನೆಯನ್ನೂ ನೀಡಲಾಗಿದೆ. ಆದ್ದರಿಂದ ಮನೆಯಲ್ಲಿ ಕೊರೊಂಟೈನ್ ಮಾಡಲು ಸೌಕರ್ಯ ಇರದವರು ಇಂತಹ ಸ್ಥಳಗಳಲ್ಲಿ ನಿರೀಕ್ಷಣೆಯ ಅವಧಿಯನ್ನು ಪೂರ್ತಿ ಗೊಳಿಸಬಹುದು. ಜಿಲ್ಲೆಯ ಶಾಸಕರೊಂದಿಗೆ ವೀಡಿಯೊದ ಮೂಲಕ ಮಾತಾಡುವ ವೇಳೆ ಜಿಲ್ಲಾಧಿಕಾರಿ ವಿವರ ನೀಡಿದರು. ಇತರ ಜಾಗಗಳಲ್ಲಿ ಮಾಂಸಕ್ಕಾಗಿ ಜಾನುವಾರುಗಳನ್ನು ಕೊಂಡು ಹೋಗಲು ಮತ್ತು ಮಾಂಸದ ಅವಶೇಷಗಳನ್ನು ಮರಳಿ ತರುವುದಕ್ಕೆ ಅಡಚಣೆ ಇಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.
ಅಪಾಯ ನಿವಾರಣೆ, ಕುಡಿಯುವ ನೀರು ವಿತರಣೆಗಳಿಗೂ ನಿಯಂತ್ರಣವಿಲ್ಲ. ಹಂಚಿನ ಉದ್ದಿಮೆ ಇರುವವರಿಗೆ ಆವೆಮಣ್ಣು ಸಂಗ್ರಹಿಸುವುದಕ್ಕೂ ಅನುಮತಿ ಇದೆ. ಸರಕಾರಿ ಸೂಚನೆ ಪಾಲಿಸಿ ಪರಂಪರಾಗತ ಮೀನುಗಾರಿಕೆಗೂ ಅವಕಾಶ ಇದೆ. ದೋಣಿಗಳನ್ನು ಫಿಶ್ ಲ್ಯಾಂಡಿಂಗ್ ಸೆಂಟರ್ ಗೆ ಮತ್ತು ಹಾರ್ಬರ್ ಗಳಿಗೆ ತರಬಹುದು. ಸಾಮಾಜಿಕ ಅಂತರದೊಂದಿಗೆ ಮೀನು ಮಾರಾಟ ಮಾಡಬಹುದು. ಕೊಬ್ಬರಿ ಸಂಗ್ರಹ ವ್ಯಾಪಾರಕ್ಕೆ ಅಡ್ಡಿಯಿಲ್ಲ. ಹಾಟ್ ಸ್ಪಾಟ್ ಆಗಿರುವಲ್ಲಿ ಗುರುವಾರ ಶನಿವಾರ ದಿನಗಳಲ್ಲಿ ಇದಕ್ಕೆ ಅನುಮತಿ ಕೊಡಲಾಗುತ್ತದೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












