ಮಕ್ಕ, ಜು. 27: ಎಬೋಲಾ ವೈರಸ್ ಹರಡುತ್ತಿರುವ ಮಧ್ಯ ಆಫ್ರಿಕ ದೇಶ ಡೆಮಕ್ರಾಟಿಕ್ ರಿಪಬ್ಲಿಕ್ ಕಾಂಗೊದಿಂದ ಹಜ್ ಯಾತ್ರಿಕರಿಗೆ ಈ ವರ್ಷ ಹಜ್ ನಿಷೇಧ ವಿಧಿಸಿ ಸೌದಿ ಅರೇಬಿಯ ಆದೇಶ ಹೊರಡಿಸಿದೆ. ಬುಧವಾರ ಸೌದಿ ವಿದೇಶ ಸಚಿವಾಲಯ ಈ ನಿರ್ಧಾರ ತೆಗೆದುಕೊಂಡಿತು. ಕಾಂಗೊದ ಪೂರ್ವ ಪ್ರಾಂತ ನೋರ್ತ್ ಕಿವು, ಇದುರಿ ಪ್ರಾಂತಗಳಲ್ಲಿ ಎಬೋಲಾ ತೀವ್ರ ಹಾನಿ ಮಾಡಿದೆ.
ಪ್ರಾಂತದ ಸಾರ್ವಜನಿಕ ಆರೋಗ್ಯ ಸ್ಥಿತಿಯಲ್ಲಿ ಏರುಪೇರು ಕಂಡು ಬಂದಿದ್ದು ಅಂತಾರಾಷ್ಟ್ರೀಯವಾಗಿ ಆತಂಕ ನೆಲೆಸಿದೆ ಎಂದು ವಿಶ್ವ ಆರೋಗ್ಯ ಸಂಘಟನೆ ಕಳೆದುವಾರ ತಿಳಿಸಿದೆ. ನಂತರ ಸೌದಿ ಅರೇಬಿಯ ಹಜ್ ಯಾತ್ರಿಕರ ಪಟ್ಟಿಯಿಂದ ಕಾಂಗೊವನ್ನು ವಜಾಗೊಳಿಸಿದೆ. ಇತರ ಹಜ್ ಯಾತ್ರಿಕರ ಆರೊಗ್ಯವನ್ನು ಗಮನದಲ್ಲಿಟ್ಟು ಈ ಕ್ರಮವನ್ನು ಕೈಗೊಳ್ಳಲಾಗಿದೆ. ಕಾಂಗೊದ ಜನರಿಗೆ ವೀಸಾ ಕೊಡಲಾಗುವುದಿಲ್ಲ ಎಂದು ಸೌದಿ ವಿದೇಶ ಸಚಿವಾಲಯ ತಿಳಿಸಿದೆ.












