ಅಮೆರಿಕದಲ್ಲಿ ಕ್ರಿಸ್‌ಮಸ್ ಪರೇಡ್‍‌ ವೇಳೆ ಜನರ ಮೇಲೆ ಹರಿದ ಕಾರು; ಐವರು ಮೃತ, 40ಕ್ಕೂ ಹೆಚ್ಚು ಮಂದಿಗೆ ಗಾಯ

0
141

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಅಮೆರಿಕದ ವಿಸ್ಕೋನ್ಸಿನಲ್ಲಿ ಕ್ರಿಸ್‍ಮಸ್ ಪರೇಡ್‍ಗೆ ಕಾರು ಹರಿಸಿದ ಪರಿಣಾಮ ಐವರು ಕೊಲ್ಲಲ್ಪಟ್ಟರು ಮತ್ತು 40ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ರವಿವಾರ ನಡೆದಿದೆ. ವಾಹನದಡಿಗೆ 20ಕ್ಕೂ ಹೆಚ್ಚು ಮಂದಿ ಬಿದ್ದಿದ್ದಾರೆ. ಇವರಲ್ಲಿ ಕೆಲವರು ಮಕ್ಕಳು ಆಗಿದ್ದಾರೆ. ಕೆಲವರು ಕೊಲ್ಲಲ್ಪಟ್ಟಿದ್ದಾರೆ. ಕೊಲ್ಲಲ್ಪಟ್ಟವರ ಸಂಖ್ಯೆ ಅವರ ಕುಟುಂಬದವರು ಗುರುತಿಸಿದ ನಂತರ ಬಹಿರಂಗಪಡಿಸಲಾಗುವುದು ಎಂದು ವಾಕ್ಸೆ ಪೊಲೀಸ್ ಮುಖ್ಯಸ್ಥ ಡ್ಯಾನಿಯಲ್ ಥಾಮ್ಸನ್ ಹೇಳಿದರು. ವಾಕ್ಸೆ ಹಲಿವುಸಡ್ ಪರೇಡ್ ಫೇಸ್‌ಬುಕ್ ಪುಟದಲ್ಲಿ ತತ್ಸಮಯದಲ್ಲಿ ಪ್ರಸಾರ ಆಗುತ್ತಿತ್ತು. ವೀಡಿಯೊದಲ್ಲಿ ಕೆಂಪು ಎಸ್ಯುವಿ ಜನರ ಗುಂಪಿನ ನಡುವೆ ನುಗ್ಗುವುದು ಜನರಿಗೆ ಗುದ್ದುವುದು ಕಾಣಿಸಿತ್ತು.

ಒಟ್ಟು 11 ವಯಸ್ಕರು ಮತ್ತು 12 ಮಕ್ಕಳನ್ನು ಆರು ಪ್ರದೇಶದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಅಗ್ನಿಶಾಮಕ ಮುಖ್ಯಸ್ಥ ಸ್ಟೀವನ್ ಹೊವಾರ್ಡ್ ಸುದ್ದಿಗಾರರಿಗೆ ತಿಳಿಸಿದರು.

ಇದೇವೇಳೆ ವಾಹನ ನಿಲ್ಲಿಸುವ ಸಲುವಾಗಿ ಕಾರಿನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.  ಪಡರೇಡಿನಲ್ಲಿ ಭಾಗವಹಿಸಿದ ಯಾರಿಗೂ ಗಾಯಗಳಾಗಿಲ್ಲ. ವಾಹನದಲ್ಲಿದ್ದವರು ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಕ್ಸಯ ಸ್ಥಿತಿಗತಿಯನ್ನು ಸೂಕ್ಷ್ಮವಾಗಿ ನಿರೀಕ್ಷಿಸಲಾಗತ್ತಿದೆ ಎಂದು ವೈಟ್ ಹೌಸ್ ತಿಳಿಸಿತು. ಭಯಾನಕ ಘಟನೆಯ ಆಘಾತಗೊಂಡ ಎಲ್ಲರೊಂದಿಗೂ ನಾವು ಹೃದಯ ತೆರೆದಿಡುತ್ತೇವೆ. ಅಗತ್ಯ ಸಹಾಯ ಸಹಕಾರ ನೀಡಲು ನಾವು ರಾಜ್ಯ, ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸುತ್ತಿದ್ದೇವೆ ಎಂದು ವೈಟ್ ಹೌಸ್ ಅಧಿಕಾರಿ ತಿಳಿಸಿದರು. ಘಟನೆಯಲ್ಲಿ ಭಯೋತ್ಪಾದಕರೊಂದಿಗೆ ಸಂಬಂಧ ಇದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ವಾಕ್ಸೆ ಪೊಲೀಸರು ತಿಳಿಸಿದ್ದಾರೆ.