ಕೊರೋನಾ ಪ್ರಕರಣಗಳು; ಭಾರತದ ಪರಿಸ್ಥಿತಿ ಅಮೇರಿಕ-ಯುಕೆಯಷ್ಟು ಹದಗೆಟ್ಟಿಲ್ಲ ಎಂದ ಕೇಂದ್ರ ಸರಕಾರ!

0
537

ಸನ್ಮಾರ್ಗ ವಾರ್ತೆ

ನವದೆಹಲಿ,ಮೇ.9: ಭಾರತದಲ್ಲಿ ಕೊರೋನಾ ಸೋಂಕಿನ ಸ್ಥಿತಿ ಯುಎಸ್-ಯುಕೆ ನಂತಹ ಅಭಿವೃದ್ಧಿ ಹೊಂದಿದ ದೇಶಗಳಷ್ಟು ಹದಗೆಟ್ಟಿಲ್ಲ. ಆದರೆ, ಪರಿಸ್ಥಿತಿ ಹದಗೆಟ್ಟರೂ ಅದನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಹೇಳಿದ್ದಾರೆ.

ನಮ್ಮಲ್ಲಿ ಕೊರೋನಾದ ಮರಣ ಪ್ರಮಾಣವು 3.3% ರಷ್ಟಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ರೋಗ ಚೇತರಿಕೆ ದರವು 29.9ಕ್ಕೆ ಏರಿಕೆಯಾಗಿದೆ. ಇವು ಬಹಳ ಒಳ್ಳೆಯ ಚಿಹ್ನೆಗಳು. ಸೋಂಕಿನ ಪ್ರಕರಣಗಳ ವೇಗವು 11 ದಿನಗಳಲ್ಲಿ ದ್ವಿಗುಣಗೊಂಡಿದೆ ಎಂದು ಅವರು ಹೇಳಿದರು.

ದೇಶದಲ್ಲಿ 59 ಸಾವಿರ 830 ಕರೋನಾ ಸೋಂಕು ಪ್ರಕರಣಗಳಿವೆ. ಶನಿವಾರ ರಾಜಸ್ಥಾನದಲ್ಲಿ 76, ಕರ್ನಾಟಕದಲ್ಲಿ 36, ಒಡಿಶಾದಲ್ಲಿ 17, ಹರಿಯಾಣದಲ್ಲಿ 6, ಉತ್ತರಾಖಂಡದಲ್ಲಿ 4 ಮತ್ತು ಬಿಹಾರದಲ್ಲಿ 1 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ಶುಕ್ರವಾರ 3345 ಹೊಸ ಕೊರೋನಾ ಸೋಂಕಿತ ಪ್ರಕರಣಗಳು ವರದಿಯಾಗಿದ್ದವು. ಒಂದು ದಿನ ಮುಂಚಿತವಾಗಿ, 3344 ಸೋಂಕು ಪ್ರಕರಣಗಳು ಕಂಡು ಬಂದಿದ್ದವು. ಮಹಾರಾಷ್ಟ್ರದಲ್ಲಿ ಶುಕ್ರವಾರ ಅತಿ ಹೆಚ್ಚು ಅಂದರೆ, 1089 ಪ್ರಕರಣಗಳು ವರದಿಯಾಗಿವೆ. ಇದಕ್ಕಿ ಒಂದು ದಿನ‌ ಮೊದಲು 3291 ಹೊಸ ಸೋಂಕು ಪ್ರಕರಣಗಳು ದೃಢವಾಗಿದ್ದವು. ತಮಿಳುನಾಡಿನಲ್ಲಿ 600, ಗುಜರಾತ್‌ನಲ್ಲಿ 390, ದೆಹಲಿಯಲ್ಲಿ 338, ರಾಜಸ್ಥಾನದಲ್ಲಿ 152, ಉತ್ತರಪ್ರದೇಶದಲ್ಲಿ 143, ಮಧ್ಯಪ್ರದೇಶದಲ್ಲಿ 89 ಹೊಸ ಸೋಂಕಿನ ವರದಿಗಳು ಸೇರಿವೆ. ಈ ಅಂಕಿ-ಅಂಶಗಳು covid19india.org ಮತ್ತು ರಾಜ್ಯ ಸರ್ಕಾರಗಳಿಂದ ಪಡೆದ ಮಾಹಿತಿಯನ್ನು ಆಧರಿಸಿವೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ದೇಶದಲ್ಲಿ ಒಟ್ಟು 59,662 ಜನರು ಸೋಂಕಿಗೆ ಒಳಗಾಗಿದ್ದಾರೆ. 39,834 ಮಂದಿ ಚಿಕಿತ್ಸೆಯಲ್ಲಿದ್ದಾರೆ. 17,846 ಗುಣಮುಖರಾಗಿದ್ದರೆ, 1,982 ರೋಗಿಗಳು ಸಾವನ್ನಪ್ಪಿದ್ದಾರೆ.

ಕಳೆದ 24 ಗಂಟೆಗಳಲ್ಲಿ 13 ಸಿಐಎಸ್ಎಫ್ ಸಿಬ್ಬಂದಿ ಸೋಂಕಿಗೆ ಒಳಗಾಗಿದ್ದಾರೆ. ಇದರೊಂದಿಗೆ ಭದ್ರತಾ ಪಡೆಯ 48 ಸೈನಿಕರ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಇವುಗಳಲ್ಲದೆ ಬಿಎಸ್‌ಎಫ್‌ನಲ್ಲಿ ಸುಮಾರು 200 ಜವಾನ್‌ಗಳು ಸೋಂಕಿಗೆ ಒಳಗಾಗಿದ್ದಾರೆ. ಸಿಆರ್‌ಪಿಎಫ್ ಸಿಬ್ಬಂದಿ ಕೂಡ ಕೊರೋನದ ಹಿಡಿತಕ್ಕೆ ಒಳಗಾಗಿದ್ದಾರೆ. ಎಲ್ಲಾ ಅರೆಸೈನಿಕ ಪಡೆಗಳಲ್ಲಿ 500 ಕ್ಕೂ ಹೆಚ್ಚು ಸೋಂಕು ದೃಢಪಟ್ಟ ಪ್ರಕರಣಗಳು ವರದಿಯಾಗಿವೆ, ಅದರಲ್ಲಿ 95% ದೆಹಲಿಯಲ್ಲಿಯೇ ವರದಿಯಾಗಿವೆ.

26 ರಾಜ್ಯಗಳು, 7 ಕೇಂದ್ರಾಡಳಿತ ಪ್ರದೇಶಗಳಲ್ಲಿ
ಕೊರೋನಾ ವೈರಸ್ ಸೋಂಕು!

ದೇಶದ 26 ರಾಜ್ಯಗಳಲ್ಲಿ ಹಾಗೂ 7 ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೋನಾ ವೈರಸ್ ಸೋಂಕು ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. ಇವುಗಳಲ್ಲಿ ದೆಹಲಿ, ಚಂಡಿಗಡ, ಅಂಡಮಾನ್ ಮತ್ತು ನಿಕೋಬಾರ್, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಪುದುಚೇರಿ ಮತ್ತು ದಾದರ್ ಮತ್ತು ನಗರಹವೇಲಿಗಳೂ ಸೇರಿವೆ.