ಗೃಹ ಸಚಿವ ಅಮಿತ್ ಶಾಗೆ ಎಲುಬು ಕ್ಯಾನ್ಸರ್? ಆಲ್ಟ್ ನ್ಯೂಸ್‌ನಿಂದ ಫ್ಯಾಕ್ಟ್ ಚೆಕ್ ವರದಿ

0
3564

ಸನ್ಮಾರ್ಗ ವಾರ್ತೆ

ನವದೆಹಲಿ,ಮೇ.9: ಕೇಂದ್ರ ಗೃಹ ಸಚಿವ ಅಮಿತ್ ಶಾರವರು ಟ್ವೀಟ್‌ ಮಾಡಿದ್ದಾರೆ ಎನ್ನಲಾಗಿರುವ ನಕಲಿ ಟ್ವೀಟ್‌ವೊಂದರ ಸ್ಕ್ರೀನ್‌ಶಾಟ್ ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ. ಸ್ಕ್ರೀನ್‌ಶಾಟ್‌ನ ಪ್ರಕಾರ, ಅವರು ಮೂಳೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಮತ್ತು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸಬೇಕೆಂದು ಕೇಳಿಕೊಳ್ಳುತ್ತಿದ್ದಾರೆ ಸಂದೇಶವಿದೆ. ಕೋವಿಡ್ -19 ಸಂದರ್ಭದಲ್ಲಿ ಏಕಾಏಕಿ ಗೃಹ ಸಚಿವರು ಸಾರ್ವಜನಿಕ ವಲಯದಲ್ಲಿ ಕಡಿಮೆ ಕಾಣಿಸಿಕೊಳ್ಳುತ್ತಿರುವುದನ್ನು ಜನರು ಪ್ರಶ್ನಿಸುತ್ತಿರುವಾಗಲೇ ಈ ಟ್ವೀಟ್ ಹರಿದಾಡುತ್ತಿದೆ.

ಅಮಿತ್ ಶಾ ಟ್ವೀಟ್ ಮಾಡಿದ್ದಾರೆ ಎಂದು ಹೇಳಲಾಗಿರುವ ಹಿಂದಿ ಭಾಷೆಯ ಟ್ವೀಟ್ ನಲ್ಲಿ ಹೀಗೆ ಉಲ್ಲೇಖಿಸಲಾಗಿದೆ.

ನನ್ನ ದೇಶದ ಜನರೇ, ನಾನು ತೆಗೆದುಕೊಂಡ ಪ್ರತಿಯೊಂದು ಹೆಜ್ಜೆಯೂ ದೇಶದ ಹಿತದೃಷ್ಟಿಯಿಂದ, ಯಾವುದೇ ಜಾತಿ ಅಥವಾ ಧರ್ಮದ ಯಾವುದೇ ವ್ಯಕ್ತಿಯೊಂದಿಗೆ ನನಗೆ ದ್ವೇಷವಿಲ್ಲ, ಕೆಲವು ದಿನಗಳಿಂದ ಆರೋಗ್ಯದ ಕೆಟ್ಟ ಕಾರಣ ದೇಶದ ಜನರ ಸೇವೆ ಮಾಡಲು ನನಗೆ ಸಾಧ್ಯವಾಗಲಿಲ್ಲ. ನನ್ನ ಗಂಟಲಿನ ಹಿಂಭಾಗದಲ್ಲಿ ನನಗೆ ಮೂಳೆ ಕ್ಯಾನ್ಸರ್ ಇದೆ ಎಂದು ಹೇಳಲು ನನಗೆ ವಿಷಾದವಿದೆ. ರಮಝಾನ್ ಹಬ್ಬದ ಈ ಸಂತೋಷದ ತಿಂಗಳಲ್ಲಿ ಮುಸ್ಲಿಂ ಸಮಾಜದ ಸಹೋದರರು ಸಹ ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಾರೆ ಮತ್ತು ನಾನು ಗುಣಮುಖನಾಗುವ ಮೂಲಕ ಶೀಘ್ರವೇ ನಿಮ್ಮ ಸೇವೆಗೆ ಹಾಜರಾಗುತ್ತೇನೆ.

ನಕಲಿ ಟ್ವಿಟರ್ ಸ್ಕ್ರೀನ್‌ಶಾಟ್!

ಅಮಿತ್ ಶಾ ಟ್ವೀಟ್ ಮಾಡಿದ್ದಾರೆಂಬ ಈ ಟ್ವೀಟ್ ನಕಲಿಯಾಗಿದ್ದು, ಟ್ವೀಟ್‌ನ ಗೆರೆ ನಿಯಮಾವಳಿಯನ್ನು ಮೀರಿದೆ. ಇದು ಫೋಟೋ ಶಾಪ್ ಮಾಡಲಾದ ಸಂದೇಶವಾಗಿದ್ದು, ಅಕ್ಷರಗಳ ಎಣಿಕೆಯನ್ನೂ ಕೂಡ ಮೀರಿದೆ. ಟ್ವಿಟರ್ ನಲ್ಲಿ ಕೇವಲ 280 ಅಕ್ಷರಗಳ ಎಣಿಕೆಗೆ ಅವಕಾಶವಿದ್ದು ನಕಲಿ ಟ್ವೀಟ್ ಈ ನಿಯಮವನ್ನು ಮೀರಿದೆ. ಅಲ್ಲದೇ, ಕಾಗುಣಿತ ಮತ್ತು ವ್ಯಾಕರಣದ ತಪ್ಪುಗಳು ಕೂಡ ನಕಲಿ ಟ್ವೀಟ್ ಒಳಗೊಂಡಿರುವುದಾಗಿ ಆಲ್ಟ್ ನ್ಯೂಸ್ ವರದಿ ಮಾಡಿದೆ.

ಕೃಪೆ: ಆಲ್ಟ್ ನ್ಯೂಸ್