ಉತ್ತರ ಪ್ರದೇಶದಲ್ಲಿ ಆಸ್ಪತ್ರೆಯ ಹೊರಗೆ ವೈದ್ಯರು, ದಾದಿಯರನ್ನು ಕಾಯುತ್ತಿರುವ 69 ಕೊರೊನಾ ರೋಗಿಗಳು

0
855

ಸನ್ಮಾರ್ಗ ವಾರ್ತೆ

ಲಕ್ನೊ, ಎ. 25: ಉತ್ತರ ಪ್ರದೇಶದ ಆಸ್ಪತ್ರೆಯ ಹೊರಗೆ ಫೂಟ್ ಪಾತ್‍ನಲ್ಲಿ ವೈದ್ಯರು ಮತ್ತು ನರ್ಸ್‍ಗಳನ್ನು ಕೊರೊನಾ ಪೀಡಿತ 69ರಷ್ಟು ರೋಗಿಗಳು ಕಾಯುತ್ತಿದ್ದಾರೆ. ಕೊರೊನಾ ದೃಢಪಟ್ಟು ಹೆಚ್ಚಿನ ಚಿಕಿತ್ಸೆಗಾಗಿ ಉತ್ತರ ಪ್ರದೇಶದ ಸಾಯ್‍ಫಾಯ್ ಮೆಡಿಕಲ್ ಕಾಲೇಜಿಗೆ ಬಂದಿರುವ ರೋಗಿಗಳು ಆಸ್ಪತ್ರೆಯ ಹೊರಗೆ ಕಾಯುತ್ತಿರುವ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾಗಿದೆ. ಆದರೆ ಕೊರೊನಾ ರೋಗಿಗಳಿಗೆಂದೇ ಪ್ರತ್ಯೇಕ ವಾರ್ಡ್ ಸಿದ್ಧಪಡಿಸಿಟ್ಟಿಲ್ಲ. ಕೊರೊನಾ ರೋಗಿಗಳು ಬಂದದ್ದರಿಂದ ಪ್ರತ್ಯೇಕ ವಾರ್ಡ್ ತಯಾರಿಸುವ ಕೆಲಸದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ವ್ಯಸ್ತರಾಗಿದ್ದಾರೆ. ಆದ್ದರಿಂದ ಕೊರೊನಾ ರೋಗಿಗಳು ಹೊರಗೆ ನಿಲ್ಲಬೇಕಾಗಿ ಬಂದಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಆಗ್ರದ ಸರಕಾರಿ ಆಸ್ಪತ್ರೆಯಿಂದ ಇಲ್ಲಿಗೆ ರೋಗಿಗಳನ್ನು ಕರೆತರಲಾಗಿದೆ. 116 ಕಿಲೊಮೀಟರ್ ದೂರ ಸಂಚರಿಸಿ ಬಂದಿದ್ದು ಬಸ್‍ನೊಂದಿಗೆ ಸ್ಥಳೀಯರು ಸ್ಥಳೀಯ ಅಧಿಕಾರಿಗಳು ಆಸ್ಪತ್ರೆಗೆ ಬಂದಿದ್ದರು. ರೋಗಿಗಳಿಗೆ ಮಾಸ್ಕ್ ಮಾತ್ರ ಒದಗಿಸಲಾಗಿತ್ತು. ಇನ್ನೊಂದು ವೀಡಿಯೊದಲ್ಲಿ ಪೊಲೀಸರು ಸುರಕ್ಷ ವಸ್ತ್ರ ಧರಿಸಿದ ಇಬ್ಬರಿಗೆ ಸೂಚನೆ ನೀಡುವುದು ಕಂಡು ಬರುತ್ತಿದೆ. ರೋಗಿಗಳಲ್ಲಿ ಸಾಮಾಜಿಕ ಅಂತರವನ್ನು ಪಾಲಿಸಲು ಹೇಳುತ್ತಿದ್ದಾರೆ. ಆಗ್ರಾದಿಂದ ರೋಗಿಗಳು ಇಲ್ಲಿಗೆ ಬರಲಿದ್ದಾರೆ ಎಂಬ ಮಾಹಿತಿ ಸಾಯ್‍ಫಾಯ್ ಆಸ್ಪತ್ರೆಗೆ ಸಿಕ್ಕಿರಲಿಲ್ಲ. ಆದ್ದರಿಂದ ಕಾಯುವ ಪರಿಸ್ಥಿತಿಯಾಗಿದೆ ಎಂದು ವೀಡಿಯೊದಲ್ಲಿ ಪೊಲೀಸರು ಹೇಳುತ್ತಿರುವುದನ್ನು ಕಾಣಬಹುದು.

ಇದೇ ವೇಳೆ ಘಟನೆಯಲ್ಲಿ ಯಾರಿಂದಲೂ ಪ್ರಮಾದ ಆಗಿಲ್ಲ. ಹೆಚ್ಚು ರೋಗಿಗಳು ಬಂದದ್ದು ಅವರ ಆರೋಗ್ಯ ಸ್ಥಿತಿ ಮತ್ತು ಪಟ್ಟಿಯನ್ನು ತಯಾರಿಸಲು ವೈದ್ಯರಿಗೆ ಆಸ್ಪತ್ರೆಯ ಅಧಿಕಾರಿಗಳಿಗೆ ಹೆಚ್ಚು ಸಮಯ ಅಗತ್ಯವಿರುತ್ತದೆ. ಇದು ಎಲ್ಲವೂ ಮುಗಿದ ಬಳಿಕ ನಾವು ರೋಗಿಗಳನ್ನು ಆಸ್ಪತ್ರೆಯ ಒಳಗೆ ಸೇರಿಸಿದ್ದೇವೆ ಎಂದು ಉತ್ತರ ಪ್ರದೇಶ ಯುನಿವರ್ಸಿಟಿ ಆಫ್ ಮೆಡಿಕಲ್ ಸಯನ್ಸ್ ನ ಉಪಕುಲಪತಿ ಡಾ. ರಾಜ್ ಕುಮಾರ್ ಹೇಳಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.