ಗ್ಯಾಸ್ ಗೆ 50 ರೂಪಾಯಿ ಏರಿಸಿದ ಕೇಂದ್ರ ಸರ್ಕಾರ

0
304

ಸನ್ಮಾರ್ಗ ವಾರ್ತೆ

ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಕೇಂದ್ರ ಸರಕಾರ ಬರೆ ಎಳೆದಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಎರಡು ರೂಪಾಯಿಗಳಷ್ಟು ಹೆಚ್ಚಿಸಿದೆ. ಇದರ ಜೊತೆಗೆ ಅಡುಗೆ ಅನಿಲದ ಸಿಲಿಂಡರ್ ಬೆಲೆಯನ್ನೂ ಹೆಚ್ಚಿಸಿದೆ. 14.2 ಕಿಲೋ ಸಿಲಿಂಡರ್ ಬೆಲೆಯನ್ನು 50 ರೂಪಾಯಿಯಷ್ಟು ಹೆಚ್ಚಿಸಿದೆ.

ಗೃಹಬಳಕೆಯ ಸಿಲಿಂಡರ್ ನ ಬೆಲೆ ಈಗ 803 ರೂಪಾಯಿ ಇದ್ದು ಈಗ ಬೆಲೆ ಏರಿಕೆಯಿಂದಾಗಿ 853ಗೆ ಏರಿದೆ. ಇದರ ಜೊತೆಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನು ಕೇಂದ್ರ ಸರಕಾರ ಎರಡೂ ರುಪಾಯಿ ಏರಿಸಿದೆ. ವಕ್ಫ್ ತಿದ್ದುಪಡಿ ಕಾಯ್ದೆಯ ಸುತ್ತ ಜನರು ಚರ್ಚೆಯಲ್ಲಿ ತೊಡಗಿರುವಾಗಲೇ ಸರ್ಕಾರ ಸದ್ದಿಲ್ಲದೆ ಈ ಬೆಲೆ ಏರಿಕೆಯನ್ನು ಮಾಡಿದೆ. ಈ ಬೆಲೆ ಏರಿಕೆ ಎಪ್ರಿಲ್ 8ರಿಂದ ಜಾರಿಗೆ ಬರಲಿದೆ.

ಈ ನಡುವೆ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದ್ದು ಅದರ ಲಾಭವನ್ನು ದೇಶದ ನಾಗರಿಕರಿಗೆ ಒದಗಿಸುವುದರಿಂದ ಕೇಂದ್ರ ಸರಕಾರ ಹಿಂದಕ್ಕೆ ಸರಿಯುತ್ತಿದೆ ಎಂಬ ಆರೋಪವೂ ಇದೆ. ಎರಡು ರೂಪಾಯಿ ಸುಂಕ ಏರಿಸದೇ ಇರುತ್ತಿದ್ದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಎರಡು ರೂಪಾಯಿ ಕಡಿಮೆಯಾಗುತ್ತಿತ್ತು ಎಂದು ಹೇಳಲಾಗುತ್ತಿದೆ.