ಸಿಇಟಿ ಫಲಿತಾಂಶ ಪ್ರಕಟ

0
354

ಸನ್ಮಾರ್ಗ ವಾರ್ತೆ

ಬೆಂಗಳೂರು: 2023-24ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆದಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ- ಸಿಇಟಿ ಪರೀಕ್ಷೆಯ ಫಲಿತಾಂಶ (KCET Results 2022) ಪ್ರಕಟವಾಗಿದೆ.

ಇಂದು -ಜೂನ್ 15, ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಬೆಂಗಳೂರಿನ ಮಲ್ಲೇಶ್ವರಂನ ಕೆಇಎ ಕಚೇರಿಯಲ್ಲಿ ಸಿಇಟಿ ಫಲಿತಾಂಶ ಪ್ರಕಟಿಸಿದ್ದು, ಇಂಜಿನಿಯರಿಂಗ್ ಕೋರ್ಸ್‌ಗೆ 2,03,381, ಕೃಷಿ ವಿಜ್ಞಾನ ಕೋರ್ಸಿಗೆ 1,64,187, ಪಶು ಸಂಗೋಪನೆಗೆ- 166756, ಯೋಗ ಮತ್ತು ನ್ಯಾಚುರೋಪತಿಗೆ- 2,06191, ಬಿ.ಪಾರ್ಮ್ ಮತ್ತು ಡಿ.ಪಾರ್ಮ್ ಕೋರ್ಸ್ ಗೆ- 2,06,340, ನರ್ಸಿಂಗ್ ಕೋರ್ಸಿಗೆ – 1,66,808 ವಿದ್ಯಾರ್ಥಿಗಳು – ಅರ್ಹತೆ ಪಡೆದಿದ್ದಾರೆಂದು ಮಾಹಿತಿ ನೀಡಿದ್ದಾರೆ.

ಇಂಜಿನಿಯರಿಂಗ್ ವಿಭಾಗದಲ್ಲಿ ವಿಶ್ಲೇಶ್ ಪ್ರಥಮ, ಅರ್ಜುನ್ ಕೃಷ್ಣಸ್ವಾಮಿ ದ್ವಿತೀಯ, ಮೃದ್ ಶೆಟ್ಟಿ ತೃತೀಯ, ಎಸ್.ಸುಮೇಧೇ 4ನೇ ಸ್ಥಾನ ಹಾಗೂ ಮಾಧವ ಸೂರ್ಯ 5ನೇ ಸ್ಥಾನವನ್ನು ಗಳಿಸಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೇ 20 ಹಾಗೂ 21ರಂದು ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ಸಂಗೋಪನೆ, ಯೋಗ, ನ್ಯಾಚುರೋಪತಿ, ಡಿ ಫಾರ್ಮ್ ಕೋರ್ಸ್ ಹಾಗೂ ಬಿಎಸ್ಪಿ ನರ್ಸಿಂಗ್‌ಗೆ ಪ್ರವೇಶ ಪರೀಕ್ಷೆ ನಡೆಸಿತ್ತು. ಒಟ್ಟು 2,44,345 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಬೆಳಗ್ಗೆ 11 ಗಂಟೆ ನಂತರ ಈ ಕೆಳಗಿನ ವೆಬ್‌ಸೈಟ್‌ನಲ್ಲಿ ಫಲಿತಾಂಶವು ಲಭ್ಯವಾಗಲಿದೆ.
karresults.nic.in ಮತ್ತು cetonline.karnataka.gov.in