ದಿಲ್ಲಿ ಕೋಮು ಗಲಭೆಯಲ್ಲಿ ವೃದ್ಧೆಗೆ ಬೆಂಕಿ ಹಚ್ಚಿ ಕೊಂದ ಪ್ರಕರಣ: ಎಂಟು ವಿಡಿಯೋಗಳಲ್ಲಿ ಮುಖ್ಯ ಆರೋಪಿ- 6 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್

0
1127

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜು.9: ಫೆಬ್ರುವರಿಯಲ್ಲಿ ನಡೆದ ದಿಲ್ಲಿ ಕೋಮು ಗಲಭೆಯಲ್ಲಿ 85 ವರ್ಷದ ಅಕ್ಬರಿ ಬೇಗಂರನ್ನು ಬೆಂಕಿ ಹಚ್ಚಿ ಕೊಂದ ಪ್ರಕರಣದಲ್ಲಿ ಮುಖ್ಯಾರೋಪಿ ಎಂಟು ವೀಡಿಯೊಗಳಲ್ಲಿದ್ದಾನೆ ಎಂದು ಪೊಲೀಸರು ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಪುರಾವೆಯಾಗಿ ತಿಳಿಸಲಾಗಿದೆ. ಪ್ರತ್ಯಕ್ಷ ಸಾಕ್ಷಿಗಳು ಚಿತ್ರಿಸಿರುವ ವೀಡಿಯೊಗಳು ಇವು.

ದುಷ್ಕರ್ಮಿಗಳು ಬಂದಾಗ ಭಜನಪುರಿಯ ಅಕ್ಬರಿ ಬೇಗಂ ಕುಟುಂಬ ಮನೆಯ ಮೇಲಿನ ಸ್ಲಾಪ್‍ನಲ್ಲಿ ಸಿಕ್ಕಿಹಾಕಿಕೊಂಡಿತ್ತು. ವಯಸ್ಸಾದ ಅಕ್ಬರಿ ಬೇಗಂರನ್ನು ಅಲ್ಲಿಗೆ ಕರೆದುಕೊಂಡು ಹೋಗಲು ಸಾದ್ಯವಾಗಲಿಲ್ಲ. ಇದೇ ವೇಳೆ ಮನಗೆ ಬೆಂಕಿ ಕೊಟ್ಟ ಆರೋಪಿ ಅಲ್ಲಿಂದ ತೆರಳಿದ್ದಾನೆ ಎಂದು ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.

ಘಟನೆಯ ಆರೋಪಿಯಾದ ಅರುಣ್ ಕುಮಾರ್(26), ವರುಣ್ ಕುಮಾರ್(22) ವಿಶಾಲ್ ಸಿಂಗ್ (29), ರವಿಕುಮಾರ್(24), ಪ್ರಕಾಶ್ ಚಂರ್ದ್(36), ಸೂರಜ್ ಸಿಂಗ್ (28)ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿದೆ.

ಈ ನಡುವೆ ದ್ವೇಷದ ಭಾಷಣ ಮಾಡಿದ ಬಿಜೆಪಿ ನಾಯಕ ಕಪಿಲ್ ಮಿಶ್ರಾ ವಿರುದ್ಧ ದೂರಿನಲ್ಲಿ ಯಥಾಸ್ಥಿತಿ ವರದಿ ಸಲ್ಲಿಸಲು ಕೋರ್ಟು ಪೊಲೀಸರಿಗೆ ತಿಳಿಸಿದೆ.

ಓದುಗರೇ,ಸನ್ಮಾರ್ಗ ಫೇಸ್‌ಬುಕ್ ಪೇ‌ಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ‌.