ತಬ್ಲೀಗ್ ಸಮ್ಮೇಳನದಲ್ಲಿ ಭಾಗವಹಿಸಿದ ವಿದೇಶಿಗಳಿಗೆ ಜಾಮೀನು

0
613

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜು.9: ವೀಸಾ ನಿಬಂಧನೆ, ಕೊರೋನ ಮಾರ್ಗ ಸೂಚಿ ಉಲ್ಲಂಘಿಸಿದ್ದಾರೆಂದು ಆರೋಪಿಸಿ ರಿಮಾಂಡಿನಲ್ಲಿರುವ 21 ದೇಶಗಳ ತಬ್ಲೀಗ್ ಜಮಾಅತ್ ಕಾರ್ಯಕರ್ತರಿಗೆ ಜಾಮೀನು ಲಭಿಸಿದೆ. ಪ್ರತಿಯೊಬ್ಬರೂ 10,000 ಬಾಂಡ್ ನೀಡಿ ದಿಲ್ಲಿ ಚೀಫ್ ಮೆಟ್ರೊಪಾಲಿಟಿನ್ ಮ್ಯಾಜಿಸ್ಟ್ರೇಟ್ ಗುರ್‍ಹೊಹಿನ ಕೌರ್ ಜಾಮೀನು ಜಾರಿ ಮಾಡಿದ್ದಾರೆ. ಶಿಕ್ಷೆಯಲ್ಲಿ ವಿನಾಯಿತಿ ಕೋರಿ ಗುರುವಾರ ಅರ್ಜಿ ಸಲ್ಲಿಸುವವರಿದ್ದೇವೆ ಎಂದು ವಕೀಲ ಅಡ್ವೊಕೇಟ್ ಅಶಿಮಾ ಮಂಡಲ್ ಹೇಳಿದರು.

ಹೊಟೇಲ್‍ನಲ್ಲಿ ವಾಸಿಸುವ ತಬ್ಲೀಗ್ ಕಾರ್ಯಕರ್ತರು ವೀಡಿಯೊ ಕಾನ್ಫರೆನ್ಸ್ ಮೂಲಕ ಕೋರ್ಟಿನಲ್ಲಿ ಹಾಜರಾದರು. ಅಫ್ಘಾನಿಸ್ತಾನ, ಬ್ರಝಿಲ್, ಚೀನಾ, ಯುಕ್ರೇನ್, ಅಮೆರಿಕ, ಆಸ್ಟ್ರೇಲಿಯ, ಈಜಿಪ್ಟ್, ರಷ್ಯ, ಅಲ್ಝಿರಿಯ, ಬೆಲ್ಜಿಯಂ, ಸೌದಿ ಅರೇಬಿಯ, ಜೋರ್ಡಾನ್, ಫ್ರಾನ್ಸ್, ಕಝಕಿಸ್ತಾನ, ಮೊರೊಕ್ಕೊ, ಟುನಿಷ್ಯ, ಬ್ರಿಟನ್, ಫಿಜಿ, ಸುಡಾನ್, ಫಿಲಿಪ್ಪೀನ್ಸ್ ಹಾಗೂ ಇತಿಯೋಪಿಯದ ಪ್ರಜೆಗಳಿಗೆ ಜಾಮೀನು ಸಿಕ್ಕಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.