ಐಎನ್‍ಎಕ್ಸ್ ಮೀಡಿಯಾ ಪ್ರಕರಣ: 2 ತಿಂಗಳ ಬಳಿಕ ಚಿದಂಬರಂಗೆ ಜಾಮೀನು

0
500

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.22: ಐಎನ್‍ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ವಿತ್ತ ಸಚಿವ ಚಿದಂಬರಂಗೆ ಸುಪ್ರೀಂಕೋಟು ಮಂಗಳವಾರ ಜಾಮೀನು ಮಂಜೂರು ಮಾಡಿದೆ.

ಸುಪ್ರೀಂಕೋರ್ಟು ಚಿದಂಬರಂರ ಜಾಮೀನು ಅರ್ಜಿಯಲ್ಲಿ ವಿಚಾರಣೆ ನಡೆಸಿದ್ದು ಶರ್ತಬದ್ಧ ಜಾಮೀನು ನೀಡಿತು. ಒಂದು ಲಕ್ಷ ರೂಪಾಯಿ ಮುಚ್ಚಳಿಕೆ ಹಾಗೂ ದೇಶ ಬಿಟ್ಟು ಹೋಗಬಾರದೆಂಬ ಶರ್ತವನ್ನು ಸುಪ್ರೀಂಕೋರ್ಟು ವಿಧಿಸಿದೆ. ಚಿದಂಬರಂ ತಮ್ಮ ಪಾಸ್‍ಪೋರ್ಟನ್ನು ಕೋರ್ಟಿನ ವಶಕ್ಕೆ ನೀಡಬೇಕಾಗುವುದು. ಚಿದಂಬರಂಗೆ ಸಿಬಿಐ ಪ್ರಕರಣದಲ್ಲಿ ಕೋರ್ಟಿನಿಂದ ಈಗ ಜಾಮೀನು ದೊರಕಿದೆ.

ಇಡಿ ಪ್ರಕರಣದಲ್ಲಿ ಚಿದಂಬರಂ ಈಗಲೂ ಜೈಲಿನಲ್ಲಿರಬೇಕಾಗಿದೆ. ಅಕ್ಟೋಬರ್ 24ರವರೆಗೆ ಅವರು ಇಡಿ ಕಸ್ಟಡಿಯಲ್ಲಿರಲಿದ್ದು ಅವರನ್ನು ಆಗಸ್ಟ್ 21ರಂದು ಬಂಧಿಸಲಾಗಿತ್ತು.

ಚಿದಂಬರಂ ಹಾಗೂ ಇತರ ಕೆಲವರ ವಿರುದ್ಧ ಇಡಿ ಆರೋಪ ಪಟ್ಟಿ ಸಲ್ಲಿಸಿದ್ದು ಪುತ್ರ ಕಾರ್ತಿ ಚಿದಂಬರಂ ಹಾಗೂ ಅವರ ಸಿಬ್ಬಂದಿಯ ಹೆಸರುಗಳು ಕೂಡ ಆರೋಪ ಪಟ್ಟಿಯಲ್ಲಿದೆ. ಎಪ್ಪತ್ತನಾಲ್ಕು ವರ್ಷದ ಚಿದಂಬರಂ ಕಾಂಗ್ರೆಸ್ ನಾಯಕರಾಗಿದ್ದು ಹೈಕೋರ್ಟು ಜಾಮೀನು ನಿರಾಕರಣೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.