ಸನ್ಮಾರ್ಗ ವಾರ್ತೆ
ತಾಯಿಯನ್ನು ಮರಕ್ಕೆ ಕಟ್ಟಿ ಹಾಕಿ ಜೀವಂತ ದಹಿಸಿದ ಮಕ್ಕಳ ಕಥೆ ಇದು. 55 ವರ್ಷದ ಮಿನಟಿ ದೇಬ್ ನಾಥ್ ಎಂಬ ತಾಯಿಯನ್ನು ಮಕ್ಕಳೇ ಹತ್ಯೆ ಮಾಡಿದ ಈ ಘಟನೆ ನಡೆದಿರುವುದು ತ್ರಿಪುರದಲ್ಲಿ.
ತಾಯಿಯನ್ನು ಕೊಲೆಗೈದ ಈ ಕ್ರೌರ್ಯಕ್ಕೆ ಕೌಟುಂಬಿಕ ಕಲಹ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಈ ತಾಯಿಯ ಮಕ್ಕಳಾದ ರಣ್ ಬೀರ್, ಬಿಪ್ಲವ್ ಮತ್ತು ರಣ್ ಬೀರ್ ನ ಪತ್ನಿ ಈ ಕ್ರೌರ್ಯ ಎಸಗಿದ್ದಾರೆ. ಈ ಮೂವರನ್ನು ಆ ಬಳಿಕ ಬಂಧಿಸಲಾಗಿದೆ.
ಸುಟ್ಟು ಕರಕಲಾದ ದೇಹ ಮರಕ್ಕೆ ಕಟ್ಟಿ ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ಥಳಕ್ಕೆ ತಲುಪಿದ ಪೊಲೀಸರು ಮೃತ ದೇಹವನ್ನು ಆಸ್ಪತ್ರೆಗೆ ಸಾಗಿಸಿ ಪೋಸ್ಟ್ ಮಾರ್ಟಂ ನಡೆಸಿದ್ದಾರೆ.
ಈ ತಾಯಿಗೆ ಮೂವರು ಗಂಡು ಮಕ್ಕಳು. ಇವರ ಪತಿ 2022 ರಲ್ಲಿ ನಿಧನರಾಗಿದ್ದರು. ಕಿರಿಯ ಮಗನ ಜೊತೆ ಈ ತಾಯಿ ವಾಸಿಸುತ್ತಿದ್ದರು.