ಸನ್ಮಾರ್ಗ ವಾರ್ತೆ
ನವದೆಹಲಿ,ಜೂ.30: ಟಿಕ್ ಟಾಕ್ ಸೇರಿದಂತೆ ಚೀನಾದ 59 ಆ್ಯಪ್ಗಳನ್ನು ಸರ್ಕಾರ ನಿಷೇಧಿಸಿದೆ. ಇದಕ್ಕೆ ಟಿಕ್ ಟಾಕ್ ಇಂಡಿಯಾ ನಾವು ಭಾರತೀಯ ಕಾನೂನನ್ನು ಅನುಸರಿಸುತ್ತಿದ್ದೇವೆ ಎಂದು ಹೇಳಿದೆ. ಏತನ್ಮಧ್ಯೆ, ಟಿಕ್ ಟಾಕ್ ಅಪ್ಲಿಕೇಶನ್ ಅನ್ನು ಆ್ಯಪಲ್ನ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದುಹಾಕಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಮತ್ತೊಂದೆಡೆ, ಭಾರತೀಯ ಕಾನೂನಿನಡಿಯಲ್ಲಿ ಡೇಟಾ ಗೌಪ್ಯತೆ ಮತ್ತು ಸುರಕ್ಷತೆಯ ಎಲ್ಲಾ ನಿಯಮಗಳನ್ನು ನಾವು ಅನುಸರಿಸುತ್ತಿದ್ದೇವೆ ಎಂದು ಟಿಕ್ ಟಾಕ್ ಇಂಡಿಯಾ ಸಿಇಓ ನಿಖಿಲ್ ಗಾಂಧಿ ಹೇಳಿದರು.
ನಾವು ಚೀನಾ ಸೇರಿದಂತೆ ಯಾವುದೇ ವಿದೇಶಿ ಸರ್ಕಾರದೊಂದಿಗೆ ಭಾರತೀಯ ಬಳಕೆದಾರರ ಮಾಹಿತಿಯನ್ನು ಹಂಚಿಕೊಂಡಿಲ್ಲ. ಭವಿಷ್ಯದಲ್ಲಿಯೂ ನಮ್ಮನ್ನು ನಂಬುವುದಾದಲ್ಲಿ, ನಾವು ಹಾಗೆ ಮಾಡುವುದಿಲ್ಲ. ಬಳಕೆದಾರರ ಗೌಪ್ಯತೆಯ ಮಹತ್ವವನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಎಂದು ನಿಖಿಲ್ ಗಾಂಧಿ ಹೇಳಿದರು.
ಟಿಕ್ ಟಾಕ್ 14 ಭಾಷೆಗಳಲ್ಲಿದೆ. ನಮ್ಮ ಪ್ರಕರಣಕ್ಕೆ ಉತ್ತರಿಸಲು ಮತ್ತು ಪ್ರಸ್ತುತ ಪಡಿಸಲು ಸರ್ಕಾರ ನಮ್ಮನ್ನು ಆಹ್ವಾನಿಸಿದೆ ಎಂದು ನಿಖಿಲ್ ಗಾಂಧಿ ಹೇಳಿದರು.
ಟಿಕ್ಟಾಕ್ 14 ಭಾಷೆಗಳಲ್ಲಿ ಲಭ್ಯವಿದೆ. ಲಕ್ಷಾಂತರ ಕಲಾವಿದರು, ಕಥೆಗಾರರು, ಶಿಕ್ಷಕರು ಮತ್ತು ಪ್ರದರ್ಶಕರು ಇದರೊಂದಿಗೆ ಸಂಬಂಧ ಹೊಂದಿದ್ದಾರೆ. ಇದು ಅವರ ಜೀವನ ವಿಧಾನವಾಯಿತು. ಇವರಲ್ಲಿ ಅನೇಕ ಜನರು ಮೊದಲ ಬಾರಿಗೆ ಇಂಟರ್ನೆಟ್ ಅನ್ನು ಬಳಸಿದವರೂ ಆಗಿದ್ದಾರೆ. ಸರ್ಕಾರ ಹೇಳಿದಂತೆ ಭಾರತೀಯರ ಗೌಪ್ಯತೆ ಮತ್ತು ಡೇಟಾ ಸುರಕ್ಷತೆಯ ಬಗ್ಗೆ ಕಾಳಜಿಗಳಿವೆ ಎಂದಿದೆ.
ನಿಷೇಧಿತ 59 ಅಪ್ಲಿಕೇಶನ್ಗಳ ಪಟ್ಟಿಯಲ್ಲಿ ಟಿಕ್ ಟಾಕ್, ಯುಸಿ ಬ್ರೌಸರ್, ಹಲೋ ಮತ್ತು ಶೇರ್ ಇಟ್ ನಂತಹ ಅಪ್ಲಿಕೇಶನ್ಗಳು ಸೇರಿವೆ. ಈ ಚೀನೀ ಆ್ಯಪ್ಗಳ ಸರ್ವರ್ಗಳು ಭಾರತದ ಹೊರಗೆ ಅಸ್ತಿತ್ವದಲ್ಲಿವೆ ಎಂದು ಸರ್ಕಾರ ಸೋಮವಾರ ಹೇಳಿದೆ. ಅವುಗಳ ಮೂಲಕ, ಬಳಕೆದಾರರ ಡೇಟಾವನ್ನು ಕಳವು ಮಾಡಲಾಗುತ್ತಿದೆ. ಇದು ದೇಶದ ಭದ್ರತೆ ಮತ್ತು ಏಕತೆಗೆ ಬೆದರಿಕೆ ಯಾಗಿದೆ ಎಂದು ವರದಿಯಾಗಿತ್ತು.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಸರ್ಕಾರ ಈ ಚೀನೀ ಆ್ಯಪ್ಗಳನ್ನು ನಿಷೇಧಿಸಿದೆ. ಸರ್ಕಾರದ ಪ್ರಕಾರ, ಕಳೆದ ಕೆಲವು ದಿನಗಳಿಂದ 130 ಕೋಟಿ ಭಾರತೀಯರ ಡೇಟಾದ ಗೌಪ್ಯತೆ ಮತ್ತು ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ.
ಮಾಹಿತಿ ಸಚಿವಾಲಯಕ್ಕೆ ಬಂದ ದೂರುಗಳಲ್ಲಿ, ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್ಫಾರ್ಮ್ನಲ್ಲಿನ ಕೆಲವು ಮೊಬೈಲ್ ಅಪ್ಲಿಕೇಶನ್ಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ. ಈ ಅಪ್ಲಿಕೇಶನ್ಗಳು ರಹಸ್ಯವಾಗಿ ಮತ್ತು ಕಾನೂನುಬಾಹಿರವಾಗಿ ಬಳಕೆದಾರರ ಡೇಟಾವನ್ನು ಕದಿಯುತ್ತಿದ್ದವು ಮತ್ತು ಅದನ್ನು ಭಾರತದ ಹೊರಗಿನ ಸರ್ವರ್ಗಳಿಗೆ ಕಳುಹಿಸುತ್ತಿದ್ದವು ಎಂದು ಆಪಾದಿಸಲಾಗಿತ್ತು.
ನಿಷೇಧಿತ ಅಪ್ಲಿಕೇಶನಗಳು:-
TikTok, Shareit, Kwai, UC Browser, Baidu map, Shein, Clash of Kings, DU battery saver, Helo, Likee, YouCam makeup,Mi Community, CM Browers, Virus Cleaner, APUS Browser, ROMWE,Club Factory, Newsdog, Beutry Plus, WeChat, UC News, QQ Mail, Weibo, Xender, QQ Music, QQ Newsfeed, Bigo Live, SelfieCity, Mail Master, Parallel Space, Mi Video Call – , Xiaomi, WeSync, ES File Explorer, Viva Video – QU Video Inc, Meitu, Vigo Video, New Video Status, DU Recorder, Vault- Hide, Cache Cleaner DU App studio, DU Cleaner, DU Browser, Hago Play With New Friends, Cam Scanner, Clean Master – Cheetah Mobile, Wonder Camera, Photo Wonder, QQ Player, We Meet, Sweet Selfie, Baidu Translate, Vmate, QQ International, QQ Security Center, QQ Launcher, U Video, V fly Status Video, Mobile Legends, DU Privacy
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












