ಬಿಹಾರದಲ್ಲಿ ಹೆಚ್ಚಿದ ಕೊರೋನ ಭೀತಿ: ಕ್ಯಾಬಿನೆಟ್ ಸಚಿವ ಮತ್ತು ಪತ್ನಿಗೆ ಕೊರೋನ ದೃಢ

0
510

ಸನ್ಮಾರ್ಗ ವಾರ್ತೆ

ಪಾಟ್ನಾ,ಜೂ.30: ಬಿಹಾರದ ಕ್ಯಾಬಿನೆಟ್ ಮಂತ್ರಿ ಮತ್ತು ಅವರ ಪತ್ನಿಗೆ ಕೊರೋನ ದೃಢ ವಾಗಿದೆ. ಬಿಹಾರದಲ್ಲಿ ಕಳೆದ 24 ಗಂಟೆಗಳಲ್ಲಿ 389 ಹೊಸ ಕೋವಿಡ್-19 ಪ್ರಕರಣಗಳ ವರದಿಯಾಗಿವೆ. ಕೊರೋನ ವೈರಸ್ ಬಿಹಾರದಲ್ಲಿ ಭಾರಿ ಬೆದರಿಕೆಯಾಗಿ ಮುಂದುವರೆದಿದೆ. ಬಿಹಾರ 78% ಚೇತರಿಕೆ ದರದ ಪ್ರಮಾಣವನ್ನು ಹೊಂದಿದೆ.

ಸಚಿವರು ಮತ್ತು ಅವರ ಪತ್ನಿ ಹೊರತಾಗಿ, ಉತ್ತರ ಬಿಹಾರದ ಮತ್ತೊಬ್ಬ ಶಾಸಕರೂ ಸಹ ಕೊರೋನವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಧನಾತ್ಮಕ ಪರೀಕ್ಷೆ ನಡೆಸಿದ ಸಚಿವರನ್ನು ಪತ್ನಿ ಜೊತೆಗೆ ಕತಿಹಾರ್‌ನ ಹೋಟೆಲ್‌ವೊಂದರಲ್ಲಿ ಐಸೋಲೇಷನ್‌ನಲ್ಲಿ ಇರಿಸಲಾಗಿದೆ. ಏತನ್ಮಧ್ಯೆ, ಮಾಜಿ ಕೇಂದ್ರ ಸಚಿವ ರಘುವಂಶ್ ಪ್ರಸಾದ್ ಸಿಂಗ್ ಅವರು ಕೋವಿಡ್ -19 ನಿಂದ ಚೇತರಿಸಿಕೊಂಡಿದ್ದಾರೆ.

ಆರೋಗ್ಯ ಕಾರ್ಯದರ್ಶಿ ಲೋಕೇಶ್ ಕುಮಾರ್ ಸಿಂಗ್ ಸೋಮವಾರ ಮಾತನಾಡಿ, ಕಳೆದ 24 ಗಂಟೆಗಳಲ್ಲಿ 218 ಜನರು ಕೊರೋನ ವೈರಸ್ ನಿಂದ ಚೇತರಿಸಿಕೊಂಡಿದ್ದಾರೆ ಎಂದಿದ್ದು, ಬಿಹಾರದಲ್ಲಿ ಒಟ್ಟು ಚೇತರಿಸಿಕೊಂಡ ರೋಗಿಗಳ ಸಂಖ್ಯೆಯನ್ನು 7,374 ಕ್ಕೆ ತಲುಪಿದೆ. ಬಿಹಾರದಲ್ಲಿ ಇದುವರೆಗೆ ದಾಖಲಾದ 9,506 ಕೊರೋನ ವೈರಸ್ ಪ್ರಕರಣಗಳಲ್ಲಿ, ಸೋಮವಾರ ವರದಿಯಾದ ಸಕ್ರಿಯ ಪ್ರಕರಣಗಳ ಸಂಖ್ಯೆ 2,069 ಆಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.