ಗಡಿ ಉದ್ವಿಗ್ನತೆ: ಗಡಿಯಲ್ಲಿ ಸೈನಿಕರನ್ನು ಹೆಚ್ಚಿಸಿದ ಚೀನ

0
709

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಮೇ.26: ವಿವಾದ ಪ್ರದೇಶವಾದ ಭಾರತ-ಚೀನ ಗಡಿಯ ಲಡಾಕ್‍ನಲ್ಲಿ ಚೀನಾ ತನ್ನ ಸೈನಿಕರ ಬಲವನ್ನು 5000ಕ್ಕೆ ಹೆಚ್ಚಿಸಿದೆ. ಚೀನದ ಕ್ರಮವನ್ನು ಗಮನಿಸಿ ಭಾರತವೂ ಇಲ್ಲಿಗೆ ಹೆಚ್ಚುವರಿ ಸೈನಿಕರನ್ನು ಕಳುಹಿಸಿದೆ. ಗಡಿಯಲ್ಲಿ ನಾಲ್ಕು ಕಡೆ ಭಾರತ ಮತ್ತು ಪಾಕಿಸ್ತಾನದ ಸೈನಿಕರು ನೇರನೇರಾ ಎದುರು ಸಿಗುತ್ತಾರೆ. ಉದ್ವಿಗ್ನ ಸ್ಥಿತಿಯನ್ನು ಕಡಿಮೆ ಮಾಡಲು ಸ್ಥಳೀಯ ಸೈನಿಕ ಕಮಾಂಡರ್‌ಗಳ ನಡುವೆ ಹಲವು ಬಾರಿ ಚರ್ಚೆ ನಡೆದಿದೆ. ಆದರೂ ಪ್ರಯೋಜನವಾಗಿಲ್ಲ.

ಇದೇ ವೇಳೆ ನಿಯಂತ್ರಣರೇಖೆಯಲ್ಲಿ ಪ್ರತ್ಯೇಕ ಸ್ಥಳದಲ್ಲಿ ಚೀನಾದ ಸೈನಿಕರು ಡೇರೆಹೂಡಿಲ್ಲ. ಅವರ ಪ್ರದೇಶದಲ್ಲಿ ಹಲವು ಸ್ಥಳಗಳಲ್ಲಿ ಅವರು ತಂಗಿದ್ದಾರೆ ಎಂದು ಭಾರತದ ಅಧಿಕಾರಿಗಳು ತಿಳಿಸಿದರು. ಚೀನ‌‌ ನಡೆಸುತ್ತಿರು ಎಲ್ಲ ಚಟುವಟಿಕೆಗಳ ಮೇಲೆ ಭಾರತ ಕಟ್ಟೆಚ್ಚರದ ನಿಗಾ ಇರಿಸಿದೆ.

73 ದಿನಗಳವರೆಗೆ ನಡೆದ 20-17ರ ದೊಕ್ಲಾಮ ಘರ್ಷಣೆಗಿಂತ ಲಡಾಕ್‍ನಲ್ಲಿರುವ ಘರ್ಷಣೆ ಕಠಿಣವಾಗಿರಲಿದೆ ಎಂದು ಚೀನದ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಲಡಾಕ್ ಅಲ್ಲದೆ ಉತ್ತರಖಂಡ್ ಗಡಿಯಲ್ಲಿಯೂ ಭಾರತೀಯ ಸೈನಿಕರಿದ್ದಾರೆ.