ಚೀನದಲ್ಲಿ ಅಮೆರಿಕದ ಮಾಧ್ಯಮಗಳಿಗೆ ನಿಯಂತ್ರಣ

0
591

ಸನ್ಮಾರ್ಗ ವಾರ್ತೆ

ಬೀಜಿಂಗ್, ಮಾ. 19: ಚೀನದಿಂದ ಅಮೆರಿಕದ ಮೂರು ಮಾಧ್ಯಮಗಳಿಗೆ ಸಂಬಂಧಿಸಿದ ಪತ್ರಕರ್ತರನ್ನು ಹೊರಹಾಕುವ ಪ್ರಕ್ರಿಯೆ ಆರಂಭವಾಗಿದೆ. ಚೀನದ ಪತ್ರಕರ್ತರಿಗೆ ಅಮೆರಿಕದಲ್ಲಿ ನಿಯಂತ್ರಣಗಳನ್ನು ಹೇರಿದ ಬೆನ್ನಿಗೆ ಈ ಕ್ರಮಕ್ಕೆ ಸರಕಾರ ಮುಂದಗಿದ್ದು ನ್ಯೂಯಾರ್ಕ್ ಟೈಮ್ಸ್, ವಾಲ್‍ಸ್ಟ್ರೀಟ್ ಜರ್ನಲ್, ವಾಷಿಂಗ್ಟನ್ ಪೊಸ್ಟ್ ಪತ್ರಕರ್ತರಿಗೆ 2020 ಕಾಲಾವಧಿ ಕೊನೆಗೊಳ್ಳುವ ಅಕ್ರಡಿಟೇಶನ್ ಪಾಸನ್ನು ಮರಳಿಸಲು ಚೀನ ಸೂಚಿಸಿದೆ.

ಹತ್ತು ದಿವಸದೊಳಗೆ ಇದನ್ನು ಮರಳಿಸಬೇಕೆಂದು ಚೀನದ ಸರಕಾರ ಸೂಚಿಸಿದ್ದು ಎಷ್ಟು ಪತ್ರಕರ್ತರ ವಿರುದ್ಧ ಕ್ರಮ ಜರಗಲಿದೆ ಎಂದು ಸ್ಪಷ್ಟವಾಗಿಲ್ಲ. ಹಾ೦ಕಾಂಗ್ ಮುಂತಾದೆಡೆ ಈ ಹಿಂದೆಯೇ ಪತ್ರಕರ್ತರನ್ನು ಗಡೀಪಾರು ಮಾಡಲಾಗಿತ್ತು. ಇದರ ನಂತರ ಚೀನದಿಂದ ಹೊಸ ಕ್ರಮಕ್ಕೆ ಚಾಲನೆ ನೀಡಲಾಗಿದೆ. ಅಮೆರಿಕದಲ್ಲಿ ಚೀನದ ಐದು ಮಾಧ್ಯಮಗಳ ಪತ್ರಕರ್ತರ ಸಂಖ್ಯೆಯಲ್ಲಿ ನಿಯಂತ್ರಣ ಹೇರಲು ಅಮೆರಿಕ ನಿರ್ಧರಿಸಿತ್ತು. ಕೊರೊನಾ ಜಗತ್ತಿನಾದ್ಯಂತ ಹರಡುತ್ತಿದ್ದು ಚೀನ ಮತ್ತು ಅಮೆರಿಕದ ನಡುವೆ ವಾಗ್ಯುದ್ಧ ನಡೆಯುತ್ತಿದೆ. ಅಮೆರಿಕ ವುಹಾನಕ್ಕೆ ವೈರಸ್ ತಂದು ಹಾಕಿದೆ ಎಂದು ಚೀನ ಆರೋಪಿಸುತ್ತಿದೆ.