ಮೊಬೈಲ್ ಕರೆಗಳ ಮೇಲೆ ನಿಗಾ: ಟೆಲಿಕಾಂ ಕಂಪೆನಿಗಳಿಂದ ದಾಖಲೆ ಕೇಳಿದ ಸರಕಾರ- ಪ್ರತಿಪಕ್ಷದಿಂದ ಪ್ರತಿಭಟನೆ

0
570

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಮಾ.19: ಬೇರೆ ಬೇರೆ ರಾಜ್ಯಗಳ ಮೊಬೈಲ್ ಫೋನ್‍ಗಳ ಸಂಭಾಷಣೆಗಳ ದಾಖಲೆಯನ್ನು (ಕಾಲ್ಡೇಟಾ ರೆಕಾರ್ಡ್) ಕೇಂದ್ರ ಸರಕಾರ ಟೆಲಿಕಾಮ್ ಕಂಪೆನಿಗಳಿಂದ ಕೇಳಿದೆ. ಈ ಬಗ್ಗೆ ಪ್ರತಿಪಕ್ಷಗಳು ಲೋಕಸಭೆಯಲ್ಲಿ ಪ್ರತಿಭಟನೆ ಮಾಡಿದ್ದು ತುರ್ತು ಪ್ರಸ್ತಾವಕ್ಕೆ ನೋಟಿಸು ನೀಡಿದೆ.ಆದರೆ, ಸ್ಪೀಕರ್ ತಿರಸ್ಕರಿಸಿದ್ದಾರೆ. ದಿಲ್ಲಿ, ಮಧ್ಯ ಪ್ರದೇಶ, ಜಮ್ಮು ಕಾಶ್ಮೀರ, ಆಂಧ್ರಪ್ರದೇಶ, ಹರಿಯಾಣ, ಪಂಜಾಬ್‍ಗಳಿಂದ ಕಳೆದ ಕೆಲವು ತಿಂಗಳ ನಿಗದಿತ ದಿವಸಗಳ ಫೋನ್ ಕರೆಗಳ ವಿವರಗಳನ್ನು ಕೇಂದ್ರ ಸರಕಾರ ಕೇಳಿದೆ. ಟೆಲಿಕಾಂ ಸಚಿವಾಲಯದ ಪ್ರಾದೇಶಿಕ ಯುನಿಟ್ ಮೂಲಕ ಇದಕ್ಕೆ ಸಂಬಂಧಿಸಿದ ಸೂಚನೆಗಳನ್ನು ಆಪರೇಟರ್ ಗಳಿಗೆ ಕಳುಹಿಸಿಕೊಡಲಾಗಿದೆ. ಆದರೆ ಜನವರಿ, ಫೆಬ್ರವರಿ ತಿಂಗಳ ಕಾಲ್‍ಡೇಟಗಳನ್ನು ಬೃಹತ್ತಾಗಿ ಕೇಂದ್ರ ಸರಕಾರ ಪಡೆಯಲು ಆರಂಭಿಸಿದೆ ಎಂದು ಒಂದು ಟೆಲಿಕಾಂ ಕಂಪೆನಿಯ ಹಿರಿಯ ಅಧಿಕಾರಿ ಬಹಿರಂಗಪಡಿಸಿದರು.

ಫೆಬ್ರವರಿ 12ಕ್ಕೆ ಮಾಹಿತಿ ಕೇಳಿದ ಕುರಿತು ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯ ದೂರು ನೀಡಿತ್ತು. ಟೆಲಿಕಾಂ ಆಪರೇಟರ್ ಗಳಿಂದ ವಿವರ ಸಂಗ್ರಹಿಸುವ ಅಧಿಕಾರವನ್ನು ಎಸ್ಪಿ ಮತ್ತು ಅದಕ್ಕಿಂತ ಮೇಲಿನ ಅಧಿಕಾರಿಗಳಿಗೆ ಮಾತ್ರ ಮಿತಿಗೊಳಿಸುವ ಹೊಸ ನಿಯಮವನ್ನು 2013ರಲ್ಲಿ ತರಲಾಗಿತ್ತು. ಟೆಲಿಕಾಂ ಇಲಾಖೆಯ ಸೂಚನೆ ಈ ನಿಯಮಗಳಿಗೆ ವಿರುದ್ಧವಾಗಿದೆ. 53 ಲಕ್ಷ ಚಂದಾದಾರರು ಮೊಬೈಲ್ ಫೋನ್‍ಗೆ ದಿಲ್ಲಿಯಲ್ಲಿದ್ದಾರೆ. ಫೆಬ್ರವರಿ ಎರಡರಿಂದ ನಾಲ್ಕರವೆರಗಿನ ಕಾಲ್ ಡಾಟ ರಿಕಾರ್ಡನ್ನು ಕೇಳಲಾಗಿದೆ. ಇದು ಪೌರತ್ವ ಕಾನೂನು ವಿರುದ್ಧ ಪ್ರತಿಭಟನೆ ನಡೆದ ಸಮಯ ಕೂಡ ಆಗಿದೆ. ವಿಧಾನಸಭಾ ಚುನಾವಣೆ ಪ್ರಚಾರ ಫೆಬ್ರವರಿ ಆರರಂದು ಕೊನೆಗೊಂಡಿತ್ತು. ಈ ಕುರಿತು ಕಾಂಗ್ರೆಸ್‍ನ ಮನೀಶ್ ತಿವಾರಿ, ಬೆನ್ನಿ ಬೆಹಾನ್ನನ್, ಮಾಣಿಕ್ ಠಾಗೋರ್ ಲೋಕಸಭೆಯಲ್ಲಿ ತುರ್ತು ಪ್ರಸ್ತಾವಕ್ಕೆ ನೋಟಿಸು ನೀಡಿದ್ದಾರೆ.

ಕಾಲ್‍ಡೇಟಾ ದಾಖಲೆ:

ಮೊಬೈಲ್ ಚಂದಾದಾರರ ಹೆಸರು, ಎಷ್ಟು ಸಮಯ ಮಾತಾಡಿದರು, ಫೋನ್ ಕರೆ ಅಸಧಾರಣವಾಗಿ ಕೊನೆಗೊಂಡಿದೆಯೇ ಮುಂತಾದ ವಿವರಗಳು ಮತ್ತು ಸಂಭಾಷಣೆ ಮಾಡಿದವರು ಇದ್ದ ಸ್ಥಳ ಇತ್ಯಾದಿ ವಿವರಗಳ ಕಾಲ್ ರೆಕಾರ್ಡ್ ಕೇಳಲಾಗಿದೆ. ಇದು ಒಂದು ವರ್ಷದವರೆಗೆ ಮೊಬೈಲ್ ಕಂಪೆನಿಗಳಲ್ಲಿ ಇರಿಸಿಕೊಳ್ಳಬೇಕೆಂಬ ನಿಯಮ ಇದೆ. ತನಿಖಾ ಏಜನ್ಸಿಗಳು, ಕೋರ್ಟುಗಳು ಕೇಳಿದರೆ ಕೊಡಬೇಕಾಗಿದೆ.