ಕೊರೊನಾಕ್ಕೆ ಜಪಾನ್ ನಿರ್ಮಿತ ಮದ್ದು ಪರಿಣಾಮಕಾರಿ; ನಾವು ಪರೀಕ್ಷಿಸಿದ್ದೇವೆ- ಚೀನಾ

0
1770

ಸನ್ಮಾರ್ಗ ವಾರ್ತೆ

ಬೀಜಿಂಗ್, ಮಾ.19: ಜಪಾನ್ ನಿರ್ಮಿತ ಫಾವಿಪಿರವಿರ್ ಎಂಬ ಮದ್ದು ಕೊರೊನಾ ಚಿಕಿತ್ಸೆಯಲ್ಲಿ ಫಲಪ್ರದವಾಗಿದೆ ಎಂದು ಚೀನದ ಆರೋಗ್ಯ ತಜ್ಞರು ಹೇಳಿದರು. ಫಾವಿಪಿರವಿರ್ ಘಟಕ ಇರುವ ಮದ್ದು ಆಂಟಿ ಪ್ಲೂ ಏಜೆಂಟ್ ಅವಿಗಾನ್ 300ಕ್ಕೂ ಹೆಚ್ಚು ಕೊರೊನಾ ಪೀಡಿತರಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು ಎಂದು ಚೀನ ಹೇಳಿಕೊಂಡಿದೆ. ಈ ಮದ್ದು ಪರೀಕ್ಷಿಸಿದಾಗ ರೋಗಿಗಳು ತಕ್ಷಣ ರೋಗಮುಕ್ತರಾದರೆಂದು ವರದಿ ತಿಳಿಸಿದೆ. ರೋಗಿಗಳ ಶ್ವಾಸಕೋಶ ಸಂಬಂಧಿಸಿದ ಸಮಸ್ಯೆಗಳು ಫಾವಿಪಿರವಿರ್ ಪರೀಕ್ಷಿಸಿದವರಲ್ಲಿ ಉತ್ತಮಗೊಂಡಿದೆ. ಅವಿಗಾನ್‍ನ ಫಾವಿಪಿರಾವಿರ್ ಎಂಬ ಘಟಕ ವೈರಸ್ ಶರೀರದಲ್ಲಿ ವ್ಯಾಪಿಸದಂತೆ ತಡೆಯುತ್ತದೆ ಎಂದು ಚೀನದ ವೈದ್ಯಕೀಯ ವಿಜ್ಞಾನ ತಜ್ಲರು ತಿಳಿಸಿದ್ದಾರೆ. ಜೊತೆಗೆ ಮದ್ದಿಗೆ ಅಡ್ಡ ಪರಿಣಾಮಗಳು ಇಲ್ಲ ಎಂದು ಚೀನದ ಸಯನ್ಸ್ ಆಂಡ್ ಟೆಕ್ನಾಲಜಿ ಸಚಿವಾಲಯ ತಿಳಿಸಿದೆ.

ಹಾಕಾಂಗ್‍ನ ಸಸಿಹ್ವಾನ್ ಫಾರ್ಮಸ್ಯೂಟಿಕಲ್ಸ್ ಫಾವಿಪಿರವಿರ್ ಉಪಯೋಗಿಸಿದ ಮದ್ದನ್ನು ಕೊರೊನಾ ಪೀಡಿತರಿಗೆ ಪರೀಕ್ಷಿಸುವ ಸಿದ್ಧತೆ ಮಾಡಿಕೊಂಡಿದೆ. ಚೀನದ ವೈರಸ್‍ ಅನ್ನು ಪ್ರತಿರೋಧಿಸಲು ವ್ಯಾಕ್ಸಿನ್ ನಿರ್ಮಿಸುವ ಕಾರ್ಯವೂ ತ್ವರಿತಗತಿಯಲ್ಲಿ ಮುಂದುವರಿದಿದೆ.