ಮತಾಂತರದ ನೆಪದಲ್ಲಿ ಕ್ರೈಸ್ತ ಯುವತಿಯರಿಗೆ ಥಳಿತ: ತೆಲಂಗಾಣದಲ್ಲಿ ಕ್ರೂರ ಕೃತ್ಯ

0
195

ಸನ್ಮಾರ್ಗ ವಾರ್ತೆ

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದ ಘಟನೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿನ ಮಹೇಶ್ವರಂ ಮಂಡಲದ ಅಲ್ಮಾಸ್ ಗೂಡ ಪ್ರದೇಶದಲ್ಲಿ ಇಬ್ಬರು ಯುವ ಕ್ರಿಶ್ಚಿಯನ್ ಮಹಿಳೆಯರಿಗೆ ಮತಾಂತರದ ನೆಪದಲ್ಲಿ ಪುರುಷರು ಥಳಿಸುತ್ತಿರುವ ವಿಡಿಯೋ ಬಹಿರಂಗಕ್ಕೆ ಬಂದಿದ್ದು ವ್ಯಾಪಕ ವಿರೋಧ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.

ಈ ಘಟನೆ ಅಕ್ಟೋಬರ್ ನಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದ್ದು ನವೆಂಬರ್ ಮೂರರಂದು ಬಹಿರಂಗಕ್ಕೆ ಬಂದಿದೆ.

ಇವರು ಮಕ್ಕಳಿಗೆ ಚಾಕಲೇಟ್ ಕೊಟ್ಟು ಮತಾಂತರ ಮಾಡ್ತಾ ಇದ್ದಾರೆ ಎಂದು ಪುರುಷರ ಗುಂಪು ಆರೋಪಿಸಿದೆ. ಕ್ರೈಸ್ತ ಧರ್ಮವನ್ನು ಪ್ರಚಾರ ಮಾಡ್ತಾ ಇದ್ದಾರೆ, ಬೈಬಲ್ನ ಕರಪತ್ರಗಳನ್ನು ಹಂಚುತ್ತಾ ಇದ್ದಾರೆ ಎಂದು ಗುಂಪು ಆರೋಪಿಸಿದೆ.

ಈ ಇಬ್ಬರು ಯುವತಿಯರ ಬ್ಯಾಗನ್ನು ಓರ್ವ ವ್ಯಕ್ತಿ ಪರಿಶೀಲಿಸಿದ್ದಾರೆ. ವೇಶ್ಯೆಯರು ಎಂದು ಅವಮಾನಕರವಾಗಿ ಬೈದಿದ್ದಾನೆ. ಮಾತ್ರ ಅಲ್ಲ ಇಬ್ಬರು ಯುವತಿಯರ ಕೆನ್ನೆಗೆ ಬಾರಿಸಿದ್ದಾನೆ . ಪದೇ ಪದೇ ಈತ ಯುವತಿಯ ಕೆನ್ನೆಗೆ ಬಾರಿಸುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ನಾವು ಅತ್ತೆಯನ್ನು ನೋಡಲು ಬಂದಿದ್ದೇವೆ ಎಂದು ಈ ಯುವತಿಯರು ಹೇಳಿದ್ರೂ ಆತ ಅದನ್ನು ಒಪ್ಪಿಕೊಳ್ಳದೆ ಥಳಿಸುತ್ತಿರುವುದು ವಿಡಿಯೋದಲ್ಲಿದೆ.

ಮೀರ್ಪೇಟ್ ಪೊಲೀಸರು ಘಟನೆ ನಡೆದಿರುವುದನ್ನು ದೃಢೀಕರಿಸಿದ್ದಾರೆ. ಆರಂಭದಲ್ಲಿ ಯಾರೂ ದೂರು ನೀಡಿರಲಿಲ್ಲ. ಆದರೆ ನಂತರ ಹೈದರಾಬಾದ್ ಸಿಟಿ ಪೊಲೀಸ್ ಟ್ವೀಟ್ ನಲ್ಲಿ ತಿಳಿಸಿರುವಂತೆ ಸ್ಟೇಷನ್ ಹೆಡ್ ಆಫೀಸರ್ ಪ್ರಕರಣ ದಾಖಲಿಸಿದ್ದಾರೆ ಮತ್ತು ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ ಎಂದು ತಿಳಿಸಲಾಗಿದೆ.

ಈ ವಿಡಿಯೋ ಬಹಿರಂಗಕ್ಕೆ ಬಂದ ಬಳಿಕ ಕ್ರಿಶ್ಚಿಯನ್ ಗುಂಪುಗಳು ಸೇರಿದಂತೆ ವಿವಿಧ ಮಾನವ ಹಕ್ಕು ಗುಂಪುಗಳು ಘಟನೆಯನ್ನು ಖಂಡಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದುವು.

ಕಾಂಗ್ರೆಸ್ ಆಡಳಿತ ಇರುವ ತೆಲಂಗಾಣದಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರ ವಿರುದ್ಧ ಪದೇ ಪದೇ ದಾಳಿಗಳು ಆಗ್ತಾ ಇದೆ ಶಾಲೆಗೆ ನುಗ್ಗಿ ಮುಸ್ಲಿಂ ಶಿಕ್ಷಕರ ಮೇಲೆ ಹಲವು ಬಾರಿ ದಾಳಿಯಾಗಿದೆ. ಪದೇ ಪದೇ ದಾಳಿ ಆಗ್ತಾ ಇದ್ರೂ ಇದರ ನಿಯಂತ್ರಣ ಯಾಕೆ ಆಗ್ತಾ ಇಲ್ಲ ಎಂಬ ಪ್ರಶ್ನೆ ಸಾರ್ವಜನಿಕವಾಗಿ ಎದ್ದಿದೆ.

ದಿನಗಳ ಹಿಂದಷ್ಟೇ ಗೃಹ ಸಚಿವ ಅಮಿತ್ ಶಾ ಅವರು ಚಾರ್ಮಿನಾರ್ ಬಳಿಯ ವಿವಾದಿತ ಮಂದಿರಕ್ಕೆ ಭೇಟಿ ಕೊಟ್ಟಿದ್ದರು. ದೆಹಲಿಯಲ್ಲಿ ನಡೆದ ಜ್ಞಾನೇಶ್ ವಿರೋಧಿ ಪ್ರತಿಭಟನೆಯಲ್ಲಿ ತೆಲಂಗಾಣದ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಅತ್ಯಂತ ತೀವ್ರವಾಗಿ ಆರ್ ಎಸ್ ಎಸ್ ಮತ್ತು ಬಿಜೆಪಿಯನ್ನು ಟೀಕಿಸಿದ್ದರು. ತೆಲಂಗಾಣದಲ್ಲಿ ಕಾಂಗ್ರೆಸ್ ವಿರೋಧಿ ಭಾವವನ್ನು ಹರಡುವುದಕ್ಕಾಗಿ ಯೋಜಿತವಾಗಿ ಇಂತಹ ಹಲ್ಲೆಗಳು ಮತ್ತು ದಾಳಿಗಳು ನಡೆಯುತ್ತಿವೆಯ ಎಂಬ ಅನುಮಾನವೂ ಮೂಡಿದೆ.