ಅಮೆರಿಕನ್ ಚುನಾವಣೆ: ಮೋದಿ ಬೆಂಬಲಿಗ ವಿವೇಕ್ ರಾಮಸ್ವಾಮಿ ಸೋಲು

0
242

ಸನ್ಮಾರ್ಗ ವಾರ್ತೆ

ಅಮೆರಿಕಾದ ಮಧ್ಯಂತರ ಚುನಾವಣೆಯಲ್ಲಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷಕ್ಕೆ ಭಾರಿ ಸೋಲಾಗಿರುವುದಷ್ಟೇ ಅಲ್ಲ ಪ್ರಧಾನಿ ಮೋದಿ ಅವರನ್ನು ಪ್ರಶಂಸಿಸುತ್ತಾ ಮತ್ತು ಟ್ರಂಪ್ ಮತ್ತು ಮೋದಿಯವರ ಸಂಬಂಧದ ಬಗ್ಗೆ ಹೆಮ್ಮೆಪಟ್ಟು ಕೊಂಡಿದ್ದ ವಿವೇಕ್ ರಾಮಸ್ವಾಮಿ ಸೋತಿದ್ದಾರೆ.

ಈ ಸೋಲು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇವರಿಗೆ ಟ್ರಂಪ್ ಮಾತ್ರ ಅಲ್ಲ ಎಲಾನ್ ಮಸ್ಕ್ ಕೂಡ ಬೆಂಬಲ ನೀಡಿದ್ದರು. ಇವರ ವಿರುದ್ಧ ಸ್ಪರ್ಧಿಸಿದ್ದ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಯಾಮಿ ಆಕ್ಟನ್ ಅವರು ಜಯಗಳಿಸಿದ್ದಾರೆ. ಈ ಮೂಲಕ ಕಳೆದ 20 ವರ್ಷಗಳಿಂದ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ವಶದಲ್ಲಿದ್ದ ಗವರ್ನರ್ ಹುದ್ದೆಯನ್ನು ಡೆಮಾಕ್ರಾಟ್ ಗಳು ಮರಳಿ ಪಡೆದುಕೊಂಡಿದ್ದಾರೆ.

ಬಯೋಟೆಕ್ನಾಲಜಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ರಾಮಸ್ವಾಮಿ ಶತಕೋಟಿಯಾಧಿಪತಿ. 2024ರ ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ನಾಮನಿರ್ದೇಶನಕ್ಕಾಗಿ ಸ್ಪರ್ಧಿಸಿದವರು ಇವರು. ಟ್ರಂಪ ಅವರೊಂದಿಗೆ ನಿಕಟ ನಂಟಿದೆ. ಚುನಾವಣಾ ಪ್ರಚಾರದ ಅಂತಿಮ ವಾರಗಳಲ್ಲಿ ಟ್ರಂಪ್ ಇವರ ಪರ ಪ್ರಚಾರ ಮಾಡಿದ್ದರು. ಅಮೆರಿಕಾದ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್ ಕೂಡ ವಹಾಯೋದಲ್ಲಿ ಹಲವು ಬಾರಿ ಇವರ ಪರ ಪ್ರಚಾರ ನಡೆಸಿದ್ದರು.

ಪ್ರಚಾರದ ಸಮಯದಲ್ಲಿ ರಾಮಸ್ವಾಮಿ ಅವರ ಜಾಹೀರಾತು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಎದುರಾಳಿ ಆಕ್ಟನ್ ಅವರಿಂದ ಅವರ ತಾಯಿ ದೂರ ಸರಿದಿದ್ದಾರೆ ಎಂಬ ರೀತಿಯಲ್ಲಿ ಅವರು ಜಾಹೀರಾತು ಕೊಟ್ಟಿದ್ದರು. ತಮ್ಮ ಬಾಲ್ಯದ ಬಗ್ಗೆ ಆಕ್ಟನ್ ಸುಳ್ಳು ಹೇಳಿದ್ದಾರೆ ಎಂದು ಜಾಹೀರಾತಿನಲ್ಲಿ ಟೀಕೆ ಮಾಡಿದ್ದರು. ಆದರೆ ಈ ಜಾಹೀರಾತಿಗೆ ತೀವ್ರ ವಿರೋಧ ವ್ಯಕ್ತವಾಯಿತು. ಎಲ್ಲಿಯವರೆಗೆ ಎಂದರೆ ರಿಪಬ್ಲಿಕನ್ ಪಕ್ಷದ ಪ್ರೈಮರಿಯಲ್ಲಿ ಸ್ಪರ್ಧಿಸಿದ್ದ ಕೇಶಿ ಪುಟ್ ಶ್ ಅವರು ತಾನು ಆಕ್ಟನ್ ಗೆ ಮತ ಚಲಾಯಿಸುವುದಾಗಿ ಬಹಿರಂಗವಾಗಿ ಘೋಷಿಸಿದರು.

ಪ್ರಧಾನಿ ನರೇಂದ್ರ ಮೋದಿಯನ್ನು ಪ್ರಶಂಸಿಸಿ ಮತ್ತು ಭಾರತ ಹಾಗೂ ಅಮೆರಿಕದ ಸಂಬಂಧವನ್ನು ಬಲಪಡಿಸಿಸಬೇಕಾದಾಗ ಅಗತ್ಯವನ್ನು ಈ ರಾಮಸ್ವಾಮಿ ಒತ್ತುಕೊಟ್ಟು ಪ್ರಚಾರದಲ್ಲಿ ಮಾತಾಡಿದ್ದರು. ವಾಷಿಂಗ್ಟನ್ ಬ್ಲೇರ್ ಹೌಸ್ ನಲ್ಲಿ ಮೋದಿ ಯೊಂದಿಗೆ ನಡೆಸಿದ ಸಭೆಯ ನಂತರ ಭಾರತದ ಪ್ರಧಾನಿಯನ್ನು ಅಮೆರಿಕಕ್ಕೆ ಸ್ವಾಗತಿಸಲು ಸಾಧ್ಯವಾಗಿದ್ದು ಸಂತೋಷದ ಮತ್ತು ಹೆಮ್ಮೆಯ ವಿಷಯ ಎಂದು ರಾಮಸ್ವಾಮಿ ಪ್ರತಿಕ್ರಿಯಿಸಿದ್ದರು.

ಕೇರಳ ಮೂಲದ ವಲಸಿಗರ ಮಗನಾದ ವಿವೇಕ ರಾಮಸ್ವಾಮಿ ಜನಿಸಿದ್ದು ವಹಾಯೋ ಸಿನ್ಸಿನಾಟಿಯಲ್ಲಿ. ಇವರ ಪೋಷಕರು ಕೇರಳದ ಪಾಲಕ್ಕಾಡಿ ಜಿಲ್ಲೆಯ ವಡಕಂಚೇರಿಯಿಂದ ಅಮೆರಿಕಕ್ಕೆ ವಲಸೆ ಹೋದವರಾಗಿದ್ದಾರೆ. ಇದೀಗ ರಾಮಸ್ವಾಮಿಯ ಸೋಲನ್ನು ಪ್ರಧಾನಿ ನರೇಂದ್ರ ಮೋದಿ ಯವರ ಜೊತೆಗೆ ಸೇರಿಸಿಕೊಂಡು ನೋಡಲಾಗುತ್ತಿದೆ. ಟ್ರಂಪ್ ಅವರಿಗೆ ಮುಖಭಂಗವಾಗಿದೆ. ಇದೇ ಟ್ರಂಪನ್ನು ಪ್ರಧಾನಿ ನರೇಂದ್ರ ಮೋದಿಯವರು ತನ್ನ ಅತ್ಯಾಪ್ತ ಸ್ನೇಹಿತ ಎಂದು ಹೇಳುತ್ತಾರೆ. ಇದೇ ಮೋದಿಯನ್ನು ರಾಮಸ್ವಾಮಿ ಬಹಳವಾಗಿ ಪ್ರಶಂಶಿಸುತ್ತಾರೆ. ಇಬ್ಬರಿಗೂ ಇದೀಗ ಮುಖಭಂಗವಾಗಿದೆ ಎಂದು ಹೇಳಲಾಗುತ್ತಿದೆ.