ಅರಬ್ಬೀ ಸಮುದ್ರದಲ್ಲಿ ನಿಮ್ನ ಒತ್ತಡ: ಸುಂಟರಗಾಳಿ ಬೀಸುವ ಸಾಧ್ಯತೆ

0
512

ಸನ್ಮಾರ್ಗ‌ ವಾರ್ತೆ

ತಿರುವನಂತಪುರಂ,ಡಿ.4: ಅರಬ್ಬೀ ಸಮುದ್ರದಲ್ಲಿ ರೂಪುಗೊಂಡಿರುವ ನಿಮ್ನ ಒತ್ತಡದಿಂದಾಗಿ ಹನ್ನೆರಡು ಗಂಟೆಯೊಳಗೆ ಸುಂಟರಗಾಳಿಯಾಗಿ ಬದಲಾಗುವ ಸಾಧ್ಯತೆಯಿದೆ ಎಂದು ಹವಾಮಾನ ನಿರೀಕ್ಷಣಾ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ. ಆದರೆ, ಭಾರತದ ಕರಾವಳಿಗೆ ಬರುವ ಸಾಧ್ಯತೆಯಿಲ್ಲ. ಗೋವಾ, ಮಹಾರಾಷ್ಟ್ರ, ಲಕ್ಷದ್ವೀಪಗಳಲ್ಲಿ ಭಾರೀ ಮಳೆ ಸಾಧ್ಯತೆ ಇದೆ. ಅರಬಿ ಸಮುದ್ರದ ದಕ್ಷಿಣ ಭಾಗದಲ್ಲಿ ನಿಮ್ಮ ಒತ್ತಡ ರೂಪುಗೊಂಡು ಬಲವರ್ಧಿಸಿದೆ ಎಂದೂ ನಿನ್ನೆ ಹವಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿತ್ತು. ಕೇರಳ, ಕರ್ನಾಟಕ, ಲಕ್ಷದ್ವೀಪ ತೀರಗಳಲ್ಲಿ ಮೀನುಗಾರರು ಮೀನುಗಾರಿಕೆಗೆ ತೆರಳಬಾರದೆಂದು ಸೂಚಿಸಲಾಗಿದ್ದು. ಮುಂದಿನ 12 ಗಂಟೆಗಳಲ್ಲಿ 60ರಿಂದ 70 ಕಿ.ಮೀ ವೇಗದಲ್ಲಿ ಗಾಳಿಬೀಸಬಹುದು. ಕೆಲವು ಸಂದರ್ಭದಲ್ಲಿ ಇದು ಎಂಬತ್ತು ಕಿಲೊಮೀಟರ್ ವೇಗದಲ್ಲಿಯೂ ಬೀಸುವ ಸಾಧ್ಯತೆಯಿದೆ.