ನ್ಯಾಯಾಧೀಶರ ನೇಮಕದಲ್ಲಿ ಕೇಂದ್ರ ಮಧ್ಯ ಪ್ರವೇಶ: ಆಘಾತಕಾರಿ ಮಾಹಿತಿ ಬಹಿರಂಗ ಪಡಿಸಿದ ಸುಪ್ರೀಂ ಕೋರ್ಟ್

0
240

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಮತ್ತು ಹೈ ಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ನೇಮಿಸುವಂತೆ ಕೇಂದ್ರ ಸರ್ಕಾರ ಕೆಲವು ಹೆಸರುಗಳನ್ನು ಸೂಚಿಸಿತ್ತು ಎಂಬ ಆಘಾತಕಾರಿ ಮಾಹಿತಿಯನ್ನು ಸುಪ್ರೀಂ ಕೋರ್ಟ್ ಬಹಿರಂಗಪಡಿಸಿದೆ. ಆದರೆ ಆ ಹೆಸರುಗಳಲ್ಲಿ ಯಾವುದನ್ನೂ ಕೊಲಿಜಿಯಂ ಶಿಫಾರಸುಗಳ ಪಟ್ಟಿಯಲ್ಲಿ ಸೇರಿಸಿಲ್ಲ ಎಂದು ಜಸ್ಟಿಸ್ ಸಂಜಯ್ ಕಿಶನ್ ಕೌಲ್ ಅಧ್ಯಕ್ಷರಾಗಿರುವ ಬೆಂಚ್ ಸ್ಪಷ್ಟಪಡಿಸಿದೆ.

ನ್ಯಾಯಾಧೀಶರು ಗಳನ್ನು ನೇಮಕಗೊಳಿಸುವ ಬಗ್ಗೆ ಕೊಲಿಜಿಯಮ್ ಮಾಡಿದ ಶಿಫಾರಸುಗಳನ್ನು ಕೇಂದ್ರ ಸರಕಾರ ಜಾರಿ ಮಾಡದೆ ಇರುವುದನ್ನು ಪ್ರಶ್ನಿಸಿ, ಸಲ್ಲಿಸಲಾದ ಅರ್ಜಿಯ ಮೇಲೆ ವಿಚಾರಣೆ ನಡೆಸುತ್ತಾ ನ್ಯಾಯಾಧೀಶರು ಹೀಗೆ ಹೇಳಿದ್ದಾರೆ.

22 ನ್ಯಾಯಾಧೀಶರ ಹೆಸರನ್ನು ಕೊಲಿಜಿಯಂ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಅದನ್ನು ಒಪ್ಪಿಕೊಳ್ಳದೆ ಮರಳಿಸಿತ್ತು. ಆ ಬಳಿಕ ಕೊಲಿಜಿಯಂ ಅದೇ ಹೆಸರನ್ನು ಮರಳಿ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿತ್ತು. ಈ ವಿಷಯವನ್ನು ಕೇಂದ್ರ ಸರಕಾರದ ಅಟಾರ್ನಿ ಜನರಲ್ ಅವರ ಗಮನಕ್ಕೆ ತರುವ ಸಂದರ್ಭದಲ್ಲಿ ನ್ಯಾಯಾಧೀಶರಾದ ಕೌಲ್ ಅವರು ಈ ಬೆಚ್ಚಿ ಬೀಳಿಸುವ ಸಂಗತಿಯನ್ನು ಕೂಡ ಬಹಿರಂಗಪಡಿಸಿದ್ದಾರೆ.