ಕೋಮು ಸಾಮರಸ್ಯದ ವಿಡಿಯೋ: ವಿರೋಧ ವ್ಯಕ್ತವಾದ ಬಳಿಕ ಡಿಲೀಟ್ ಮಾಡಿದ ಯೂಟ್ಯೂಬರ್

0
513

ಸನ್ಮಾರ್ಗ ವಾರ್ತೆ

ಧಾರ್ಮಿಕ ಸೌಹಾರ್ದ ಮತ್ತು ಬಹುತ್ವದ ಬಗ್ಗೆ ವಿಡಿಯೋ ಮಾಡಿದ್ದ ಮಹಾರಾಷ್ಟ್ರದ ಅಥರ್ವ ಸುಧಾಮೆ ಎಂಬವರು ವಿರೋಧದ ಬಳಿಕ ವಿಡಿಯೋ ಡಿಲೀಟ್ ಮಾಡಿದ್ದಾರೆ. ಬ್ರಾಹ್ಮಣ ಸಮುದಾಯದ ಗುಂಪೊಂದು ಭಾರಿ ಪ್ರಮಾಣದಲ್ಲಿ ಇವರ ಮೇಲೆ ಒತ್ತಡವನ್ನು ಹಾಕಿತ್ತು. ಸೋಶಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿತ್ತು. ಬಳಿಕ ಸುಧಾಮೆ ಕ್ಷಮೆಯಾಚಿಸಿ ವಿಡಿಯೋ ಡಿಲೀಟ್ ಮಾಡಿದ್ದಾರೆ ಯಾರದೇ ಭಾವನೆಗೆ ನೋವುಂಟು ಮಾಡೋದು ತನ್ನ ಕೆಲಸ ಆಗಿರಲಿಲ್ಲ ಎಂದು ಕೂಡ ಅವರು ಹೇಳಿದ್ದಾರೆ.

ನಾನು ಆ ವಿಡಿಯೋವನ್ನು ಡಿಲೀಟ್ ಮಾಡಿದ್ದೇನೆ. ಸಾಕಷ್ಟು ಮಂದಿ ತಮ್ಮ ಅಸಮಾಧಾನವನ್ನು ಆ ವಿಡಿಯೋಕ್ಕೆ ಸೂಚಿಸಿದ್ದಾರೆ. ನಾನು ಈ ಹಿಂದೆಯೂ ಹಿಂದು ಹಬ್ಬ ಮತ್ತು ಸಂಸ್ಕೃತಿಗೆ ಸಂಬಂಧಿಸಿ ಅನೇಕ ವಿಡಿಯೋಗಳನ್ನು ಮಾಡಿದ್ದೇನೆ. ನನಗೆ ಯಾರದೇ ಭಾವನೆಯನ್ನು ನೋಯಿಸುವ ಉದ್ದೇಶ ಇರಲಿಲ್ಲ ಎಂದು ಅವರು ಹೇಳಿದ್ದಾರೆ.

ಆ ವಿಡಿಯೋದಲ್ಲಿ ಹೀಗಿದೆ. ಸುಧಾಮೆ ಅವರು ಗಣಪತಿ ವಿಗ್ರಹವನ್ನು ಖರೀದಿಸುವುದಕ್ಕಾಗಿ ಒಂದು ಶಾಪ್ ಗೆ ಬರ್ತಾರೆ. ಅಲ್ಲಿರುವ ವಿಗ್ರಹಗಳಲ್ಲಿ ಒಂದನ್ನು ಆಯ್ಕೆ ಮಾಡುತ್ತಾರೆ ಮತ್ತು ಮನೆಗೆ ಕೊಂಡೊಯ್ಯಲು ಬಯಸುತ್ತಾರೆ. ಆಗ ಟೋಪಿ ಧರಿಸಿದ್ದ ಅಂಗಡಿಯ ಮಾಲಕನ ಮಗ ಒಳಗೆ ಬರ್ತಾನೆ.

ಈ ಸಂದರ್ಭದಲ್ಲಿ ಮಾಲಕ ಮಾತಾಡ್ತಾನೆ, ನೀವು ವಿಗ್ರಹವನ್ನು ಖರೀದಿಸದೆ ಮನೆಗೆ ಹೋಗಬಹುದು ಎಂದು ಆತ ಹೇಳ್ತಾನೆ. ನಮ್ಮ ಧರ್ಮ ನಿಮಗೆ ತೊಡಕಾಗಿದ್ದರೆ ಹಾಗೆ ಮಾಡಬಹುದು ಎಂಬುದು ಆತನ ಸೂಚನೆಯಾಗಿತ್ತು. ಆದರೆ ಸುಧಾಮೆ ಆ ವಿಗ್ರಹವನ್ನು ಖರೀದಿಸುವುದಕ್ಕೆ ಮುಂದಾಗುತ್ತಾರೆ.

ನೀವು ಒಳ್ಳೆಯ ಉದ್ದೇಶದಿಂದಲೇ ಈ ಗಣಪತಿಯನ್ನು ತಯಾರಿಸಿದ್ದೀರಲ್ಲವೇ? ನನ್ನ ತಂದೆ ಹೇಳ್ತಾ ಇದ್ರು, ಸಕ್ಕರೆಯು ಶೇವ್ ಕೀರ್ ಮತ್ತು ಶೀರ್ ಕುರ್ಮಾ ಎರಡನ್ನೂ ರುಚಿಯಾಗಿಸುತ್ತದೆ. ಹೇಗಂದರೆ ಒಂದು ಇಟ್ಟಿಗೆಯು ಮಂದಿರಕ್ಕೂ ಬಳಕೆಯಾಗುತ್ತದೆ ಮಸೀದಿಗೂ ಬಳಕೆಯಾಗುತ್ತದೆ ಎಂದು ಹೇಳ್ತಾ ಇದ್ರು ಎಂದು ಸುಧಾಮೆ ಹೇಳ್ತಾರೆ.

ಈ ವಿಡಿಯೋಕ್ಕೆ ಬ್ರಾಹ್ಮಿನ್ ಮಹಾಸಭಾ ಮತ್ತು ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು.