ಅಸ್ಸಾಂನಲ್ಲಿ ಇನ್ನು ಮುಂದೆ ಭೂಮಿ ಖರೀದಿಸುವುದು ಸುಲಭ ಅಲ್ಲ

0
356

ಸನ್ಮಾರ್ಗ ವಾರ್ತೆ

ಅಸ್ಸಾಂನಲ್ಲಿ ಇನ್ನು ಮುಂದೆ ನೇರವಾಗಿ ನಿಮಗೆ ಭೂಮಿ ಖರೀದಿಸಲು ಸಾಧ್ಯವಿಲ್ಲ ಬೇರೆ ಬೇರೆ ಧರ್ಮಕ್ಕೆ ಸೇರಿದ ಮಂದಿ ಭೂಮಿ ಖರೀದಿಸುವುದಕ್ಕಿಂತ ಮೊದಲು ಸರ್ಕಾರದ ಅನುಮತಿಯನ್ನು ಪಡೆಯಬೇಕಾಗುತ್ತದೆ. ಮುಖ್ಯವಾಗಿ ಹಿಂದೂ ಮತ್ತು ಮುಸ್ಲಿಮರ ನಡುವೆ ಭೂಮಿ ಖರೀದಿಯ ವ್ಯವಹಾರಕ್ಕೆ ಮುಖ್ಯಮಂತ್ರಿಯ ಅನುಮತಿ ಅಗತ್ಯ ಎಂದು ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮ ಹೇಳಿದ್ದಾರೆ ಅಸ್ಸಾಮನಿಂದ ಹೊರಗಡೆ ಇರುವ ಎನ್ ಜಿ ಓಗಳು ಕೂಡ ಅಸ್ಸಾಂನಲ್ಲಿ ಭೂಮಿ ಖರೀದಿಸುವುದಾದರೆ ಈ ನಿಯಮಕ್ಕೆ ಒಳಪಟ್ಟೆ ಮಾಡಬೇಕಾಗಿದೆ.

ರಾಜ್ಯದಲ್ಲಿ ಧರ್ಮಕ್ಕೆ ಸಂಬಂಧಿಸಿದ ಘರ್ಷಣೆಯನ್ನು ತಪ್ಪಿಸುವುದು ಇದರ ಉದ್ದೇಶ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ಕೇರಳದಂಥ ರಾಜ್ಯಗಳಿಂದ ಸಾಕಷ್ಟು ಎನ್ಜಿಒಗಳು ಅಸ್ಸಾಂಗೆ ಬರ್ತಾ ಇವೆ. ಇಲ್ಲಿ ಭೂಮಿಯನ್ನು ಖರೀದಿಸುತ್ತಿವೆ ಮತ್ತು ದೇಶದ ಸುರಕ್ಷತೆಗೆ ಹಾನಿ ತರಬಹುದಾದಂತಹ ಚಟುವಟಿಕೆಗಳು ನಡೀತಾ ಇರುವುದನ್ನು ನಾವು ಗಮನಿಸುತ್ತಿದ್ದೇವೆ. ಅಸ್ಸಾಂನ ಎನ್‌ಜಿಒಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ. ಆದರೆ ಹೊರಗಿನಿಂದ ಬಂದವರು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವುದು ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸುವುದು ಮೆಡಿಕಲ್ ಕಾಲೇಜ್ ಇತ್ಯಾದಿಗಳನ್ನು ಸ್ಥಾಪಿಸುವುದಕ್ಕಾಗಿ ಭೂಮಿ ಖರೀದಿಸುತ್ತಿದ್ದಾರೆ. ಆದ್ದರಿಂದ ಇವರ ಮೇಲೆ ಗಮನ ಇಡಬೇಕಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಭೂಮಿಯನ್ನು ಖರೀದಿಸುವುದು ಅಥವಾ ಮಾರುವುದಕ್ಕಿಂತ ಮೊದಲು ಅದರ ಮಾಹಿತಿಗಳನ್ನು ಹಂಚಿಕೊಂಡು ಸರ್ಕಾರದ ಅನುಮತಿಯನ್ನು ಪಡೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.