ಮಹಿಳೆ ಮನೆಯೊಳಗಿರಲಿ ಎಂದ ಕಮ್ಯೂನಿಸ್ಟ್ ಚೀನಾ

0
268

ಸನ್ಮಾರ್ಗ ವಾರ್ತೆ

✍️ ಎಂ.ಎಂ. ಅಕ್ಬರ್
ಅನುವಾದ: ಅಬೂ ಸಫ್ವಾನ್

ಚೀನಾದ ಮಹಿಳೆಯರು ಮನೆಯಲ್ಲಿದ್ದರೆ ಸಾಕು, ವಿವಾಹವಾಗಿ ಮಕ್ಕಳನ್ನು ಹೆಡೆದು ಅವರನ್ನು ಲಾಲಿಸಿ ಪೋಷಿಸಿ ವೃದ್ಧರ ಪರಿಪಾಲನೆಯಲ್ಲಿ ನಿರತರಾಗಿರಬೇಕು- ಇದು ಇತ್ತೀಚೆಗೆ ಬೀಜಿಂಗ್‌ನಲ್ಲಿ ಮುಕ್ತಾಯವಾದ 13ನೇ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್‌ನಲ್ಲಿ ಚೀನಾದ ಅಧ್ಯಕ್ಷ ಶೀ ಚಿನ್‌ಪಿಂಗ್ ಹೊರಡಿಸಿದ ಪ್ರಸ್ತಾವನೆ.

ಯುವತಿ, ಯುವಕರು ವಿವಾಹಕ್ಕೆ ಸಿದ್ಧರಾಗಬೇಕು. ಮಕ್ಕಳುಂಟಾಗಬೇಕು. ಕುಟುಂಬದ ಮಹತ್ವವನ್ನು ಯುವ ತಲೆಮಾರುಗಳಿಗೆ ತಿಳಿಸಿಕೊಡಬೇಕು. ವೃದ್ದರ ಪರಿಚಾರಿಕೆಗೆ ಮನೆಯಲ್ಲಿ ವ್ಯವಸ್ಥೆ ಮಾಡಬೇಕು.”

ಈ ಮಾತುಗಳನ್ನು ಹೇಳುತ್ತಿರುವವರಾರು? ಜಗತ್ತಿನ ಅತೀ ದೊಡ್ಡ ಕಮ್ಯೂನಿಸ್ಟ್ ರಾಷ್ಟ್ರದ ಅಧ್ಯಕ್ಷರಾಗಿದ್ದಾರೆ.

1979ರಿಂದ ಒಂದೇ ಮಗು ಸಾಕು ಎಂಬ ನಿಯಮವನ್ನು ಹೇರಿದ ಚೀನಾದ ಮಹೋನ್ನತ ಸ್ಥಾನದಲ್ಲಿರುವವರು. ಎರಡನೇ ಮಗುವಿಗೆ ಜನ್ಮವಿತ್ತರೆ 48 ಲಕ್ಷ ದಂಡ ತೆರಬೇಕಾಗಿತ್ತು. ಬಲವಂತದಿಂದ ಭ್ರೂಣ ಹತ್ಯೆ ನಡೆಸುತ್ತಿದ್ದ ಅಧಿಕಾರಿಗಳಿದ್ದ ರಾಷ್ಟ್ರವದು. 1979- 2011ರ ನಡುವೆ 40 ಕೋಟಿ ಜನನವನ್ನು ತಡೆಯಲು ಸಾಧ್ಯವಾಗಿದೆ ಎಂದು ಅವರು ಅಭಿಮಾನ ಪಡುತ್ತಿದ್ದರು. ಗರ್ಭಸ್ಥ ಶಿಶುವನ್ನು ಆರು ತಿಂಗಳುಗಳೊಳಗೆ ಕೊಲ್ಲಲು ಇಲ್ಲಿ ಅನುಮತಿಯಿತ್ತು. ಪ್ರತೀ ಗಂಟೆಗೊಮ್ಮೆ 1500 ಗರ್ಭಸ್ಥ ಶಿಶುಗಳ ಹತ್ಯೆ ನಡೆಯುತ್ತಿತ್ತು. ಅಂದರೆ 33.6 ಕೋಟಿ ಭ್ರೂಣ ಹತ್ಯೆ. 19.6 ರಷ್ಟು ಗರ್ಭ ನಿರೋಧಕ ಶಸ್ತ್ರ ಕ್ರಿಯೆಗಳು ನಡೆದಿತ್ತು. ಜನಸಂಖ್ಯಾ ನಿಯಂತ್ರಣದಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿದ್ದೇವೆಂಬ ಅಹಂಕಾರವೂ ಇತ್ತು!

ಅಂದು ಅವರು ಜನಸಂಖ್ಯೆಯನ್ನೇ ಬಹಳ ದೊಡ್ಡ ಸಮಸ್ಯೆಯಾಗಿ ಪರಿಗಣಿಸಿದ್ದರು. ಅದು ಅಭಿವೃದ್ದಿಗೆ ಮಾರಕವೆಂದು ಪರಿಗಣಿಸಿದ್ದರು. ಅಭಿವೃದ್ದಿಯ ಕುರಿತು ನಾಸ್ತಿಕತೆ ಅವರಿಗೆ ಅದನ್ನು ಕಲಿಸಿತ್ತು. `ದಾರಿದ್ರ್ಯದ ಭಯದಿಂದ ನೀವು ಮಕ್ಕಳನ್ನು ವಧಿಸಬೇಡಿರಿ. ನಿಮಗೂ ಅವರಿಗೂ ಆಹಾರವನ್ನು ನೀಡುವವರು ನಾವು’ ಎಂಬ ದೇವನ ಕರೆಗೆ ಅವರು ಕಿವಿ ಕೊಡಲಿಲ್ಲ. ಅದರ ಫಲ ಅನುಭವಿಸಿದರು. ಈಗ ಜ್ಞಾನೋದಯವಾಗಿದೆ. ಅವರು ಅಳುತ್ತಿದ್ದಾರೆ. ಯುವತಿ ಯುವಕರಲ್ಲಿ ಭಿನ್ನವಿಸುತ್ತಿದ್ದಾರೆ. ಮಕ್ಕಳನ್ನು ಮಾಡಿ, ರಾಷ್ಟ್ರವನ್ನು ಕಾಪಾಡಿ ಎಂದು ಗೋಗರೆಯುತ್ತಿದ್ದಾರೆ.

ಈ ಪಾಪ ಪ್ರಜ್ಞೆ ಮೂಡಲು ಕಾರಣವೇನಿರಬಹುದು? ಒಂದೇ ಮಗುವಿರಲಿ ಎಂಬ ನೀತಿ ಹೊರಡಿಸುವಾಗ ಚೀನಾದ ಪ್ರಜೆಗಳ ಸರಾಸರಿ ಪ್ರಾಯ 22.4 ಆಗಿತ್ತು. ಅದು 2050 ಆಗುವಾಗ 53.4 ಕ್ಕೆ ತಲುಪಬಹುದು ಎಂದು ವಿಶ್ವ ಸಂಸ್ಥೆ ತಿಳಿಸಿದೆ. ಸರಾಸರಿಯಾಗಿ ಚೀನಾದವರ ವಯಸ್ಸು ಹೆಚ್ಚಾಗುತ್ತಿದೆ ಎಂದು ಇದರ ಅರ್ಥ. ಅಲ್ಲಿ ಕಠಿಣವಾಗಿ ದುಡಿಯುವವರ ಸಂಖ್ಯೆ ಕ್ಷೀಣಿಸುತ್ತಿದೆ. ವೃದ್ದರ ಸಂಖ್ಯೆ ವೃದ್ಧಿಸುತ್ತಿದೆ. 1980ರಲ್ಲಿ 65ಕ್ಕಿಂತ ಹೆಚ್ಚಿನ ಪ್ರಾಯದವರು ಶೇಕಡಾ 5.3ರಷ್ಟಿದ್ದರು. 2050ರಲ್ಲಿ ಅದು ಶೇಕಡಾ 29.3ಕ್ಕೆ ತಲುಪಬಹುದು 1980ರಲ್ಲಿ 14 ವಯಸ್ಸಿಗಿಂತ ಕೆಳಗಿನವರು 35.5ರಷ್ಟಿದ್ದರೆ 2050 ಆಗುವಾಗ ಅದು 9.1 ಶೇಕಡಾದತ್ತ ತಲುಪುವುದು. 15 ಮತ್ತು 64 ವರ್ಷದವರ ನಡುವೆ ಕಠಿಣ ದುಡಿಮೆ ಮಾಡುವವರು 1982ಕ್ಕಿಂತ 2011 ತಲುಪುವಾಗ ಶೇಕಡಾ 62.6 ರಿಂದ 34.4ಕ್ಕೆ ಕುಸಿತ ಕಂಡಿದೆ. ಪರಿಶ್ರಮ ಪಡುವವರನ್ನು ಆಶ್ರಯಿಸಿರುವ ವೃದ್ದರ ಅನುಪಾತ 1980 ರಲ್ಲಿ 8.7 ಆಗಿತ್ತು. 2050 ಆಗುವಾಗ ಅದು 47.6 ತಲುಪುತ್ತದೆ. ಚೀನದಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ವೃದ್ಧರಾಗುವಾಗ ದುಡಿಯಲು ಯಾರೂ ಇಲ್ಲದಾಗಿ ತೊಂದರೆ ಅನುಭವಿಸಬೇಕಾಗುತ್ತದೆ. ಇಂದಿನ ಚೀನಾದ ಮನೆಯ ವಾಸ್ತವ ಸ್ಥಿತಿ ಹೇಗಿದೆಯೆಂದರೆ ಹನ್ನೆರಡು ವೃದ್ಧರು, ಇಬ್ಬರು ಯುವಕರು ಒಂದು ಮಗು. ಅದು ಹಾಗೆಯೇ ಮುಂದುವರಿದರೆ ನಾಡು ಪತನಗೊಂಡಂತೆ.

ದೈವದತ್ತವಾದ ಧಾರ್ಮಿಕತೆಯನ್ನು ಕಿತ್ತೆಸೆದುದರ ಪರಿಣಾಮವಿದು. ಇದು ಆಡಳಿತಗಾರರನ್ನು ಮರು ಚಿಂತನೆಗೆ ಪ್ರೇರೇಪಿಸಿದೆ. ಕಮ್ಯೂನಿಸ್ಟ್ ಸರಕಾರ ಒಂದೇ ಮಗು ಸಾಕು ಎಂಬ ಆದೇಶ ಹೊರಡಿಸಿದಾಗ ಯುವಕ ಯುವತಿಯರು ಕುಟುಂಬ ಮಕ್ಕಳು ಇಲ್ಲದೆ ಅನಿಯಂತ್ರಿತ ಸುಖಲೋಲುಪರಾದರು. ಇಂದು ಅಲ್ಲಿ ತಾಯಿಯಿಲ್ಲ, ತಂದೆಯಿಲ್ಲ, ಕುಂಟುಂಬಗಳ ಕೊರತೆಯೂ ಇದೆ. ಆದರೆ ಸೆಕ್ಸ್ ಯಥೇಚ್ಚವಾಗಿ ನಡೆಯುತ್ತಿದೆ. ಎಲ್ಲಿ ಯಾರಿಗೂ ಲೈಂಗಿಕತೆ ನಡೆಸಬಹುದು. ಅದರ ದುಷ್ಪರಿಣಾಮವನ್ನು ಅವರು ಇಂದು ಅನುಭವಿಸುತ್ತಿದ್ದಾರೆ.

ಅನುಭವದಿಂದ ಅವರಿಗೆ ವಸ್ತುಸ್ಥಿತಿ ಅರ್ಥವಾಗಿದೆ. ಪತನವಾದ ಕುಟುಂಬ ಮರುಸ್ಥಾಪನೆಗೆ ಮುಂದಾಗಿದ್ದಾರೆ. ಚೀನಾದಿಂದ ನಮಗೆ ಕಲಿಯಲು ಬಹಳಷ್ಟು ಪಾಠವಿದೆ. ಭಾರತ ಇಂದು ಜನ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿದೆ. 142.86 ಕೋಟಿ ಭಾರತೀಯರಿದ್ದಾರೆ. ಚೀನಾಕ್ಕಿಂತ 29 ಲಕ್ಷ ಅಧಿಕವಾಗಿದೆ. ಮಾನವ ಸಂಪತ್ತು ದೇಶದ ನಿಜವಾದ ಸಂಪತ್ತು. ಅದನ್ನು ಸರಿಯಾಗಿ ನಿಭಾಯಿಸಿದರೆ ನಮಗೆ ಜಗತ್ತಿನಲ್ಲಿ ಉನ್ನತ ಸ್ಥಾನ ತಲುಪಲು ಸಾಧ್ಯವಾಗಬಹುದು. ಅದಕ್ಕೆ ಆರೋಗ್ಯವಂತರಾದ ಯುವ ಹೊಸ ತಲೆಮಾರು ಅಗತ್ಯವಾಗಿದೆ. ಅದಕ್ಕೆ ಪೋಷಕರ ಅಗತ್ಯವಿದೆ. ಉತ್ತಮ ಮಾತೆಯರುಬೇಕು. ಜವಾಬ್ದಾರಿಯುತ ತಂದೆಯೂ ಬೇಕು. ಕುಟುಂಬ ವ್ಯವಸ್ಥೆಯನ್ನು ಪತನಗೊಳಿಸುವ ಸುಧಾರಣಾವಾದಿಗಳು ಇಂದು ನಮ್ಮ ವಿದ್ಯಾ ಸಂಸ್ಥೆಯಲ್ಲಿ ಸಕ್ರಿಯವಾಗಿದ್ದಾರೆ. ಹೆಣ್ಮಕ್ಕಳ ಮಾರಾಟ ದಂಧೆಯಿಂದ ಹಿಡಿದು ಕುಟುಂಬದಿಂದ ಲೈಂಗಿಕತೆಯಿಂದ ಸ್ವತಂತ್ರಗೊಳಿಸುವ ಶ್ರಮವೂ ನಡೆಯುತ್ತಿದೆ.

ವಿವಾಹದೊಂದಿಗೆ ನಿರಾಸಕ್ತಿ, ಅನೈತಿಕ ಸಂಬಂಧದಲ್ಲಿ ಆಸಕ್ತಿ, ಸಲಿಂಗ ಕಾಮಕ್ಕೆ ಅನುಮತಿ ಮುಂತಾದವುಗಳು ಕುಟುಂಬದಿಂದ ದೂರವಿದ್ದು ಉದ್ಯೋಗದಲ್ಲಿ ನಿರತರಾಗುವುದು ಮುಂತಾದವುಗಳು ಕುಟುಂಬ ವ್ಯವಸ್ಥೆಯನ್ನು ಪತನಗೊಳಿಸುವ ಶ್ರಮವಾಗಿದೆ. ನಿಜವಾಗಿ ಅವರು ಒಂದು ಸಮೂಹವನ್ನೇ ಪತನ ಗೊಳಿಸುತ್ತಿದ್ದಾರೆ. ಈ ವಾಸ್ತವ ಅರಿಯಲು ತಡವಾದರೆ ನಮಗೂ ನಮ್ಮ ಹೊಸ ತಲೆಮಾರುಗಳ ಮುಂದೆ ಭಿನ್ನವಿಸಬೇಕಾಗಿ ಬಂದೀತು. ಮಕ್ಕಳನ್ನು ಮಾಡಿ ನಮ್ಮ ಕುಟುಂಬವನ್ನು ಕಾಪಾಡಿರಿ ಎಂಬ ಆ ಕರೆಯು ಅಂದು ಅರಣ್ಯರೋದನವಾಗಬಹುದು. ಆದ್ದರಿಂದ ನಾವು ಇಂದು ನಮ್ಮ ದೇಶವನ್ನು ಕಾಪಾಡಬೇಕು.

ಕೊನೆಯದಾಗಿ: ವಿವಾಹವಾಗಿ ಮಕ್ಕಳನ್ನು ಹೆತ್ತು ವೃದ್ಧರನ್ನು ಪರಿಪಾಲಿಸಿ ಈ ದೇಶದ ಮಹಿಳೆಯರು ಬದುಕಬೇಕೆಂದು ಕರೆ ಕೊಟ್ಟದ್ದು ಅಫ್ಗಾನ್ ಕಣಿವೆಗಳ ಮುಲ್ಲಾಗಳು ಆಗದಿದ್ದುದು ಪುಣ್ಯ. ಹಾಗೇ ಆಗಿದ್ದಿದ್ದರೆ ಇಸ್ಲಾಮನ್ನು ಕುರ್‌ಆನನ್ನು ಪ್ರವಾದಿವರ್ಯರನ್ನೂ(ಸ) ಚರ್ಚೆಗಳಲ್ಲಿ ಎಳೆದು ತಂದು ಚಾನೆಲ್‌ಗಳು ನಿರಂತರ ಕಾರ್ಯಕ್ರಮ ಪ್ರಕಟಿಸಿ ಸಂಭ್ರಮಿಸುತ್ತಿದ್ದುವು. ಸೋಶಿಯಲ್ ಮೀಡಿಯಾದಲ್ಲಿ ಇಸ್ಲಾಮೀ ತಜ್ಞರು ಲೈಕ್ಸ್, ವೀಕ್ಷಕರ ಸಂಖ್ಯೆ ವೃದ್ದಿಸಲು ಅದೊಂದು ಅವಕಾಶವಾಗುತ್ತಿತ್ತು.