ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿಯ ವಿರುದ್ಧ ಹೋರಾಡಲು ಐದು ಲಕ್ಷ ಸೈಬರ್ ಹೋರಾಟಗಾರರನ್ನು ಸೃಷ್ಟಿಸಲು ಕಾಂಗ್ರೆಸ್ ಸಿದ್ಧವಾಗಿದೆ.
ಇದಕ್ಕಾಗಿ ಜಾಯಿನ್ ಕಾಂಗ್ರೆಸ್ ಸೋಶಿಯಲ್ ಮೀಡಿಯ ಅಭಿಯಾನವನ್ನು ದೇಶಾದ್ಯಂತ ಸೋಮವಾರ ಚಾಲನೆ ನೀಡಿದೆ. ಪೇಯ್ಡ್ ಟ್ರೋಲ್ ಆರ್ಮಿ ದೇಶದ ದ್ವೇಷ, ವಿದ್ವೇಷ ಪ್ರಚಾರ ನಡೆಸುತ್ತಿದ್ದು ಅದನ್ನು ತಡೆಯಬೇಕಾದ ಸಮಯ ಇದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ನಿಮ್ಮ ಶಾಲೆಗಳಲ್ಲಿ ಕಾಲೇಜುಗಳಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ಉಪಟಳ ನಡೆಯುತ್ತಿರುವುದು ನಿಮಗೆ ಗೊತ್ತಿದೆ. ಭಾರತ ಎಂಬ ಆಶಯದ ವಿರುದ್ಧ ದಾಳಿ ನಡೆಯುವುದನ್ನು ನಿಮಗೆ ಕಾಣಲು ಸಾಧ್ಯವಿದೆ. ದಿಲ್ಲಿಯ ಹೊರಗೆ ನೋಡಿ, ರೈತರಿಗೆ ಏನು ಸಂಭವಿಸುತ್ತಿದೆ. ದೇಶದ ಈ ಯುದ್ಧದ ಬೆನ್ನುಹುರಿ ಟ್ರೋಲ್ ಆರ್ಮಿಯಾಗಿದೆ. ಪ್ರಗತಿಪರ ಮೌಲ್ಯಗಳು ಮತ್ತು ಶಾಂತಿ ಸಹನೂಭೂತಿ, ಒಮ್ಮತ, ಪ್ರೀತಿ ಸಂರಕ್ಷಿಸಲು ನಮಗೆ ಯೋಧರ ಅಗತ್ಯವಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಇದು ಸತ್ಯದ ಸೇನೆಯಾಗಿದೆ. ಭಾರತದ ಆಶಯಕ್ಕೆ ರಕ್ಷಣೆ ನೀಡುವ ಸೇನೆಯಾಗಿದೆ. ವೆಬ್ಸೈಟ್ ಮೂಲಕ ಟೋಲ್ ಫ್ರೀ ನಂಬರ್ ವಾಟ್ಸಪ್ ಮೂಲಕ ಜನರಿಗೆ ಇದರಲ್ಲಿ ಸೇರಬಹುದು ಎಂದು ಎಐಸಿಸಿ ಮಾಧ್ಯಮ ಮುಖ್ಯಸ್ಥ ರೋಹನ್ ಗುಪ್ತ, ಎಐಸಿಸಿ ಇನ್ ಚಾರ್ಜ್ ಪವ್ ಕುಮಾರ್ ಬನ್ಸಾಲ್ ವಕ್ತಾರ ತಿಳಿಸಿದರು.












