ಲಂಚ ಪ್ರಕರಣ: ಸಿಬಿಐ ಮಾಜಿ ನಿರ್ದೇಶಕ ರಾಕೇಶ್ ಆಸ್ತಾನಾರಿಗೆ ಕ್ಲೀನ್ ಚಿಟ್

0
514

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಲಂಚ ಹಗರಣದಲ್ಲಿ ಸಿಬಿಐ ಮಾಜಿ ಸ್ಪೆಶಲ್ ಡೈರಕ್ಟರ್ ರಾಕೇಶ್ ಆಸ್ತಾನರಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ ಎಂದು ವರದಿಯಾಗಿದೆ. ವಂಚನೆ ಪ್ರಕರಣದಲ್ಲಿ ಔಷಧ ಕಂಪೆನಿಯಾದ ಸ್ಟರ್ಲಿಂಗ್ ಬಯೊಟೆಕ್‍ನಿಂದ ಲಂಚ ಪಡೆದಿದ್ದರು ಎಂದು ಅವರ ವಿರುದ್ಧ ಕೇಸು ದಾಖಲಾಗಿತ್ತು. ಸಾಕಷ್ಟು ಸಾಕ್ಷ್ಯಗಳ ಅಭಾವದಲ್ಲಿ ಆಸ್ತಾನರನ್ನು ಖುಲಾಸೆಗೊಳಿಸಲಾಗಿದೆ ಎಂದು ಎನ್‍ಡಿಟಿವಿ ವರದಿ ಮಾಡಿದೆ.

ಎರಡನೆ ಬಾರಿ ತನಿಖಾ ಏಜೆನ್ಸಿಯಿಂದ ರಾಕೇಶ್ ಆಸ್ತಾನ ಕ್ಲೀನ್ ಚಿಟ್ ನೀಡಲಾಗುತ್ತಿದೆ. 2018ರಲ್ಲಿ ಸಿಬಿಐಯಿಂದ ವಜಾಗೊಳಿಸುವವರೆಗೆ ಅವರ ವಿರುದ್ಧ ವಿವಾದಗಳು ಸುತ್ತುವರಿದಿದ್ದವು. ಈಗ ಅವರು ಬಿಎಸ್‍ಎಫ್ ಮುಖ್ಯಸ್ಥರಾಗಿದ್ದಾರೆ.

ಆಸ್ತಾನರಿಗೆ ಕ್ಲೀನ್ ಚಿಟ್ ನೀಡುವ ಫೈಲಿಗೆ ಸಿಬಿಐ ನಿರ್ದೇಶಕ ಸ್ಥಾನದಿಂದ ಕಳೆದ ವಾರ ನಿವೃತ್ತರಾದ ಆರ್‌.ಕೆ ಶುಕ್ಲಾ ಜನವರಿಯಲ್ಲಿ ಸಹಿ ಹಾಕಿದ್ದಾರೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ತನಿಖಾ ತಂಡ ಮತ್ತು ಮೇಲ್ನೋಟ ವಹಿಸಿದ ಅಧಿಕಾರಿಗಳ ಜಂಟಿ ತೀರ್ಮಾನದ ಆಧಾರದಲ್ಲಿ ಆಸ್ತಾನರಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ವರದಿ ತಿಳಿಸಿದೆ.