ಬಿಜೆಪಿ ಬಿಟ್ಟು ಮಹಾಸಖ್ಯಕ್ಕೆ ಬನ್ನಿ: ನಿತೀಶ್‍ರನ್ನು ಸ್ವಾಗತಿಸಿದ ಕಾಂಗ್ರೆಸ್

0
1225

ಸನ್ಮಾರ್ಗ ವಾರ್ತೆ

ಪಾಟ್ನ,ನ.11: ಸುಮಾರು 20 ಗಂಟೆಗಳ ಕಾಲ ನಡೆದ ಮ್ಯಾರಥಾನ್ ಮತ ಎಣಿಕೆಯಲ್ಲಿ ಎನ್‍ಡಿಎ ಬಿಹಾರದಲ್ಲಿ ಅಧಿಕಾರಕ್ಕೆ ಬಂದಿದ್ದರೂ ವಿಧಾನಸಭೆಯಲ್ಲಿ ಬಿಜೆಪಿ ಜೆಡಿಯುವಿಗಿಂತ ಕಡಿಮೆ ಸ್ಥಾನ ಪಡೆದುಕೊಂಡಿದೆ. ಜೆಡಿಯು 43 ಮತ್ತು ಬಿಜೆಪಿ 74 ಸೀಟುಗಳನ್ನು ಗಳಿಸಿದೆ. ಇದೇ ವೇಳೆ ನಿತೀಶ್ ಕುಮಾರ್‌ರ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ಘೋಷಿಸಿದೆ.

ಆದರೆ ಎನ್‍ಡಿಎ ಸಖ್ಯ ತೊರೆದು ಮಹಾಸಖ್ಯಕ್ಕೆ ಸೇರುವಂತೆ ನಿತೀಶ್ ಕುಮಾರ್‌ರಿಗೆ ಕಾಂಗ್ರೆಸ್ ಆಮಂತ್ರಣ ನೀಡಿದೆ. ಹಿರಿಯ ಕಾಂಗ್ರೆಸ್ ನಾಯಕ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಜೆಡಿಯುವಿಗೆ ಅಂಗಣ ಬದಲಾಯಿಸಲು ಮನವಿ ಮಾಡಿದ್ದಾರೆ. ಬಿಜೆಪಿ, ಸಂಘಪರಿವಾರ ಅಮರ್‍ಬೇಲ್ ಮರದಂತೆ. ಬೇರೆಯಾವುದನ್ನೂ ಬೆಳೆಯಲು ಬಿಡದ ವೃಕ್ಷವದು. ನಿತೀಶ್ ಜಿ…ಲಾಲುಜಿ ನಿಮ್ಮೊಂದಿಗೆ ಹೋರಾಡಿದರು. ಜೈಲಿಗೆ ಹೋದರು. ಬಿಜೆಪಿ ಸಂಘಪರಿವಾರ ಸಿದ್ಧಾಂತ ತೊರೆದು ತೇಜಸ್ವಿಯನ್ನು ಆಶೀರ್ವದಿಸಿ ಎಂದು ದಿಗ್ವಿಜಯ ಸಿಂಗ್ ಟ್ವೀಟ್ ಮಾಡಿದರು.

ರಾಮ್ ವಿಲಾಸ್ ಪಾಸ್ವಾನ್‍ರ ಪರಂಪರೆಯನ್ನು ಕೊನೆಗೊಳಿಸಿದ ಬಿಜೆಪಿ ನಿತೀಶ್‍ರ ಗುಣಮಟ್ಟವನ್ನು ಕಡಿಮೆ ಮಾಡಿತು. ಇಂದಿನವರೆಗೆ ಎಲ್ಲ ಸಖ್ಯ ಸರಕಾರಗಳ ಸೋಶಲಿಸ್ಟ್ ಜಾತ್ಯತೀತ ಸಿದ್ಧಾಂತದ ರಾಜಕೀಯವನ್ನು ದುರ್ಬಲಗೊಳಿಸಿ ಅವರ ನೆಲೆಯನ್ನು ಉತ್ತಪಡಿಸಿದೆ. ಚುನಾವಣೆಯಲ್ಲಿ ಜೆಡಿಯುವನ್ನು ಬಿಜೆಪಿ ಹೈಜಾಕ್ ಮಾಡಿದೆ ಎಂದ ಅವರು ಇನ್ನೊಂದು ಟ್ವೀಟ್‍ನಲ್ಲಿ ಹೇಳಿದ್ದಾರೆ.

ಸೈದ್ಧಾಂತಿಕ ಹೋರಾಟದಲ್ಲಿ ರಾಹುಲ್ ಗಾಂಧಿ ದೇಶದಲ್ಲಿ ಏಕೈಕ ನಾಯಕನಾಗಿದ್ದಾರೆ. ರಾಜಕೀಯವೂ ಸಿದ್ಧಾಂತವಾಗಿದೆ ಎಂದು ಎನ್‍ಡಿಎಯ ಸಖ್ಯ ಪಕ್ಷಗಳು ಅರಿಯಬೇಕು. ಸಿದ್ಧಾಂತವನ್ನು ತೊರೆದು ಸ್ವಾರ್ಥಕ್ಕಾಗಿ ರಾಜಿ ಮಾಡಿಕೊಳ್ಳುವ ಯಾವ ವ್ಯಕ್ತಿಯೂ ರಾಜಕೀಯದಲ್ಲಿ ದೀರ್ಘಕಾಲ ಬಾಳುವುದಿಲ್ಲ ಎಂದು ಅವರು ಹೇಳಿದರು.

2015ರಲ್ಲಿ ಮಹಾಸಖ್ಯದಲ್ಲಿ ಸ್ಪರ್ಧಿಸಿ 71 ಸೀಟುಗಳಲ್ಲಿ ಜೆಡಿಯು ಗೆದ್ದಿತ್ತು. ನಂತರ ಮಹಾಸಖ್ಯಕ್ಕೆ ಕೈಕೊಟ್ಟು ಬಿಜೆಪಿಯೊಂದಿಗೆ ಹೋಗಿತ್ತು. ಬಿಹಾರದಲ್ಲಿ ತಮ್ಮ ಪಂಚಾಗವನ್ನು ವಿಸ್ತರಿಸಲು ನಿತೀಶ್‍ರೊಂದಿಗೆ ಬಿಜೆಪಿ ಕೈಜೋಡಿಸಿತು. ಇದಕ್ಕಾಗಿ ಎಲ್‍ಜೆಪಿಯ ಚಿರಾಗ್ ಪಾಸ್ವಾನ್‍ರನ್ನು ರಂಗಕ್ಕಿಳಿಸಿತ್ತು ಎನ್ನಲಾಗಿದೆ. ಬಿಜೆಪಿ ತಮ್ಮ ಬೆನ್ನಿಗೆ ಇರಿದಿದೆ ಎಂದು ಬಿಜೆಪಿ ನಾಯಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ದೊಡ್ಡ ಪಕ್ಷವಾದ್ದರಿಂದ ಜೆಡಿಯುವಿನಿಂದ ಪಕ್ಷಾಂತರ ನಡೆಯುವ ಹೆದರಿಕೆ ಕೂಡ ನಿತೀಶ್‍ರಲ್ಲಿದೆ. ಅಧಿಕಾರಕ್ಕಾಗಿ ಸಖ್ಯವನ್ನು ಬದಲಾಯಿಸಲು ಯಾವುದೇ ಹಿಂಜರಿಕೆಯಿಲ್ಲದ ನಿತೀಶ್ ಇಂತಹದೊಂದು ಪರಿಸ್ಥಿತಿಯಲ್ಲಿ ಯಾವ ತೀರ್ಮಾನಕೈಗೊಳ್ಳುವರೆಂದು ಕುತೂಹಲವಿದೆ.